ಹಾವೇರಿ

ಮೂಲಭೂತ ಸೌಕರ್ಯ ನೀಡಿ

Published On :

ಶಿಗ್ಗಾಂವಿ: ತಾಲೂಕಿನ ಗಂಗಿಭಾವಿ ರಸ್ತೆಯ ಬೆಲ್ಲದ ಬಸರಿಕಟ್ಟಿ ಗ್ರಾಮಕ್ಕೆ 12ನೇ ಹಣಕಾಸು ಯೋಜನೆಯಡಿ ಹಾಗೂ ನಂಜುಂಡಪ್ಪ ವರದಿಯ ವಿಶೇಷ ಯೋಜನೆಯಲ್ಲಿ ಮೂಲಸೌಕರ್ಯ ಒದಗಿಸಿಕೊಡಬೇಕು ಎಂದು ಉತ್ತರ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಹನುಮಂತ ಬಂಡಿವಡ್ಡರ ಹಾಗೂ ಗ್ರಾಮಸ್ಥರು ತಾಪಂಗೆ ಆಗಮಿಸಿ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಎಂ. ಕುಂದೂರ ಅವರಿಗೆ ಮನವಿ ಅರ್ಪಿಸಿದರು.
ಗಂಗಿಭಾವಿ ರಸ್ತೆಯಲ್ಲಿರುವ ಬೆಲ್ಲದ ಬಸರಿಕಟ್ಟಿ ಗ್ರಾಮಕ್ಕೆ ಮೂಲ ಸೌಕರ್ಯ ಒದಗಿಸಬೇಕು. ಗ್ರಾಮದ ಸರ್ವೆ ನಂ.450 ಮತ್ತು 432ರಲ್ಲಿ ಹಲವಾರು ಜನ ನಿರಾಶ್ರಿತರು ವಾಸವಾಗಿದ್ದು, ಈ ಪ್ರದೇಶದಲ್ಲಿ ಕುಡಿಯುವ ನೀರು, ವಸತಿ, ಶೌಚಾಲಯ ಹಾಗೂ ವಿದ್ಯುತ್ತನ್ನು ಪೂರೈಸುವಂತೆ ಹಾಗೂ ಈ ಗ್ರಾಮಕ್ಕೆ ಗಂಗೀಭಾವಿ ಗಂಗೇನೂರು ಬೆಲ್ಲದ ಬಸರಿಕಟ್ಟಿ ಸೇರಿ ಗ್ರಾಪಂ ಮಾಡಬೇಕೆಂದು ಮನವಿ ಸಲ್ಲಿಸಿದರು.
ಈ ಸಂದರ್ಭ ರಾಜೂ ಕೊಪ್ಪಳ, ರಾಮೂ ಧಾರವಾಡ, ಡಿ.ಎಂ. ಕಮ್ಮಾರ, ಹನುಮಂತಪ್ಪ ಧಾರವಾಡ, ದುರಗಪ್ಪ ಅವಗಿ, ದುರಗವ್ವ, ನಿರ್ಮಲಾ ದ್ಯಾಮವ್ವ, ಶಿಲ್ಪಾ, ಗಿರಿಜವ್ವ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.