ಹಾವೇರಿ

ಸಂಭಾಜಿ ಪಾಟೀಲ ಬಂಧಿಸಿ: ಕರವೇ

Published On :

ಹಿರೇಕೆರೂರು: ಬೆಳಗಾವಿ ಶಾಸಕ ಸಂಭಾಜಿ ಪಾಟೀಲರ ಅನೈತಿಕ ಚಟುವಟಿಕೆ ಹಾಗೂ ಕನ್ನಡ ವಿರೋಧಿ ಹೇಳಿಕೆಗಳನ್ನು ಖಂಡಿಸಿ, ಸಂಭಾಜಿ ಅವರನ್ನು ಗೂಂಡಾ ಕಾಯ್ದೆಯಡಿ ಬಂಧಿಸುವಂತೆ ಆಗ್ರಹಿಸಿ, ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಗುರುವಾರ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಕರವೇ ತಾಲೂಕು ಅಧ್ಯಕ್ಷ ಗಿರೀಶ ಬಾರ್ಕಿ ಮಾತನಾಡಿ, ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಸಂಭಾಜಿ, ಕನ್ನಡ ನಾಡಿನ ನೆಲ, ಜಲ ಹಾಗೂ ಅಧಿಕಾರ ಅನುಭವಿಸುತ್ತಾ ಮರಾಠಿ ಭಾಷಾ ಪ್ರೇಮ ಮೆರೆದು, ಕನ್ನಡ ವಿರೋಧಿಯಾಗಿ ವರ್ತಿಸಿದ್ದಾರೆ. ಕನ್ಡ ವಿರೋಧಿ ಹೇಳಿಕೆ ನೀಡುತ್ತ ಕನ್ನಡಿಗರ ಭಾವನೆ ಕೆರಳಿಸಿದ್ದಾರೆ. ಅಲ್ಲದೆ, ತಮ್ಮ ತೋಟದ ಮನೆಯಲ್ಲಿ ಜೂಜು ನಡೆಸುತ್ತಿರುವುದು ಕಾನೂನುಬಾಹಿರ. ಅವರನ್ನು ಗೂಂಡಾ ಕಾಯ್ದೆಯಡಿ ಬಂಧಿಸಿ, ಶಿಕ್ಷಿಸಬೇಕು. ಇಲ್ಲದಿದ್ದರೆ ಕರವೇ ಬೀದಿಗಿಳಿದು ಹೋರಾಟ ಮಾಡಲಿದೆ ಎಂದು ಎಚ್ಚರಿಸಿದರು. ಈ ಕುರಿತಾದ ಮನವಿಯಲ್ಲಿ ತಹಸೀಲ್ದಾರ್ ಶಕುಂತಲಾ ಚೌಗುಲೆ ಅವರಿಗೆ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಕರವೇ ತಾಲೂಕು ಕಾರ್ಯದರ್ಶಿ ಶಿವಾನಂದ ಪೂಜಾರ, ಮಲ್ಲನಗೌಡ ಪುಟ್ಟಳ್ಳವರ, ಕಲ್ಲೇಶ  ಸುಣಗಾರ, ಭರಮಪ್ಪ ಹೊಸಳ್ಳಿ, ಹಸನ ಬಳಿಗಾರ, ಜಾಖೀರ ಮಖಾಂದರ, ಈರಣ್ಣ ಬಾರ್ಕಿ, ಶ್ರೀಕಾಂತ ಬಡಿಗೇರ, ಗಣೇಶ ದೇವರಹಳ್ಳಿ, ಚಂದ್ರಪ್ಪ ಹಡಪದ, ನಾಗರಾಜ ಉಜನಿಪುರದ, ರಮೇಶ ಬಾರ್ಕಿ, ನೂರ ಅಹ್ಮದ್ ಕಲೀಲ ಸೈಕಲಗಾರ, ಸಿ.ಎಫ್. ಜಾಡರ, ವೀರೇಶ ಸರಶೆಟ್ಟರ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.