ಹಾವೇರಿ

ಅಪಾಯದ ಅಂಚಲ್ಲಿ ನೀರಿನ ಟ್ಯಾಂಕ್

Published On :

ಹಿರೇಕೆರೂರು: ತಾಲೂಕಿನ ಜನತಾ ಪ್ಲಾಟ್‌ನಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಆವರಣದ ನೀರಿನ ಟ್ಯಾಂಕ್ ಮಕ್ಕಳ ಹಿತರಕ್ಷಣೆ ದೃಷ್ಟಿಯಿಂದ ಅಪಾಯ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ನಾಗರೀಕರು ನೀಡಿದ ಮನವಿ ಮೇರೆಗೆ ಕ್ಷೇತ್ರ ಸಮನ್ವಯಾಧಿಕಾರಿ ಎನ್. ಸುರೇಶಕುಮಾರ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದರು.
ಶಾಲಾ ಆವರಣದ ನೀರಿನ ಟ್ಯಾಂಕ್ ಪರಿಶೀಲಿಸಿ ಮಾತನಾಡಿದ ಸುರೇಶಕುಮಾರ, ಶಾಲಾ ಸಮಿತಿ ಅಧ್ಯಕ್ಷರು, ಸದಸ್ಯರು ಮತ್ತು ಇಲ್ಲಿನ ನಾಗರೀಕರು ನೀಡಿದ ಮನವಿ ಮೇರೆಗೆ ಶಾಲೆಗೆ ಭೇಟಿ ನೀಡಿದ್ದು, ಶಾಲೆಯಲ್ಲಿ 1ರಿಂದ 5ನೇ ತರಗತಿ ವರೆಗೆ ಮಕ್ಕಳು ಓದುತ್ತಿದ್ದು ಕೊಠಡಿಗಳ ಕೊರತೆ ಇದೆ. ಶಾಲಾ ಆವರಣದ ನೀರಿನ ಟ್ಯಾಂಕ್‌ನಿಂದ ಮಕ್ಕಳು ಅಪಾಯ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಗ್ರಾಪಂ ಆಸ್ತಿ 85ರಲ್ಲಿ ಶಾಲಾ ಕೊಠಡಿ ನಿರ್ಮಾಣಕ್ಕೆ ಶಿಫಾರಸು ಮಾಡಿದ್ದು, ಶಾಲೆಗೆ ಹೆಚ್ಚುವರಿ ಕೊಠಡಿ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದರು. ನಾಗರಿಕರ ಮನವಿ ಮತ್ತು ಭೇಟಿ ವರದಿಯನ್ನು ಮೇಲಾಧಿಕಾರಿಗಳಿಗೆ ಶೀಘ್ರವೇ ತಲುಪಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ರವಿ ಮೂಲಿಮನಿ, ಉಪಾಧ್ಯಕ್ಷ ಮರ್ದಾನಸಾಬ ಜರಡಿಕಟ್ಟಿ, ಹನುಮಂತಪ್ಪ ಬಿಳಚಿ, ಜಯಪ್ಪ ದ್ಯಾವನಕಟ್ಟಿ, ಶಂಕರಪ್ಪ ಚಲವಾದಿ, ಸರೋಜಮ್ಮ ಪೂಜಾರ, ಮಂಗಳಾ ಹಿರೇಸಂಶಿ, ಗಂಗಮ್ಮ ಗಾವಟೆ, ರೇಣುಕಾ ಉಪ್ಪಾರ, ಮಂಜಪ್ಪ ಉಪ್ಪಾರ, ಬಸವರಾಜಪ್ಪ ಕಾಯಕದ, ನಾಗಪ್ಪ ಬಣಕಾರ, ಬಸವಣ್ಣೆಪ್ಪ ಕೊರವರ, ಎಚ್.ಎಸ್. ಮಾಜಿಗೌಡ್ರ, ವಿ.ಆರ್. ಪೂಜಾರ, ಅನ್ನಪೂರ್ಣಾ, ಬಸನಗೌಡ, ಪರಶುರಾಮ ಪಚ್ಚೇರ ಮುಂತಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.