ಹಾವೇರಿ

ಅಕ್ರಮ ಮದ್ಯ ಸಾಗಾಟ: ವಶ

Published On :

ಮುಂಡರಗಿ: ತಾಲೂಕಿನ ಬೂದಿಹಾಳ ಬಳಿ ಭಾನುವಾರ ಅಕ್ರಮವಾಗಿ ಸಾಗಿಸುತ್ತಿದ್ದ ಅಂದಾಜು ರು. 40 ಸಾವಿರ ಮೌಲ್ಯದ ಅಕ್ರಮ ಮದ್ಯವನ್ನು ಚುನಾವಣೆಯ ಪ್ಲೇಯಿಂಗ್ ಸ್ಕ್ವಾಡ್ ಹಾಗೂ ಎಂಸಿಸಿ ತಂಡ ವಶಪಡಿಸಿಕೊಂಡಿದೆ. ಮುಂಡರಗಿಯಿಂದ ಬಿದರಹಳ್ಳಿ ಕಡೆಗೆ ಕ್ರೂಸರ್ ವಾಹನದಲ್ಲಿ ಮದ್ಯ ಸಾಗಣೆ ಮಾಡುತ್ತಿದ್ದ ಮಾಹಿತಿ ಎಂಸಿಸಿ ತಂಡಕ್ಕೆ ದೊರೆತಿತ್ತು. ಈ ಹಿನ್ನೆಲೆಯಲ್ಲಿ ತಂಡ ದಾಳಿ ಮಾಡಿ ಮದ್ಯ ಸಾಗಿಸುತ್ತಿದ್ದ ವಾಹನ ಮತ್ತು ಮದ್ಯ ವಶಪಡಿಸಿಕೊಂಡಿದೆ. ಚಾಲಕ ಬಾಬುಸಾಬ ಸಕ್ರುಸಾಬ ನದಾಫ್ ಅವರನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ದಾಳಿ ಸಂದರ್ಭದಲ್ಲಿ ತಹಸೀಲ್ದಾರ್ ಐ.ಡಿ. ಹೆಗ್ಗೊಂಡ, ತಾಲೂಕು ಸ್ವೀಪ್ ಕಮಿಟಿ ಅಧ್ಯಕ್ಷ ಡಿ. ಮೋಹನ, ಅಬಕಾರಿ ನಿರೀಕ್ಷಕ ವಿವೇಕಾನಂದ, ಪ್ಲೇಯಿಂಗ್ ಸ್ಕ್ವಾಡ್ ಕಮಿಟಿಯ ಎಂ.ಡಿ. ಚಬನೂರ, ಎಎಸ್ಐ ಆರ್.ಎಸ್. ತಳವಾರ, ಕಂದಾಯ ನಿರೀಕ್ಷಕ ಎಸ್.ಎಚ್. ಬಿಚ್ಚಾಲಿ, ರಘುನಾಥ ರಾವ್, ಅಬಕಾರಿ ಇನ್ಸ್ಪೆಕ್ಟರ್ ಸುರೇಶ ಪತ್ತಾರ ಮತ್ತಿತರರು ಪಾಲ್ಗೊಂಡಿದ್ದರು.


ರಾಜ್ಯದಿಂದ 20 ಮಂದಿ ಆಯ್ಕೆ ಖಚಿತ: ಪಾಟೀಲ


ಗಜೇಂದ್ರಗಡ: ಸರ್ವ ಸಮುದಾಯಗಳ ಅಭಿವೃದ್ಧಿಗೆ ಸಂಕಲ್ಪ ತೊಟ್ಟಿರುವ ಕಾಂಗ್ರೆಸ್ನ 20ಕ್ಕೂ ಹೆಚ್ಚು ಸಂಸದರು ಈ ಬಾರಿ ರಾದ್ಯದಿಂದ ಆಯ್ಕೆಯಾಗಲಿದ್ದಾರೆ ಎಂದು ಶಾಸಕ ಜಿ.ಎಸ್. ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು.
ಪಟ್ಟಣದ ಹಡಪದ ಅಪ್ಪಣ್ಣ ಸಮಾಜದ ಗಣ್ಯರನ್ನು ಕಾಂಗ್ರೆಸ್ಗೆ ಬರಮಾಡಿಕೊಂಡ ಅವರು, ಭ್ರಷ್ಟಾಚಾರದಲ್ಲಿ ತೊಡಗಿ ರಾಜ್ಯದ ಜನತೆಯ ಹಿತ ಕಾಪಾಡಲು ವಿಫಲವಾಗಿದ್ದ ಬಿಜೆಪಿ ವಿಧಾನಸಭೆ ಚುನಾವಣೆಯಲ್ಲಿ ಜನ ತಿರಸ್ಕರಿಸಿದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದು ಹತ್ತಾರು ಅಭಿವೃದ್ಧಿ ಯೋಜನೆ ಜಾರಿಗೆ ತಂದಿತು ಎಂದರು. ಅಶೋಕ ಬಾಗಮಾರ, ವೀರಣ್ಣ ಶೆಟ್ಟರ, ಚಂಬಣ್ಣ ಚವಡಿ, ಸುಭಾನಸಾಬ ಆರಗಿದ್ದಿ, ಬಸವರಾಜ, ಹಡಪದ ಅಪ್ಪಣ್ಣ ಸಮಾಜದ ಅಧ್ಯಕ್ಷ ರವಿ ಹಾಸಿಗಲ್, ವಿ.ಬಿ. ಸೋಮನಕಟ್ಟಿಮಠ, ಎನ್.ಎಸ್. ಬಸವಾ, ಮೋಹನಸಾ ರಾಯಬಾಗಿ, ಕೊಟ್ರೇಶ ಚಿಲಕಾ, ಉಮೇಶ ರಾಠೋಡ, ಚಿದಾನಂದಪ್ಪ ಹಡಪದ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.