ಯಲಿವಾಳ ಅಂಗನವಾಡಿ ಕಳಪೆ
ಕನ್ನಡಪ್ರಭ ವಾರ್ತೆ, ಹಾನಗಲ್ಲ, ಅ. 29
ಯಲಿವಾಳ ಗ್ರಾಮದಲ್ಲಿ ನಿರ್ಮಿತಿ ಕೇಂದ್ರ ನಿರ್ಮಿಸಿದ ಅಂಗನವಾಡಿ ಕಟ್ಟಡ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಳಪೆಯಾಗಿದೆ. ಈ ಕಾಮಗಾರಿ ಪರಿಶೀಲಿಸಿ, ತಪ್ಪಿತಸ್ಥರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಶಾಸಕ ಮನೋಹರ ತಹಶೀಲ್ದಾರ ಎಚ್ಚರಿಸಿದರು.
ತಾಲೂಕಿನ ಯಲಿವಾಳ ಗ್ರಾಮದ ಅಂಗನವಾಡಿ ಕೇಂದ್ರದ ನೂತನ ಕಟ್ಟಡ ಉದ್ಘಾಟನೆಗೆ ಆಗಮಿಸಿದ್ದ ವೇಳೆ ಗ್ರಾಮಸ್ಥರಿಂದ ಸನ್ಮಾನ ಸ್ವೀಕರಿಸಿದ ಅವರು, ಕಟ್ಟಡದ ಕಾಮಗಾರಿ ಪರಿಶೀಲಿಸಿದರು. ಸರ್ಕಾರದ ಅನುದಾನ ದುರ್ಬಳಕೆಗೆ ಅವಕಾಶ ನೀಡುವುದಿಲ್ಲ. ಎಲ್ಲ ಕಾಮಗಾರಿಗಳು ಗುಣಮಟ್ಟದಿಂದ ನಡೆಯಬೇಕು. ಕಾಮಗಾರಿ ಉದ್ಘಾಟನೆಗೂ ನಿರ್ಮಿತಿ ಕೇಂದ್ರದ ಅಧಿಕಾರಿಗಳು ಗೈರಾಗಿದ್ದು ಅವರ ಬೇಜವಾಬ್ದಾರಿತನ ಪ್ರದರ್ಶಿಸುತ್ತದೆ ಎಂದು ಕಿಡಿಕಾರಿದರು.
60 ಭರವಸೆ ಈಡೇರಿಕೆ
ಚುನಾವಣೆ ವೇಳೆ ಕಾಂಗ್ರೆಸ್ ನೀಡಿರುವ 60 ಆಶ್ವಾಸನೆಗಳನ್ನು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಈಡೇರಿಸಿದೆ. ಇನ್ನೂ 100 ಆಶ್ವಾಸನೆಗಳನ್ನು ಹಂತ ಹಂತವಾಗಿ ಈಡೇರಿಸಲಿದೆ. ಬೊಮ್ಮನಹಳ್ಳಿ ಜಿಪಂ ಕ್ಷೇತ್ರ ವ್ಯಾಪ್ತಿಯ ಎಲ್ಲ ನೀರಾವರಿ ಕೆರೆಗಳನ್ನು ತುಂಬಿಸುವ ಕಾರ್ಯಕ್ಕೆ ಚಾಲನೆ ನೀಡಲಾಗುವುದು. ಬಿಜೆಪಿ ಸರ್ಕಾರ ಕಡಿತಗೊಳಿಸಿದ್ದ ಭಾಗ್ಯಜ್ಯೋತಿ, ಕುಟೀರಜ್ಯೋತಿ ಸೌಲಭ್ಯ ಮತ್ತೆ ಕಲ್ಪಿಸಿ, ಬಡವರಿಗೆ ಬೆಳಕು ನೀಡಲು ನಿರ್ಧರಿಸಲಾಗಿದೆ ಎಂದರು.
ತಾಪಂ ಅಧ್ಯಕ್ಷ ಮಲ್ಲನಗೌಡ ವೀರನಗೌಡ್ರ ಮಾತನಾಡಿ, ಬೊಮ್ಮನಹಳ್ಳಿ ಜಿಪಂ ಕ್ಷೇತ್ರದ ರೈತರ ಹಿತ ಕಾಪಾಡುವಲ್ಲಿ ಹಿಂದಿನ ಸರ್ಕಾರಗಳು ವಿಫಲವಾಗಿವೆ. ಜನಪ್ರತಿನಿಧಿಗಳು ಈ ಭಾಗದ ನೀರಾವರಿಗೆ ಆದ್ಯತೆ ನೀಡಲಿಲ್ಲ. ಈ ಸರ್ಕಾರ ಮುಂದಿನ ಮಳೆಗಾಲದಲ್ಲಾದರೂ ಕೆರೆಗಳಿಗೆ ನೀರು ತುಂಬಿಸಿ, ರೈತರ ಕೃಷಿ ಬದುಕಿಗೆ ನೆರವಾಗಬೇಕು ಎಂದು ಒತ್ತಾಯಿಸಿದರು.
ಕಾನೂನು ಮತ್ತು ಮಾನವ ಹಕ್ಕುಗಳ ಸಮಿತಿ ಪ್ರಧಾನ ಕಾರ್ಯದರ್ಶಿ, ನ್ಯಾಯವಾದಿ ಜಿ.ವಿ. ಕಂಬಾಳಿಮಠ ಮಾತನಾಡಿ, ಹಾನಗಲ್ಲ ತಾಲೂಕಿನ ಉತ್ತರ ಭಾಗದಲ್ಲಿ ಔದ್ಯೋಗೀಕರಣಕ್ಕೆ ಅವಕಾಶ ನೀಡಿ ಕೈಗಾರಿಕೆ ಸ್ಥಾಪಿಸುವಂತೆ ಹಾಗೂ ನೀರಾವರಿಗೆ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದರು.
ಕಾಂಗ್ರೆಸ್ ಮುಖಂಡ ಯಾಶೀರಖಾನ ಪಠಾಣ, ಎಂ.ಎಸ್. ಪಾಟೀಲ ಮಾತನಾಡಿದರು. ಬೊಮ್ಮನಹಳ್ಳಿಯ ಗುರುಪಾದೇಶ್ವರ ವಿರಕ್ತಮಠದ ಶಿವಯೋಗೀಶ್ವರ ಮಹಾಸ್ವಾಮಿಜಿ ಸಾನ್ನಿಧ್ಯ ವಹಿಸಿದ್ದರು. ಜಿಪಂ ಸದಸ್ಯ ಮಹದೇವಪ್ಪ ಭಾಗಸರ, ತಾಪಂ ಇಒ ಬಸವರಾಜಪ್ಪ, ಮುಖಂಡ ರವಿಕುಮಾರ ಬೆಲ್ಲದ, ವಲಯ ಅರಣ್ಯಾಧಿಕಾರಿ ಶಿವರಾತ್ರೇಶ್ವರ ಸ್ವಾಮಿ, ಗಂಗಾಧರ ಲಚಮಣ್ಣನವರ, ಚನ್ನಬಸಯ್ಯ ದೊಡ್ಡಕಂತಿನಮಠ, ಸೋಗಾಜಿ ಪುರೋಹಿತ, ಶೇಕಪ್ಪ ಮಲ್ಲಮ್ಮನವರ, ಶಂಕ್ರಪ್ಪ ಪ್ಯಾಟಿ, ಯಲ್ಲಪ್ಪ ತೋಟಗೇರ, ಪುಟ್ಟಪ್ಪಾ ಜ್ಯೋತಿಬಾನವರ, ಶಿವಪ್ಪ ಗೊಲ್ಲರ, ಮಂಜಪ್ಪ ತೊಗರಳ್ಳಿ, ರಾಜುವಲಿ ಮುಕ್ತೇಸೂರ, ಶಿವಕುಮಾರ ಮಲ್ಲಿಕೇರಿಮಠ, ಜಿ.ಎಂ. ಮುಲ್ಲಾ, ಮೈಲಾರಪ್ಪ ಕಬ್ಬೂರ, ವಿರೂಪಾಕ್ಷಯ್ಯ ಕಂಬಾಳಿಮಠ, ರುದ್ರಣ್ಣ, ಬಸಣ್ಣ ಹರಿಶೆಟ್ಟರ, ಆನಂದಪ್ಪ ಆರೇಗೊಪ್ಪ, ಚನ್ನವೀರಯ್ಯ ಹರಿಶೆಟ್ಟರ, ಮಹದೇವಪ್ಪ ಹಸನಾಬಾದಿ, ಅಜ್ಜಣ್ಣ ಜವಳಿ, ಗಣೇಶಪ್ಪ ನಾಗೋಜಿ ಮುಂತಾದವರು ಉಪಸ್ಥಿತರಿದ್ದರು.
ಚೆಕ್ ವಿತರಣೆ
ಯಲಿವಾಳ ಗ್ರಾಮ ಅರಣ್ಯ ಸಮಿತಿಯಿಂದ ಅನ್ನಪೂರ್ಣೇಶ್ವರಿ, ಗ್ರಾಮದೇವಿ, ಕಾದಂಬರಿ ಹಾಗೂ ಜ್ಯೋತಿ ಸ್ವಹಾಯ ಸಂಘಗಳಿಗೆ ತಲಾ ರು. 29 ಸಾವಿರ ಧನಸಹಾಯದ ಚೆಕ್ಗಳನ್ನು ಶಾಸಕ ಮನೋಹರ ತಹಶೀಲ್ದಾರ ವಿತರಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

