ಅಹಿಂಸೆಯಿಂದಲೇ ಶಾಂತಿ
ಬ್ಯಾಡಗಿ: ಅಹಿಂಸೆಯನ್ನು ಶ್ರೇಷ್ಠ ಧರ್ಮವಾಗಿ ವಿಶ್ವಕ್ಕೆ ಸಾರಿದ ತೀರ್ಥಂಕರ ಮಹಾವೀರರು ವಿಶ್ವಕ್ಕೆ ಮಾದರಿಯಾಗಿದ್ದಾರೆ ಎಂದು ಜೈನ ಸಮಾಜದ ಮುಖಂಡ ಅಶೋಕ ಜೈನ್ ಅಭಿಪ್ರಾಯಪಟ್ಟರು.
ಮಹಾವೀರ ಜಯಂತಿ ಅಂಗವಾಗಿ ಭಾನುವಾರ ಇಲ್ಲಿನ ವಿಮಲನಾಥ ಶ್ವೇತಾಂಬರ ಜೈನ್ ಸಂಸ್ಥೆ ಆಶ್ರಯದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನರಬಲಿ, ಪ್ರಾಣಿಬಲಿ ಜನರ ನೆಮ್ಮದಿ ಕಸಿದುಕೊಂಡಿದ್ದ ಸಂದರ್ಭದಲ್ಲಿ ಅಹಿಂಸೆ ಮಾರ್ಗದ ಮೂಲಕ ನೆಮ್ಮದಿ ಕರುಣಿಸಿದ ಮಹಾತ್ಮರು ಮಹಾವೀರರು ಎಂದು ಶ್ಲಾಘಿಸಿದರು. ಭಗವಾನ್ ಮಹಾವೀರರ ಭಾವಚಿತ್ರವನ್ನು ಪಟ್ಟಣದ ಮುಖ್ಯ ರಸ್ತೆ, ಚಾವಡಿ ರಸ್ತೆ, ಸೋಗಿ ಓಣಿ, ಬನಶಂಕರಿ ರಸ್ತೆ, ದಂಡಿನ ಪೇಟೆ ಮುಂತಾದ ಕಡೆಗಳಲ್ಲಿ ವೈಭವದಿಂದ ಮೆರವಣಿಗೆ ಮಾಡಲಾಯಿತು. ಪಟ್ಟಣದ ಹಲವು ವಸತಿ ಶಾಲೆ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಿಗೆ ತೆರಳಿ ಹಾಲು, ಹಣ್ಣು ಹಾಗೂ ಸಿಹಿ ಹಂಚಿದರು. ಅಂಬಾಲಾಲ್ ಜೈನ್, ಸುಭಾಷ್ ಜೈನ್ ಚಿನ್ನಿಲಾಲ್ ಸಂಜಯ ಜೈನ್, ಭೈರೂ ಜೈನ್, ನೇಮಿಚಂದ ಜೈನ್, ಆನಂದ ಜೈನ್, ಪಂಕಜ್ ಜೈನ್, ವಿಜಯಕುಮಾರ, ಪ್ರೀತಂ ಜೈನ್, ಅರವಿಂದ ಜೈನ್, ನಿರತ್ ಜೈನ್, ಮನೋಜ್ ಜೈನ್, ಸೂರಜ್, ಉಮೇಶ್, ಸುಭಾಷ್ ಜೈನ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

