ಪಟನಾ ಸ್ಫೋಟ: ಬಿಜೆಪಿ ಪ್ರತಿಭಟನೆ
ರಾಣಿಬೆನ್ನೂರು: ಪಟನಾದಲ್ಲಿ ಭಾನುವಾರ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಹಾಗೂ ಬಿಹಾರದ ಮುಖ್ಯಮಂತ್ರಿ ನಿತೀಶಕುಮಾರ ಭಾಗವಹಿಸಿದ್ದ 'ಹೂಂಕಾರ' ರ್ಯಾಲಿ ಪೂರ್ವದಲ್ಲಿ ಏಳು ಕಡೆ ನಡೆದ ಬಾಂಬ್ ಸ್ಫೋಟಕ್ಕೆ ಕಾರಣರಾದವರನ್ನು ಬಂಧಿಸಬೇಕು ಎಂದು ಆಗ್ರಹಿಸಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ನಗರದ ಅಂಚೆ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಯುವ ಮೋರ್ಚಾ ಅಧ್ಯಕ್ಷ ಕಿರಣ ಅಂಗಡಿ ಮಾತನಾಡಿ, ನರೇಂದ್ರ ಮೋದಿ ಪ್ರಧಾನಿ ಆಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ದೇಶದ ಜನತೆಯೇ ಅವರನ್ನು ಮನಸಾರೆ ಒಪ್ಪಿಕೊಂಡಿದ್ದು, ಚುನಾವಣೆಯಲ್ಲಿ ಮತ ನೀಡುವುದೊಂದೇ ಬಾಕಿ ಇದೆ. ಲೋಕಸಭೆ ಚುನಾವಣೆಯಲ್ಲಿ ಪಕ್ಷ, ಜಾತಿ ಭೇದ ಮರೆತು ಬಿಜೆಪಿ ಗೆಲ್ಲಿಸಲು ಜನತೆ ತುದಿಗಾಲ ಮೇಲೆ ನಿಂತಿದ್ದಾರೆ. ಮೋದಿ ಅವರನ್ನು ಬಿಜೆಪಿ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿದ ಬಳಿಕ ವಿರೋಧ ಪಕ್ಷಗಳಲ್ಲಿ ನಡುಕ ಹುಟ್ಟಿದೆ. ಮೋದಿ ಕಾರ್ಯಕ್ರಮಗಳಲ್ಲಿ ಜನ ಭಾಗವಹಿಸುವುದನ್ನು ತಡೆಗಟ್ಟಲು ಇಂಥ ದುಷ್ಕೃತ್ಯಕ್ಕೆ ಕೆಲವರು ಮುಂದಾಗಿದ್ದಾರೆ. ಬಾಂಬ್ ಬೆದರಿಕೆಯಿದ್ದರೂ ಜನ ರ್ಯಾಲಿಯಲ್ಲಿ ಭಾಗವಹಿಸಿದರು. ವಿಪಕ್ಷಗಳು ಟೀಕಿಸುವುದನ್ನು ಬಿಡಬೇಕು ಎಂದರು.
ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ವೀರಣ್ಣ ಅಂಗಡಿ, ನಗರಸಭೆ ಮಾಜಿ ಅಧ್ಯಕ್ಷ ಬಸವರಾಜ ಲಕ್ಷ್ಮೇಶ್ವರ, ಸಂಕಪ್ಪ ಮಾರನಾಳ, ಪ್ರಕಾಶ ಮಣೇಗಾರ, ವಿಶ್ವನಾಥ ಹೊಳೆಬಾಗಿಲ, ಯುವ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ತಳವಾರ, ನ್ಯಾಯವಾದಿ ರಾಜೇಂದ್ರ ಬಸೇನಾಯ್ಕರ, ಪ್ರವೀಣ ಕೋರ್ಪಡೆ ಮಾತನಾಡಿ, ಬಾಂಬ್ ಸ್ಫೋಟದಿಂದ ಮಡಿದವರ ಕುಟುಂಬಗಳಿಗೆ ಸರ್ಕಾರ ಪರಿಹಾರ ನೀಡಬೇಕು, ದಾಳಿಕೋರರನ್ನು ಬಂಧಿಸಬೇಕೆಂದು ಆಗ್ರಹಿಸಿದರು. ಬಿಜೆಪಿ ಮುಖಂಡರಾದ ಫಕೀರಪ್ಪ ತುಮ್ಮಿನಕಟ್ಟಿ, ರಾಘವೇಂದ್ರ ಕುಲಕರ್ಣಿ, ಮಹೇಶ ಕುದರಿಹಾಳ, ಶಿದ್ದನಗೌಡ ಪಾಟೀಲ, ಮಹೇಶ ಪಾಟೀಲ, ಮಂಜುನಾಥ ಲಿಂಗದಹಳ್ಳಿ ಇದ್ದರು.
ಕೆಸಿಸಿ ಬ್ಯಾಂಕ್ಗೆ ರು. 66 ಕೋಟಿ ಬೆಳೆವಿಮೆ ಜಮೆ: ಸಿ.ಎಂ. ಉದಾಸಿ
ಹಾನಗಲ್ಲ: ಕಳೆದ ವರ್ಷದ ರೈತರ ಬೆಳೆವಿಮೆ ಪರಿಹಾರದ ರು. 66 ಕೋಟಿ ಹಣ ಕೆಸಿಸಿ ಬ್ಯಾಂಕಿಗೆ ಜಮಾ ಆಗಿದ್ದು, ಶೀಘ್ರದಲ್ಲಿ ರೈತರ ಕೈಸೇರಲಿದೆ ಎಂದು ಮಾಜಿ ಸಚಿವ, ಕೆಜೆಪಿ ಮುಖಂಡ ಸಿ.ಎಂ. ಉದಾಸಿ ತಿಳಿಸಿದರು. ಸುದ್ದಿಗಾರರಿಗೆ ಸೋಮವಾರ ಈ ವಿವರ ನೀಡಿದ ಉದಾಸಿ, ಹಾವೇರಿ ಜಿಲ್ಲೆಯ ರೈತರ ರು. 60 ಕೋಟಿ, ಧಾರವಾಡ ಜಿಲ್ಲೆಯ ರೈತರ ರು. 8 ಕೋಟಿ ಕೆಸಿಸಿ ಬ್ಯಾಂಕ್ ಹಾಗೂ ರಾಷ್ಟ್ರೀಕೃತ ಬ್ಯಾಂಕ್ಗಳಿಗೆ ಬಂದಿದೆ. ಇನ್ನು 6-7 ದಿನಗಳಲ್ಲಿ ಎಲ್ಲ ವಿಎಸ್ಎಸ್ ಬ್ಯಾಂಕ್ಗಳಿಗೆ ಜಮಾ ಆಗಲಿದೆ. ಹಾವೇರಿ ಜಿಲ್ಲೆಯಲ್ಲಿ 1.18 ಲಕ್ಷ ರೈತರು ಹಾಗೂ ಗದಗ ಜಿಲ್ಲೆಯಲ್ಲಿ ಕೇವಲ 1700 ರೈತರು ಬೆಳೆವಿಮೆ ಮಾಡಿಸಿದ್ದರು. ಹಾವೇರಿ ಜಿಲ್ಲೆಯಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದ್ದರಿಂದ ಹೆಚ್ಚು ರೈತರು ಬೆಳೆವಿಮೆ ಯೋಜನೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಯಿತು. ಆದರೆ ಕೆಲವರು ಸ್ವ-ಪ್ರತಿಷ್ಠೆಗಾಗಿ ಅನವಶ್ಯಕವಾಗಿ ಟೀಕೆ ಮಾಡುತ್ತಿದ್ದಾರೆ. ರೈತರ ಹಿತ ಕಾಪಾಡುವುದು ಜನಪ್ರತಿನಿಧಿಗಳ ಕರ್ತವ್ಯ. ಈ ಹಿನ್ನೆಲೆಯಲ್ಲಿ ಕರ್ನಾಟಕ ಜನತಾ ಪಕ್ಷದ ವತಿಯಿಂದ ತಾವು ಬೆಳೆವಿಮೆ ಪರಿಹಾರಕ್ಕಾಗಿ ಪ್ರತಿಭಟನೆ ನಡೆಸಿ, ಹಣ ಬಿಡುಗಡೆಗಾಗಿ ಒತ್ತಾಯಿಸಿದ್ದೆವು. ಅದರ ಫಲವಾಗಿ ಪರಿಹಾರ ಹಣ ರೈತರ ಕೈಸೇರುತ್ತಿರುವುದು ಸಂತಸ ತಂದಿದೆ ಎಂದು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

