ರೈತರಿಗಾದ ಅನ್ಯಾಯ ಸರಿಪಡಿಸಿ
ಶಿಗ್ಗಾಂವಿ: ತಾಲೂಕಿನ ಅಂದಲಗಿ ಗ್ರಾಮದಲ್ಲಿನ ವ್ಯವಸಾಯ ಸೇವಾ ಸಹಕಾರಿ ಸಹಕಾರಿ ಬ್ಯಾಂಕ್ನಲ್ಲಿ ಬೆಳೆವಿಮಾ ಕಂತಿನ ಹಣವನ್ನು ರೈತರಿಂದ ತುಂಬಿಸಿಕೊಂಡು ಸರ್ಕಾರಕ್ಕೆ ತುಂಬದೆ ಬ್ಯಾಂಕಿನ ಸಿಬ್ಬಂದಿ ಹಂಚಿಕೊಂಡು ರೈತ ಸಮೂಹಕ್ಕೆ ವಂಚನೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. 2012ನೇ ಸಾಲಿನ ಬೆಳೆ ವಿಮಾ ಕಂತನ್ನು ಗ್ರಾಮದ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ನಲ್ಲಿ ತುಂಬಿಸಿಕೊಳ್ಳಲಾಯಿತು. ರೈತರು ತುಂಬಿದ ಬೆಳೆವಿಮಾ ಕಂತನ್ನು ಬ್ಯಾಂಕ್ ಸಿಬ್ಬಂದಿ ಸರ್ಕಾರಕ್ಕೆ ತುಂಬಬೇಕಾಗಿತ್ತು. ಆದರೆ, ಬ್ಯಾಂಕ್ ಸಿಬ್ಬಂದಿ ಹಣ ಸ್ವಂತಕ್ಕೆ ಖರ್ಚು ಮಾಡಿದ್ದಾರೆ. ಇದರಿಂದ ರೈತರು ಬೆಳೆವಿಮಾ ಹಣ ಬರದೆ ಚಿಂತೆಗೀಡಾಗಿದ್ದಾರೆ.
ಅಂದಲಗಿ ಗ್ರಾಮದಲ್ಲಿ ಸುಮಾರು 346 ರೈತರು ಬೆಳೆ ವಿಮಾ ಹಣ ತುಂಬಿದ್ದಾರೆ. ಅದರಲ್ಲಿ 248 ರೈತರ ಬೆಳೆ ವಿಮಾ ಕಂತನ್ನು ಬ್ಯಾಂಕ್ ಸಿಬ್ಬಂದಿ ಸರ್ಕಾರಕ್ಕೆ ತುಂಬಿದ್ದಾರೆ. ಉಳಿದ 98 ರೈತರ ಸುಮಾರು ರು. 48 ಸಾವಿರ ವಿಮಾ ಕಂತಿನ ಹಣವನ್ನು ಬ್ಯಾಂಕ್ ಕಾರ್ಯದರ್ಶಿ ಹಾಗೂ ಇಬ್ಬರು ಸಿಬ್ಬಂದಿ ಹಂಚಿಕೊಂಡಿದ್ದಾರೆ. ಹೀಗಾಗಿ ಈವರೆಗೆ ಅವರ ಬೆಳೆವಿಮಾ ಹಣ ಬಾರದಿರುವದನ್ನು ಖಂಡಿಸಿ ಹಿಂದೆ ಪ್ರತಿಭಟಸಿದಾಗ ನಿಜಾಂಶ ಹೊರಬಂದಿದೆ. ವಿಷಯ ಕುರಿತು ಗ್ರಾಮದ ಮುಖಂಡರು, ಹಿರಿಯರ ಸಮ್ಮುಖದಲ್ಲಿ ಸಭೆ ಸೇರಿ ಚರ್ಚಿಸಿದಾಗ ಬ್ಯಾಂಕ್ ಕಾರ್ಯದರ್ಶಿ ಜಗದೀಶ ಹಿರೇಮಠ ಹಾಗೂ ಸಿಬ್ಬಂದಿ ಸಂಕಪ್ಪ ವಗ್ಗನವರ, ನಾಗಪ್ಪ ವಡ್ಡರ ಬೆಳೆವಿಮಾ ಹಣ ವಂಚನೆ ಮಾಡಿರುವುದನ್ನು ತಪ್ಪೊಪ್ಪಿಕೊಂಡಿದ್ದಾರೆ. ಅಲ್ಲದೆ ತಪ್ಪೊಪ್ಪಿಗೆ ಪತ್ರವನ್ನು ಲಿಖಿತವಾಗಿ ನೀಡಿದ್ದಾರೆ. ಸರ್ಕಾರಕ್ಕೆ ವಿಮಾ ಕಂತಿನ ಪರಿಹಾರದಿಂದ ವಂಚನೆಯಾದ ಸುಮಾರು 98 ರೈತರಿಗೆ ರು. 10 ಲಕ್ಷ ನೀಡಬೇಕು ಎಂದು ಸಭೆಯಲ್ಲಿ ವ್ಯಕ್ತಪಡಿಸಲಾಯಿತು. ಆದರೆ, ಈ ಹಣ ಅವರಿಂದ ಮರು ಪಾವತಿಸಲು ಸಾಧ್ಯವಿಲ್ಲ. ಹೀಗಾಗಿ ಮೂವರು ತಲಾ ಒಂದು ಲಕ್ಷ ರು.ಗಳಷ್ಟು ಮರು ಪಾವತಿಸಬೇಕು ಎಂದು ಸಭೆಯಲ್ಲಿನ ಮುಖಂಡರು, ಹಿರಿಯರು ಒಮ್ಮತದ ಅಭಿಪ್ರಾಯ ಮಂಡಿಸಿದರು. ಅದನ್ನು ಬ್ಯಾಂಕ್ನ ಮೂವರು ಸಿಬ್ಬಂದಿ ಒಪ್ಪಿಕೊಂಡು ರು. 3 ಲಕ್ಷ ಇದೆ. ಜುಲೈ 2ರ ಒಳಗೆ ತುಂಬುವುದಾಗಿ ಹೇಳಿದ್ದಾರೆ. ಆದರೆ, ಈವರೆಗೆ ಹಣ ಮರುಪಾತಿ ಮಾಡಿಲ್ಲ ಎಂದು ವಂಚನೆಗೆ ಒಳಗಾದ ರೈತರು ಆತಂಕಕ್ಕೆ ಒಳಗಾಗಿದ್ದಾರೆ.
ತಕ್ಷಣ ಸಂಬಂಧಿಸಿದ ಮೇಲಧಿಕಾರಿಗಳು ಮಧ್ಯ ಪ್ರವೇಶಿಸಿ ಹಾನಿಯಾದ ರೈತರಿಗೆ ನ್ಯಾಯ ನೀಡಲು ಮುಂದಾಗಬೇಕು ಎಂದು ಇಲ್ಲಿನ ರೈತರು ಆಗ್ರಹಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

