ಅಧಿಕಾರಿಗಳ ಕಿರಿಕಿರಿ; ಪ್ರತಿಭಟನೆ ಎಚ್ಚರಿಕೆ
ಸಿದ್ದಾಪುರ: ಸರ್ಕಾರದ ಬಸವವಸತಿ ಯೋಜನೆಯಿಂದ ಜಿಲ್ಲೆಯಲ್ಲಿ ಕಾರ್ಮಿಕರು ಸೇರಿದಂತೆ ಬಹಳಷ್ಟು ಮಂದಿ ಯೋಜನೆಯನ್ನು ಅವಲಂಬಿತರಾಗಿ ಮನೆ ನಿರ್ಮಾಣಕ್ಕೆ ಮುಂದಾಗುತ್ತಿದ್ದು ಇದಕ್ಕೆ ಕೆಲ ಅಧಿಕಾರಿಗಳು ತಡೆ ಒಡ್ಡುತ್ತಿದ್ದಾರೆ ಎಂದು ಸಿದ್ದಾಪುರ ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.
ಗ್ರಾ.ಪಂ. ವ್ಯಾಪ್ತಿಯ ಅಂಬೇಡ್ಕರ್ ನಗರದ 22 ಫಲಾನುಭವಿಗಳಿಗೆ ಮನೆ ನಿರ್ಮಾಣ ಮಾಡಲು ಗ್ರಾ.ಪಂ.ನಿಂದ ಅನುಮತಿ ನೀಡಲಾಗಿದ್ದು, ಈಗಾಗಲೇ 11 ಫಲಾನುಭವಿಗಳು ಮನೆ ನಿರ್ಮಾಣ ಕಾರ್ಯದಲ್ಲಿ ತೊಡಗಿ ಅಡಿಪಾಯದ ಕೆಲಸವೂ ಸಂಪೂರ್ಣ ಮುಗಿದಿದ್ದು ಯೋಜನೆಯ ಹಣಕ್ಕಾಗಿ ಪಂಚಾಯ್ತಿಗೆ ಅರ್ಜಿ ಸಲ್ಲಿಸಿದ ಸಂದರ್ಭ ಪಿ.ಡಬ್ಯು.ಡಿ. ಸಹಾಯಕ ಕಾರ್ಯಪಾಲಕ ಅಧಿಕಾರಿಯೊಬ್ಬರು ರಸ್ತೆ ಅಗಲೀಕರಣವಾಗುತ್ತಿದ್ದು ಇಲ್ಲಿ ಮನೆಗಳ ನಿರ್ಮಾಣ ಮಾಡಬಾರದು ಎಂದು ಪಂಚಾಯ್ತಿಗೆ ಆದೇಶಿಸಿದ್ದಾರೆ ಎಂದಿ ಪಂಚಾಯ್ತಿ ಅಧ್ಯಕ್ಷರು ಫಲಾನುಭಾವುಗಳಿಗೆ ತಿಳಿಸಿದ ಹಿನ್ನಲೆ ಆಕ್ರೋಶಭರಿತರಾದ ಫಲಾನುಭಾವಿಗಳು ಪಂಚಾಯಿತಿಗೆ ಮುತ್ತಿಗೆ ಹಾಕಿದ ಘಟನೆ ಶುಕ್ರವಾರ ನಡೆಯಿತು.
ಫಲಾನುಭವಿ ಲಕ್ಷ್ಮಿ ಪತ್ರಿಕೆಯೊಂದಿಗೆ ಮಾತನಾಡಿ, ಕೂಲಿ ಕಾರ್ಮಿಕರಾಗಿರುವ ನಾವು ತುಂಬಾ ಕಷ್ಟದಲ್ಲಿ ಸಾಲ ಮಾಡಿ ಮನೆ ನಿರ್ಮಾಣದ ಅಡಿಪಾಯ ಮಾಡಿದ್ದೇವೆ.
ಮನೆ ನೆಲಸಮ: ಇದಕ್ಕೆ ತಡೆಯೊಡ್ಡುತ್ತಿರುವುದರಿಂದ ನಮಗೆ ಮತ್ತೆ ಅಡಿಪಾಯ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ನಾವು ವಾಸವಿದ್ದ ಮನೆಗಳನ್ನು ನೆಲಸಮ ಮಾಡಲಾಗಿದೆ. ಈಗ ಮಳೆ ಬರುತ್ತಿರುವ ಸಮಯವಾಗಿರುವುದರಿಂದ ಸಾಕಷ್ಟು ತೊಂದರೆಯಾಗಿದೆ. ಕೂಡಲೇ ಮನೆಗಳ ನಿರ್ಮಾಣಕ್ಕೆ ಅಡ್ಡಿಪಡಿಸದೆ ಯೋಜನೆಯ ಹಣ ನೀಡಬೇಕು. ಇಲ್ಲದಿದ್ದಲ್ಲಿ ಮಂಗಳವಾರದಂದು ಗ್ರಾ.ಪಂ. ಮುಂದೆ ಉಪವಾಸ ಸತ್ಯಾಗ್ರಹ ಮಾಡುತ್ತೇವೆ ಎಂದು ಎಚ್ಚರಿಸಿದ್ದಾರೆ.
ಎಸ್.ಡಿ.ಪಿ.ಐ. ಬೆಂಬಲ: ಅಂಬೇಡ್ಕರ್ ನಗರದ ನಿವಾಸಿಗಳ ಮನೆ ನಿರ್ಮಾಣ ಅಡ್ಡಿಪಡಿಸುತ್ತಿರುವುದನ್ನು ಖಂಡಿಸಿದಲ್ಲದೆ ಮಂಗಳವಾರದಂದು ಗ್ರಾ.ಪಂ. ಮುಂದೆ ಉಪವಾಸ ಸತ್ಯಾಗ್ರಹಕ್ಕೆ ಸ್ಥಳೀಯ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟ್ ಆಫ್ ಇಂಡಿಯಾ ಶಾಖಾ ವತಿಯಿಂದ ಬೆಂಬಲ ಸೂಚಿಸಿರುವುದಾಗಿ ಶಾಖಾ ಅಧ್ಯಕ್ಷ ಮುಸ್ತಫಾ ತಿಳಿಸಿದ್ದಾರೆ. ಅಂಬೇಡ್ಕರ್ ನಗರಕ್ಕೆ ಎಸ್.ಡಿ.ಪಿ.ಐ. ಜಿಲ್ಲಾಧ್ಯಕ್ಷ ಎಂ.ಎ.ಫಜಲುಲ್ಲಾ ಭೇಟಿ ನೀಡಿ ಪರಿಶೀಲಿಸಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿ, ಗ್ರಾ.ಪಂ. ಬೇಜವಾಬ್ದಾರಿಯಿಂದ ಇಲ್ಲಿನ ನಿವಾಸಿಗಳು ಯೋಜನೆಯಿಂದ ವಂಚಿತರಾಗಿ ಬೀದಿಗೆ ಬರುವಂತಾಗಿದೆ. ಈ ಹಿಂದೆಯೇ ಜಾಗವನ್ನು ಪರಿಶೀಲನೆ ಮಾಡಿ ಅನುಮತಿ ನೀಡಿದ್ದಲ್ಲಿ ಇಂತಹ ಸಮಸ್ಯೆ ಉದ್ಭವಿಸುತ್ತಿರಲಿಲ್ಲ. ಪಂಚಾಯ್ತಿ ನಿರ್ಲಕ್ಷ್ಯದಿಂದ ಫಲಾನುಭವಿಗಳಿಗೆ ತೊಂದರೆ ಉಂಟಾಗುತ್ತಿದ್ದು ಕೂಡಲೇ ಗ್ರಾ.ಪಂ. ಆಡಳಿತ ಮಂಡಳಿ ಸೂಕ್ತ ವ್ಯವಸ್ಥೆ ಕಲ್ಪಿಸಬೇಕೆಂದು ಒತ್ತಾಯಿಸಿದ್ದಾರೆ.
ಗ್ರಾ.ಪಂ. ಸದಸ್ಯ ಮಜೀದ್, ಶೌಕತ್ ಅಲಿ ಹಾಗು ಪಿ.ಎಫ್.ಐ. ಜಿಲ್ಲಾಧ್ಯಕ್ಷ ಉಸ್ಮಾನ್ ತ್ಯಾಗತ್ತೂರು, ಎಸ್.ಡಿ.ಪಿ.ಐ ಪಕ್ಷದ ಪಧಾದಿಕಾರಿಗಳಾದ ಹುಸೈನ್, ರಹೀಂ, ಶಾಹುಸ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

