ಹಾವೇರಿ

ರೇವತಿ ಉದಾಸಿ ಮತಯಾಚನೆ

Published On :

ಹಾವೇರಿ:  ಜನತೆಗೆ ಯುಗಾದಿ ಹಬ್ಬದ ಶುಭಾಶಯ ಕೋರಿದ ರೇವತಿ ಉದಾಸಿ ಅವರು ತಮ್ಮ ಪತಿ, ಕ್ಷೇತ್ರ ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿಯವರ ಪರವಾಗಿ ಮತ ಯಾಚಿಸಿದರು. ಹೊಸ ವರ್ಷದಲ್ಲಿ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಲೆಂದು ಆಶಿಸಿದರು.
ಬಿಜೆಪಿ ಶಹರ ಘಟಕದಿಂದ ಮನೆಮನೆಗೆ ಪ್ರಚಾರ ಕೈಗೊಂಡು ಮಾತನಾಡಿದ ಅವರು, ದೇಶವನ್ನು ಲೂಟಿ ಮಾಡಿದ ಕಾಂಗ್ರೆಸ್‌ಗೆ ಜನರ ಬಳಿ ತೆರಳಿ ಮತ ಕೇಳುವ ನೈತಿಕತೆ ಇಲ್ಲ. ಸುಮಾರು 60 ವರ್ಷಗಳ ಕಾಲ ಆಡಳಿತ ನಡೆಸಿದರೂ ದೇಶದ ಜನರ ಬಡತನ ನಿರ್ಮೂಲನೆ ಮಾಡಲು ವಿಫಲವಾಗಿದೆ. ಅಲ್ಲದೆ ಕಾಂಗ್ರೆಸ್ ಆಡಳಿತದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಕಾಂಗ್ರೆಸ್ ನಾಯಕರು ಚುನಾವಣೆ ಬಂದಾಗ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಅಭಿವೃದ್ಧಿ ಬಗ್ಗೆ ಮಾತಾಡುತ್ತಾರೆ. ಇಷ್ಟು ವರ್ಷಗಳ ಕಾಲ ಆಡಳಿತ ಮಾಡಿದ ಈ ಸರ್ಕಾರ ಅಲ್ಪಸಂಖ್ಯಾತರಿಗೆ ಏನು ಕೊಡುಗೆ ನೀಡಿದೆ. ಇದರ ಬಗ್ಗೆ ಕಾಂಗ್ರೆಸ್ ಆತ್ಮಾವಲೋಕನ ಮಾಡಿಕೊಳ್ಳಲಿ. ಆದರೆ, ಬಿಜೆಪಿ ಅಧಿಕಾರದಲ್ಲಿದ್ದಾಗ ಅಲ್ಪಸಂಖ್ಯಾತರಿಗಾಗಿ ನೂರಾರು ಕೋಟಿ ಅನುದಾನ ನೀಡಿ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಶ್ರಮಿಸಲಾಗಿದೆ ಎಂದರು. ನಗರ ಘಟಕದ ಅಧ್ಯಕ್ಷ ಗುಡ್ಡನಗೌಡ್ರ ಅಂದಾನಿಗೌಡ್ರ ಮಾತನಾಡಿ, ವಿಧಾನಸಭೆ ಚುನಾವಣೆ ಮುಗಿದು ಒಂದು ವರ್ಷ ಕಳೆದರೂ ಹಾವೇರಿಯ ಸಮಸ್ಯೆಗಳ ಬಗ್ಗೆ ಸ್ಥಳೀಯ ಶಾಸಕರು ಸ್ಪಂದಿಸುತ್ತಿಲ್ಲ. ಅಲ್ಲದೇ ಶಾಸಕರು ಹಾವೇರಿಯ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿಲ್ಲ. ಹಾವೇರಿ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ, ರಸ್ತೆಗಳ ದುರಸ್ತಿ ಕುರಿತು ಶಾಸಕರು ನಿದ್ರೆ ಮಾಡುತ್ತಿರುವಂತಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ಅನೇಕ ಯೋಜನೆಗಳು ಮಧ್ಯವರ್ತಿಗಳ ಪಾಲಾಗುತ್ತಿದೆ. ಬೆಲೆ ಏರಿಕೆ ಮತ್ತು ಪೆಟ್ರೋಲ್, ಸಿಲಿಂಡರ್ ಮತ್ತು ಇನ್ನುಳಿದ ವಸ್ತುಗಳ ಬೆಲೆ ಗಗನ್ನಕ್ಕೇರಿದೆ. ಇದರಿಂದ ಜನಸಾಮಾನ್ಯರು ಜೀವನ ನಡೆಸುವುದು ದುಸ್ತರವಾಗಿದೆ ಎಂದು ಆರೋಪಿಸಿದರು.
ಜಿಲ್ಲಾ ವಕ್ತಾರ ಪ್ರಭು ಹಿಟ್ನಳ್ಳಿ, ನಗರಸಭಾ ಸದಸ್ಯರಾದ ಸುರೇಶ ದೊಡ್ಡಮನಿ, ಶಿವಬಸವ ವನ್ನಳ್ಳಿ, ಲಲಿತಾ ಗುಂಡೇನಹಳ್ಳಿ, ಹನುಮಂತ ನಾಯಕ ಬದಾಮಿ, ನಿರಂಜನ ಹೇರೂರ, ಹನುಮಂತಪ್ಪ ದೇವಗಿರಿ, ಜಗದೀಶ ಮಲಗೋಡ, ಕರಬಸಪ್ಪ ಹಳದೂರ. ನಜಗುನ್ನಿಸಾ ನದಾಫ್, ರೇಣುಕಾ ಪೂಜಾರ, ಗೀತಾ ಜುಜಗಾಂವ, ಸತೀಶ ಹಾವೇರಿ, ಪರಶುರಾಮ ಮೈಲಾರಪ್ಪನವರ, ಯಲ್ಲವ್ವ ಬೆಂಗಳೂರ, ಇರ್ಫಾನ್ ಪಠಾಣ, ಗಂಗವ್ವ ಏರೇಶಿಮಿ, ಅಲ್ಲಾಭಕ್ಷ ತಿಮ್ಮಾಪುರ, ಮಂಜುನಾಥ ಪುತಳೆಕರ, ವೇದವ್ಯಾಸ ಕಟ್ಟಿ, ಶಿವಲಿಂಗಪ್ಪ ಕಲ್ಯಾಣಿ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಪ್ರದೀಪ ಮುಳ್ಳೂರ, ವೇಂಕಟೇಶ ದೈವಜ್ಞ, ಗಿರೀಶ ತುಪ್ಪದ, ವಿರಪ್ಪ ನಂದಿ, ಸತೀಶ ಕೋರಿಶೆಟ್ಟರ್, ಬಾಬಣ್ಣ ಮುಂಬಿನಗಾರ, ದಾವಲಸಾಬ ಹಿರೇಮುಗದೂರ, ಮಹಬೂಬ ಅಲಿ, ಜಯಪ್ಪ ದೇಸಾಳಿ, ಸೋಮಶೇಖರ ತಿಪ್ಪಶೆಟ್ಟಿ, ಈರಣ್ಣ ಹೆರೂರ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.