ಯುವ ಕಾಂಗ್ರೆಸ್ಗೆ ಆಯ್ಕೆ
ಹಾವೇರಿ: ಇತ್ತೀಚೆಗೆ ನಡೆದ ಹಾವೇರಿ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ನ ಆಂತರಿಕ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಹುಸೇನಸಾಬ್ ಎಂ. ಜೀಗರಿ, ಉಪಾಧ್ಯಕ್ಷರಾಗಿ ವಿಜಯ ಲಮಾಣಿ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಮಲ್ಲಿಕಾರ್ಜುನ ಬೂದಗಟ್ಟಿ ಆಯ್ಕೆಯಾಗಿದ್ದಾರೆ.
ಲಿಂಗರಾಜರ ಶಿಗ್ಲಿ ಮನೆ ಸ್ಮಾರಕವಾಗಲಿ: ಶ್ರೀ
ಗದಗ: ಲಿಂಗರಾಜರು ಚಾರಿತ್ರ್ಯಕ್ಕಾಗಿ ಬಾಳಿದವರು, ಸಮಾಜ ಸಮಷ್ಟಿಯ ಶಿಕ್ಷಣದ ಅಭಿವೃದ್ಧಿಗಾಗಿ ತಮ್ಮ ಸಮಸ್ತ ಆಸ್ತಿಯನ್ನು ದಾನ ನೀಡಿದ ಉದಾರಿಗಳು. ಶಿಗ್ಲಿಯಲ್ಲಿರುವ ದಾನಶೂರ ಲಿಂಗರಾಜ ಅವರ ಮನೆ ಸ್ಮಾರಕವಾಗಬೇಕು. ಈ ಕುರಿತು ಕುಡುವಕ್ಕಲಿಗ ಸಮಾಜ-ಸರ್ಕಾರ ಗಮನಹರಿಸಿ ಕಾರ್ಯತತ್ಪರವಾಗಬೇಕು ಎಂದು ಜ. ತೋಂಟದ ಡಾ. ಸಿದ್ಧಲಿಂಗ ಶ್ರೀಗಳು ಕರೆ ನೀಡಿದರು. ಜ.ತೋಂಟದಾರ್ಯ ಮಠದಲ್ಲಿ ಲಿಂಗಾಯತ ಪ್ರಗತಿಶೀಲ ಸಂಘದಾಶ್ರಯದಲ್ಲಿ 2154ನೇ ಶಿವಾನುಭವದಲ್ಲಿ ನಡೆದ ದಾನಶೂರ ಶಿರಸಂಗಿ ಲಿಂಗರಾಜರ ಜಯಂತ್ಯುತ್ಸವ-ಉಪನ್ಯಾಸ ಹಾಗೂ ಸಹಕಾರ ರಂಗದ ಪಿತಾಮಹ ಖ್ಯಾತಿಯ ಕಣಗಿನಹಾಳದ ಲಿಂ. ಸಿದ್ದನಗೌಡ ಪಾಟೀಲರ ಸ್ಮರಣೋತ್ಸವ ನಿಮಿತ್ತ ಅವರ ಮೊಮ್ಮಗ ನಿಂಗನಗೌಡರು ಪ್ರಕಟಿಸಿದ ಸಿದ್ದನಗೌಡರ ಭಾವಚಿತ್ರವುಳ್ಳ ನೂತನ ವರ್ಷದ ದಿನದರ್ಶಿಕೆ ಬಿಡುಗಡೆ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು. ಶಿರಸಂಗಿ ಲಿಂಗರಾಜರು ಸಮಾಜದ ಶೈಕ್ಷಣಿಕ ಉದ್ಧಾರಕ್ಕೆ ನೀಡಿದ ಕೊಡುಗೆ ಇತಿಹಾಸದಲ್ಲಿ ದಾಖಲೆ ನಿರ್ಮಿಸಿದೆ. ಕಣಗಿನಹಾಳದ ಲಿಂ. ಸಿದ್ದನಗೌಡ ಪಾಟೀಲರು ಸಹಕಾರ ರಂಗದ ಪಿತಾಮಹ ಎಂದೇ ಖ್ಯಾತಿ ಪಡೆದಿದ್ದಾರೆ. ತಾವು ಓದಿದ್ದು 7ನೇ ತರಗತಿಯಾದರೂ ತಮ್ಮ ದೂರದೃಷ್ಟಿಯಿಂದ ಇಡಿ ಏಶಿಯಾ ಖಂಡದಲ್ಲಿಯೇ ಪ್ರಪ್ರಥಮ ಸಹಕಾರ ಸಂಘ ಸ್ಥಾಪಿಸಿ ಭಾರತಕ್ಕೆ ಕೀರ್ತಿ ತಂದರು. ಕಣಗಿನಹಾಳ ರೈಲು ನಿಲ್ದಾಣ, ಗ್ರಾಮದಲ್ಲಿ ಕುಡಿಯುವ ನೀರಿನ ಬಾವಿ ನಿರ್ಮಾಣಕ್ಕೆ ಕಾರಣರಾದ ಮಹಾನುಭಾವ ಸಿದ್ದನಗೌಡರ ವ್ಯಕ್ತಿತ್ವ ಸಾಧನೆಗಳು ಸದಾ ಸ್ಮರಣೀಯ ಎಂದರು.
ಶಿರಸಂಗಿ ಲಿಂಗರಾಜ ಸರದೇಸಾಯಿ ಕುರಿತು ಬೆಳಗಾವಿಯ ಬೇನನ್ ಸ್ಮಿತ್ ಪಪೂ ಕಾಲೇಜಿನ ಪ್ರೊ. ಶ್ರೀಕಾಂತ ಶ್ಯಾನವಾಡ ಉಪನ್ಯಾಸ ನೀಡಿದರು. ಸ್ಮಿತಾ ಕೋಡಳ್ಳಿ ಹಿರೇಮಠ ವಚನ ಸಂಗೀತ ಪ್ರಸ್ತುತ ಪಡಿಸಿದರು. ಅತಿಥಿಗಳಾಗಿ ಲಿಂಗಾಯತ ರುದ್ರಭೂಮಿ ಸಮಿತಿ ಅಧ್ಯಕ್ಷ ಗಂಗಣ್ಣ ಕೋಟಿ, ನಿಂಗನಗೌಡ ಪಾಟೀಲ, ಪ್ರಕಾಶ ಕರಿಸೋಮನಗೌಡ್ರ, ಉಪಾಧ್ಯಕ್ಷ ಮೃತ್ಯುಂಜಯ ಹಿರೇಮಠ, ಶಿವಲೀಲಕ್ಕ ಕುರಡಗಿ, ಈರಣ್ಣ ಹೊನಗಣ್ಣವರ, ಗುರುಬಸವಲಿಂಗ ತಡಸದ, ಪ್ರಭಯ್ಯ ಹಿರೇಮಠ ಉಪಸ್ಥಿತರಿದ್ದರು. ಎಸ್.ಎನ್.ಆದಿ ಸ್ವಾಗತಿಸಿದರು. ಪ್ರೊ. ಗವಳಿ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

