ಹಾವೇರಿ

ಸುದ್ದಿ ಸಂಕ್ಷೇಪ

Published On :

ತರಬೇತಿಗೆ ಆಹ್ವಾನ
ಹಾವೇರಿ: ನೆಹರು ಯುವ ಕೇಂದ್ರದ ವತಿಯಿಂದ ಒಂದು ತಿಂಗಳ ಕೃಷಿ ಆಧಾರಿತ ಸ್ವಯಂ ಉದ್ಯೋಗ ತರಬೇತಿಯನ್ನು ಫೆಬ್ರವರಿ ತಿಂಗಳಲ್ಲಿ ಹಮ್ಮಿಕೊಳ್ಳಲಾಗಿದೆ. ಎಸ್ಸೆಸ್ಸೆಲ್ಸಿ ಪಾಸಾದ, 15ರಿಂದ 35 ವಯೋವುತಿಯ ಯುವ ಜನರು ಜ. 29ರೊಳಗಾಗಿ ಅರ್ಜಿಯನ್ನು ನೆಹರು ಯುವ ಕೇಂದ್ರ, ಮುನ್ಸಿಪಲ್ ಮೈದಾನ, ಜಿಲ್ಲಾ ಕ್ರೀಡಾಂಗಣ ಆವರಣ ಹಾವೇರಿ ಈ ವಿಳಾಸಕ್ಕೆ ಖುದ್ದಾಗಿ ಸಲ್ಲಿಸಬೇಕು. ಮೊದಲು ಬಂದ ಅರ್ಜಿಗಳನ್ನು ಕ್ರಮಾನುಸಾರ ಪರಿಗಣಿಸಲಾಗುವುದು. ಪರಿಶಿಷ್ಟ ಜಾತಿ-ಪಂಗಡದ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು. ಆಯ್ಕೆಯಾದವರಿಗೆ ಊಟ, ವಸತಿ ಸೌಲಭ್ಯ ನೀಡಲಾಗುವುದು. ತರಬೇತಿ ದಿನಾಂಕ ಹಾಗೂ ಸ್ಥಳವನ್ನು ಮುಂಚಿತವಾಗಿ ತಿಳಿಸಲಾಗುವುದು. ಮಾಹಿತಿಗೆ ದೂ. 08375-233163 ಅಥವಾ ಮೊ. 9880474783, 9481724111 ಸಂಪರ್ಕಿಸುವಂತೆ ನೆಹರು ಯುವ ಕೇಂದ್ರದ ಜಿಲ್ಲಾ ಯುವ ಸಮನ್ವಯ ಅಧಿಕಾರಿಗಳು ತಿಳಿಸಿದ್ದಾರೆ.
ಬ್ಯಾಡಗಿ: 9ರಂದು ಸಾಮೂಹಿಕ ವಿವಾಹ
ಬ್ಯಾಡಗಿ: ಪಟ್ಟಣದ ಶ್ರೀ ವೀರಭದ್ರೇಶ್ವರ ಹಾಗೂ ಕಲ್ಮೇಶ್ವರ ದೇವಾಲಯಗಳ 59ನೇ ಜಾತ್ರಾ ಮಹೋತ್ಸವ ಕಾರ್ಯಕ್ರಮಗಳು ಫೆ. 9ರಂದು ನಡೆಯಲಿದೆ. ಜಾತ್ರೆ ಅಂಗವಾಗಿ ಉಚಿತ ಸಾಮೂಹಿಕ ವಿವಾಹಗಳು ನಡೆಯಲಿವೆ. ಮದುವೆ ಆಗಲಿಚ್ಛಿಸುವ ವಧು-ವರರು ಕ್ರಮವಾಗಿ 18 ಹಾಗೂ 21 ವರ್ಷ ದಾಟಿರಬೇಕು. ಸೂಕ್ತ ಜನನ ದಾಖಲೆ, ರಹವಾಸಿ ಪ್ರಮಾಣಪತ್ರ ಹಾಗೂ ಇತ್ತೀಚಿನ ಎರಡು ಭಾವಚಿತ್ರಗಳೊಂದಿಗೆ ಫೆ. 4ರೊಳಗಾಗಿ ತಮ್ಮ ಹೆಸರು ನೋಂದಾಯಿಸಬೇಕು. ವಿವರಗಳಿಗೆ ಸಿ.ಆರ್. ಆಲದಗೇರಿ (ಮೊ. 9448128423), ಕಾರ್ಯದರ್ಶಿ ಮಾಲತೇಶ ಅರಳಿಮಟ್ಟಿ (ಮೊ. 9448150160) ಅಥವಾ ಕೋಶಾಧ್ಯಕ್ಷ ಶಂಭಣ್ಣ ಅಂಗಡಿ (ಮೊ. 9448337111) ಅವರನ್ನು ಸಂಪರ್ಕಿಸಬಹುದು.
ದುಶ್ಚಟ ದೂರವಿಡಿ: ಕರೆ
ಬ್ಯಾಡಗಿ: ಪಾಶ್ಚಾತ್ಯ ಸಂಸ್ಕೃತಿಗೆ ಮಾರುಹೋಗಿರುವ ಯುವ ಸಮುದಾಯ, ದುಶ್ಚಟಗಳಿಗೆ ಬಲಿಯಾಗಿ ಆರೋಗ್ಯ, ನೆಮ್ಮದಿ ಹಾಳು ಮಾಡಿಕೊಳ್ಳುತ್ತಿದೆ ಎಂದು ರೋಟರಿ ಕ್ಲಬ್ ಅಧ್ಯಕ್ಷ ಜೆ.ಎಚ್. ಪಾಟೀಲ ವಿಷಾದಿಸಿದರು. ಶಿಡೇನೂರ ಗ್ರಾಮದ ಡಾ೤ ಬಿ.ಆರ್. ಅಂಬೇಡ್ಕರ್ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ರೆಡ್ ರಿಬ್ಬನ್ ಕ್ಲಬ್ ಉದ್ಘಾಟಿಸಿ ಅವರು ಮಾತನಾಡಿದರು. ಏಡ್ಸ್ ರೋಗಿಗಳನ್ನು ಸಮಾಜದಲ್ಲಿ ತುಚ್ಛವಾಗಿ ಕಾಣುತ್ತಿರುವುದು ಖಂಡನೀಯ. ಪೀಡಿತರಲ್ಲಿ ಆತ್ಮಸ್ಥೈರ್ಯ ತುಂಬಬೇಕು ಎಂದರು. ಎನ್ನೆಸ್ಸೆಸ್ ಯೋಜನಾಧಿಕಾರಿ ಡಿ.ಸಿ. ಚಂದ್ರಪ್ಪ ಮಾತನಾಡಿದರು. ಪ್ರಾಚಾರ್ಯ ಎಚ್.ಬಿ. ಲಿಂಗಯ್ಯ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಸಂಸ್ಥೆ ಮಾಜಿ ಅಧ್ಯಕ್ಷ ಮಾಲತೇಶ ಅರಳಿಮಟ್ಟಿ, ಕೆ. ರಾಮಪ್ಪ, ಎಂ.ಬಿ. ಕೋಡಬಾಳ, ಎಂ.ಎಸ್. ಸಿಂಗ್ಯಾಗೋಳ, ಎಸ್.ಟಿ. ಬೆನ್ನೂರ, ಡಿ.ಎಸ್. ಚವ್ಹಾಣ, ಜಿ.ಎಸ್. ಶಿರಗಂಬಿ, ಜಿ. ವಿಶ್ವನಾಥ, ಕೆ. ತಿಪ್ಪಣ್ಣ ಇದ್ದರು. ಸಂತೋಷ ಲಮಾಣಿ ಪ್ರಾರ್ಥಿಸಿದರು. ಪುಷ್ಪಾ ಗಡಿಗೋಳ ಸ್ವಾಗತಿಸಿದರು. ವಿಶಾಲಾಕ್ಷಿ ಕೊಪ್ಪದಮಠ ನಿರೂಪಿಸಿದರು. ಲೀಲಾವತಿ ಹಿರೇಮಠ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.