ನಾಳೆ ವಾಲಿಬಾಲ್ ಪಂದ್ಯಾವಳಿ
ಹಾನಗಲ್ಲ: ಸಾಂವಸಗಿ ಗ್ರಾಮದಲ್ಲಿ ಲಯನ್ಸ್ ಸ್ಪೋರ್ಟ್ಸ್ ಕ್ಲಬ್ನ ಆಶ್ರಯದಲ್ಲಿ ರಾಜ್ಯ ಮಟ್ಟದ ಹೊನಲು ಬೆಳಕಿನ ಮುಕ್ತ ವಾಲಿಬಾಲ್ ಪಂದ್ಯಾವಳಿ ಅ. 26ರ ಸಾಯಂಕಾಲ ನಡೆಯಲಿದೆ. ಪ್ರಥಮ ಬಹುಮಾನ ರು. 30,001, ದ್ವಿತೀಯ ರು. 20,001, ತೃತೀಯ ರು. 10,001, ಟ್ರೋಫಿ ನೀಡಲಾಗುತ್ತಿದೆ. ಆಸಕ್ತ ತಂಡಗಳು ಮೊ. 9980322797, 9741573444, 7760827963 ಸಂಪರ್ಕಿಸಲು ಕೋರಲಾಗಿದೆ. ಹೋತನಹಳ್ಳಿ ಮಠದ ಶಂಭುಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಶಾಸಕ ಮನೋಹರ ತಹಶೀಲ್ದಾರ ಅಧ್ಯಕ್ಷತೆ ವಹಿಸುವರು. ನೆಹರು ಯುವ ಸಂಘಟನೆಯ ಮಹಾನಿರ್ದೆಶಕ ಸಲೀಂ ಅಹ್ಮದ್ ಪಂದ್ಯಾವಳಿ ಉದ್ಘಾಟಿಸುವರು. ಸಂಸದ ಶಿವಕುಮಾರ ಉದಾಸಿ, ಮಾಜಿ ಸಚಿವ ಸಿ.ಎಂ. ಉದಾಸಿ, ತಾಪಂ ಸದಸ್ಯೆ ಸುಮಂಗಲಾ ದೊಡ್ಡಮನಿ, ಶಿವಮೊಗ್ಗ ನಗರಸಭೆ ಪೌರಾಯುಕ್ತ ಮೂಕಣ್ಣ ಕರಿಭೀಮಣ್ಣನವರ, ದಾವಣಗೆರೆಯ ವೀರಣ್ಣ ಬಾಗೇವಾಡಿ, ಸಿಪಿಐ ಬಿ.ಎಸ್. ಮಂಟೂರ, ಪಿಎಸ್ಐ ಮಹದೇವ ಯಲಿಗಾರ, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಎಂ. ಪಠಾಣ ಪಾಲ್ಗೊಳ್ಳುವರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

