ಕಾನೂನಿನ ಅರಿವು ಅಗತ್ಯ
ಹಾನಗಲ್ಲ: ಮನುಷ್ಯನಿಗೆ ನೀರು, ಆಹಾರ, ಗಾಳಿ ಎಷ್ಟು ಮುಖ್ಯವಾಗಿದೆಯೋ ಅದರಂತೆಯೇ ಕಾನೂನಿನ ಅರಿವು ಅವಶ್ಯ ಎಂದು ಹಾನಗಲ್ಲ ಹಿರಿಯ ವಿಭಾಗದ ನ್ಯಾಯಾಧೀಶ ಎಂ. ರಾಮಚಂದ್ರ ಹೇಳಿದರು.
ತಾಲೂಕಿನ ಬೈಚವಳ್ಳಿ ಗ್ರಾಮದಲ್ಲಿ ಕುಮಾರೇಶ್ವರ ಕಲಾ-ವಾಣಿಜ್ಯ ಮಹಾವಿದ್ಯಾಲಯ ಆಯೋಜಿಸಿದ್ದ ಎನ್ಎಸ್ಎಸ್ ಶಿಬಿರದಲ್ಲಿ ಮಾತನಾಡಿದರು. ಗ್ರಾಮೀಣ ಭಾಗದ ಜನತೆಗೆ ಮತದಾನದ ಅರಿವು ಹಾಗೂ ಕಾನೂನಿನ ತಿಳುವಳಿ ಶಿಬಿರಾರ್ಥಿಗಳು ನೀಡುವ ಮೂಲಕ ಅರಿವು ಮೂಡಿಸಬೇಕಾಗಿದೆ. ರೈತರು ಹೊಲಗಳಲ್ಲಿ ಕೊರೆಯಿಸುವ ಕೊಳವೆ ಬಾವಿಗಳನ್ನು ಕಾನೂನಿನ ರಿತ್ಯ 600 ಅಡಿ ದೂರದಲ್ಲಿ ಕೊರೆಯಿಸಿ ಹಾಗೂ ಅಂತರ್ಜಲ ಕಾಯ್ದುಕೊಳ್ಳುವ ಯೋಜನೆಯನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಕಾನೂನಿನ ಪಾಲನೆ ಪ್ರತಿಯೊಬ್ಬರ ಕರ್ತವ್ಯ ಹಾಗೂ ಧರ್ಮವಾಗಿದೆ. ಕಾನೂನನ್ನು ಗೌರವಿಸಿದಾಗ ನಿಮಗೂ ಗೌರವ ಸಿಗುತ್ತದೆ. ಅಂತಹ ವ್ಯಕ್ತಿಗಳು ಎಂದೂ ಕಾನೂನಿನ ತೊಡಕಿನಲ್ಲಿ ಸಿಗಲಾರರು. ಶೋಷಣೆಯಿಂದ ಮುಕ್ತರಾಗಲು ಕಾನೂನನ್ನು ಪಾಲಿಸಿ, ದೇಶದಲ್ಲಿ ಉಚಿತವಾಗಿ ಕಡ್ಡಾಯ ಶಿಕ್ಷಣ ನೀಡಲಾಗುತ್ತಿದೆ. ಅದರ ಅರಿವನ್ನು ಶಿಬಿರಾರ್ಥಿಗಳು ಗ್ರಾಮೀಣ ಭಾಗದಲ್ಲಿ ತಿಳಿಸುವ ಮೂಲಕ ಎಲ್ಲ ಮಕ್ಕಳು ಶಿಕ್ಷಣದ ಕಡೆ ಗಮನ ಹರಿಸಲು ಜಾಥಾ ಮೂಲಕ ಜಾಗೃತಿಗೊಳಿಸಿ ಎಂದರು. ವಿದ್ಯಾರ್ಥಿಗಳೊಂದಿಗೆ ನಡೆದ ಕಾನೂನು ಸಂವಾದ ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ದೆಹಲಿ ಅತ್ಯಾಚಾರ ಪ್ರಕರಣದಿಂದ ದೇಶದಲ್ಲಿ ಮಹಿಳೆಯರಿಗೆ ವಿಶೇಷ ಕಾನೂನು ಜಾರಿಗೊಂಡಿದ್ದು, ಮಹಿಳೆಯರು ಕಾನೂನಿನ ಸದುಪಯೋಗ ಪಡೆದುಕೊಳ್ಳಿ ಎಂದು ವಿದ್ಯಾರ್ಥಿನಿಯರಿಗೆ ಸಲಹೆ ನೀಡಿದರು. ಹಾನಗಲ್ಲ ವಕೀಲರ ಸಂಘದ ಅಧ್ಯಕ್ಷ ರವಿ ಒಡೆಯರ ಮಾತನಾಡಿ, ಯಾವುದೇ ಪ್ರತಿಫಲ ಬಯಸದೆ ಜನೋಪಯೋಗಿ ಕೆಲಸ ಮಾಡಲು ಶಿಕ್ಷಣದ ಜತೆಗೆ ಇಂತಹ ಶಿಬಿರಗಳು ಸಹಕಾರಿಯಾಗುತ್ತವೆ ಎಂದರು. ನ್ಯಾಯವಾದಿ ರವಿಬಾಬು ಪೂಜಾರ ಮೋಟಾರ ವಾಹನ ಕಾಯ್ದೆ ಕುರಿತು ಉಪನ್ಯಾಸ ನೀಡಿದರು. ಮಹಿಳಾ ದೌರ್ಜನ್ಯ ಕುರಿತು ನ್ಯಾಯವಾದಿ ವೀಣಾ ಬ್ಯಾತನಾಳ ಮಾತನಾಡಿದರು. ಕುಮಾರೇಶ್ವರ ಕಾಲೇಜಿನ ಪ್ರಾಚಾರ್ಯ ಪ್ರೊ. ಎನ್.ಬಿ. ಬಣಕಾರ ಅಧ್ಯಕ್ಷತೆವಹಿಸಿದ್ದರು. ಎನ್ಎಸ್ಎಸ್ ಅಧಿಕಾರಿ ಪ್ರಕಾಶ ಹೊಳೇರ ಪ್ರಾಸ್ತಾವಿಕ ಮಾತನಾಡಿದರು. ಶಿವಕುಮಾರ ರೂಗಿಶೆಟ್ಟರ ಸ್ವಾಗತಿಸಿದರು. ಸ್ವಪ್ನಾ ಕೋಟಿ ನಿರೂಪಿಸಿದರು. ಮಂಗಳಾ ಜಿಗಳಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

