ಹಾವೇರಿ

ಗಾಡಾ ಓಡಿಸುವ ಅಂದ ನೋಡಾ...

Published On :

ಬ್ಯಾಡಗಿ: ಮೋಟೆಬೆನ್ನೂರು ಗ್ರಾಮದಲ್ಲಿ ಸೋಮವಾರ ಗಾಡಾ ಓಡಿಸುವ ಸ್ಪರ್ಧೆ ಸಾವಿರಾರು ರೈತರ ಹರ್ಷೋದ್ಗಾರಗಳ ಮಧ್ಯೆ ಸಂಭ್ರಮದಿಂದ ನಡೆಯಿತು.
ಗೆಳೆಯರ ಬಳಗ ಗ್ರಾಮದ ಜಮೀನಿನಲ್ಲಿ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಹಾವೇರಿ, ಸವಣೂರು, ಗದಗ, ಹುಬ್ಬಳ್ಳಿ, ಧಾರವಾಡ ಮುಂತಾದ ಕಡೆಗಳಿಂದ 150ಕ್ಕೂ ಹೆಚ್ಚು ರೈತರು ತಮ್ಮ ಜೋಡಿ ಎತ್ತುಗಳೊಂದಿಗೆ ಭಾಗವಹಿಸಿದ್ದರು.
ಗಾಡಾ ಸ್ಪರ್ಧೆಗಾಗಿಯೇ ಸಾಕುವ ಹೋರಿಗಳಿಗೆ ಸೂಕ್ತ ತರಬೇತಿ ನೀಡಲಾಗುತ್ತದೆ. ಪ್ರತಿ ಜೋಡಿಗೂ ರು. 1ರಿಂದ 5 ಲಕ್ಷ ಬೆಲೆ ಇರುತ್ತದೆ. ಈ ಹೋರಿಗಳನ್ನು ನೋಡಲೆಂದೇ ಜನರು ಸಾಕಷ್ಟು ಸಂಖ್ಯೆಯಲ್ಲಿ ಸೇರುತ್ತಾರೆ. ಕಾಲಿನ ಧೂಳು ಹಾಗೂ ನೆತ್ತಿ ಸುಡುವ ಬಿಸಿಲನ್ನೂ ಲೆಕ್ಕಿಸದೆ ಉತ್ಸಾಹದಿಂದ ಭಾಗವಹಿಸುತ್ತಾರೆ. ಇಂಥ ಆಸಕ್ತರು ಸ್ಪರ್ಧೆ ವೀಕ್ಷಿಸಲು ಅನುಕೂಲವಾಗಲೆಂದು ಆಯೋಜಕರು ಸ್ಟೇಡಿಯಂ ಮಾದರಿಯಲ್ಲಿ 610 ಮೀ. (ಎರಡು ಸಾವಿರ ಅಡಿ) ಉದ್ದನೆಯ ಟ್ರ್ಯಾಕ್ ನಿರ್ಮಿಸಿದ್ದು, ಎರಡೂ ಬದಿಗಳಲ್ಲಿ ಗ್ಯಾಲರಿ ಕಟ್ಟಿಸಿದ್ದರು.
ಬಹುಮಾನ: ಒಂದು ನಿಮಿಷದಲ್ಲಿ 1803 ಅಡಿ ದೂರ ಕ್ರಮಿಸಿದ ಹಾವೇರಿ ತಾಲೂಕಿನ ತೋಟದ ಯಲ್ಲಾಪುರದ ಮೈ ಲಾರಲಿಂಗೇಶ್ವರ ಜೋಡಿ ಎತ್ತುಗಳು ಪ್ರಥಮ, 1702 ಅಡಿ ಕ್ರಮಿಸಿದ ಧಾರವಾಡ ತಾಲೂಕು ನರೇಂದ್ರ ಗ್ರಾಮದ ಆಂಜನೇಯ ಪ್ರಸನ್ನ ಜೋಡಿ ದ್ವಿತೀಯ ಮತ್ತು 1700 ಅಡಿ ಕ್ರಮಿಸಿದ ಧಾರವಾಡ ಗ್ರಾಮೀಣ ರೈತರ ಬಳಗದ ಜೋಡಿ ಎತ್ತುಗಳು ತೃತೀಯ ಬಹುಮಾನ ಪಡೆದವು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.