ಪ್ರಸಾದ ನಿಲಯಕ್ಕೆ ಅನುದಾನ
ಶಿಗ್ಗಾಂವಿ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ದೇವಸ್ಥಾನ ನಿರ್ಮಾಣ, ಹಾಲು ಶೇಖರಣಾ ಉಪಕೇಂದ್ರ, ಸುಜ್ಞಾನ ನಿಧಿ, ಕೃಷಿ ಅನುದಾನ, ಶೌಚಾಲಯ, ಗೋಬರ್ ಗ್ಯಾಸ್ ಮುಂತಾದವುಗಳ ನಿರ್ಮಾಣಕ್ಕೆ ಅನುದಾನ ನೀಡುತ್ತಿದೆ ಎಂದು ನಾಗರಾಜ ಬಡಿಗೇರ ತಿಳಿಸಿದರು. ಸದಾಶಿವಪೇಟೆಯ ಶರಣಬಸವೇಶ್ವರ ಪ್ರಸಾದ ನಿಲಯ ಕಟ್ಟಡಕ್ಕೆ ಯೋಜನೆಯಿಂದ ಡಾ ವೀರೇಂದ್ರ ಹೆಗ್ಗಡೆಯವರು ಮಂಜೂರು ಮಾಡಿದ ರು. 1 ಲಕ್ಷದ ಚೆಕ್ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಶ್ರೀ ಶಿವದೇವ ಶರಣರು ಆರ್ಶೀವಚನ ನೀಡಿದರು. ಯೋಜನಾಧಿಕಾರಿ ಗಣಪತಿ ಮಾಳಂಜಿ, ಶಿವಯೋಗಿ ಕಿವಡನ್ನವರ್, ಗ್ರಾಪಂ ಸದಸ್ಯ ಮಲ್ಲಪ್ಪ ಬಾಗಣ್ಣನವರ್, ಗುರುಲಿಂಗಯ್ಯ ನಂದಿಮಠ, ರಮೇಶ್ ಕಲಿವಾಳ, ರುದ್ರಪ್ಪ ಕಿವಡನ್ನವರ್, ಒಕ್ಕೂಟದ ಅಧ್ಯಕ್ಷ ಶರಣಪ್ಪ ಕಿವುಡನ್ನವರ್, ಯೋಜನೆಯ ಹೈನುಗಾರಿಕೆ ಅಧಿಕಾರಿ ಪ್ರವೀಣ ದೊಡಮನಿ, ಮೇಲ್ವಿಚಾರಕ ಭಾಸ್ಕರ್, ಸೇವಾಪ್ರತಿನಿಧಿ ಗಿರಿಜವ್ವ ಇದ್ದರು. ಶ್ರೀಕಾಂತ ಬಡಿಗೇರ ಸ್ವಾಗತಿಸಿದರು. ಭಾಸ್ಕರ್ ನಿರೂಪಿಸಿದರು. ಸಿ.ವಿ. ಕಿವುಡನ್ನವರ್ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

