ಮಡಿಕೇರಿ ಮುನೀಶ್ವರ ವೀರಭದ್ರ ದೇವಸ್ಥಾನ: ಇಂದು ಮಹಾಶಿವರಾತ್ರಿ, ವಾರ್ಷಿಕೋತ್ಸವ
ಮಡಿಕೇರಿ: ಮಡಿಕೇರಿಯ ಶ್ರೀ ಮುನೀಶ್ವರ ವೀರಭದ್ರ ದೇವಾಲಯದಲ್ಲಿ ಭಾನುವಾರ ಮಹಾಶಿವರಾತ್ರಿ ಮತ್ತು ವಾರ್ಷಿಕೋತ್ಸವ ಕಾರ್ಯಕ್ರಮಗಳು ಜರುಗಲಿದೆ.
ಭಾನುವಾರ ಬೆಳಗ್ಗೆ ದೇವಾಲಯದ ಪುನರ್ ಪ್ರತಿಷ್ಠಾಪನೆಯ ವಾರ್ಷಿಕೋತ್ಸವ ಪ್ರಯುಕ್ತ ಪೂಜಾ ಕಾರ್ಯಕ್ರಮಗಳು ನಡೆಯಲಿದ್ದು, ಬೆಳಗ್ಗೆ 8 ಗಂಟೆಯಿಂದ ಗುರುಗಣಪತಿ ಪೂಜೆ, ಅಲಂಕಾರ ಪೂಜೆ, ಮಹಾಪೂಜೆ, ದೀಪಾರಾಧನೆ, ತೀರ್ಥಪ್ರಸಾದ ವಿನಿಯೋಗ, ಬೆಳಗ್ಗೆ 9 ಗಂಟೆಗೆ ಉತ್ಸವ ಮೂರ್ತಿಯ ಶೋಭಾಯಾತ್ರೆ, ಮಧ್ಯಾಹ್ನ 12 ಗಂಟೆಗೆ ಸಭಾಕಾರ್ಯಕ್ರಮ, 12.30 ಗಂಟೆಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ.
ಸಭಾ ಕಾರ್ಯಕ್ರಮದಲ್ಲಿ ವಿಧಾನಸಭಾಧ್ಯಕ್ಷ ಕೆ.ಜಿ. ಬೋಪಯ್ಯ, ಸಚಿವ ಎಂ.ಪಿ. ಅಪ್ಪಚ್ಚು ರಂಜನ್, ಜಿ.ಪಂ. ಸದಸ್ಯ ರವಿಕುಶಾಲಪ್ಪ, ಉದ್ಯಮಿ ಎಂ.ಪಿ. ಸುನೀಲ್ ಸುಬ್ರಹ್ಮಣಿ, ಉದ್ಯಮಿ ಪಿ.ಜಿ. ಮಂಜುನಾಥ್, ನಗರಸಭಾಧ್ಯಕ್ಷ ಎಚ್.ಎಂ. ನಂದಕುಮಾರ್, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಶಜೀಲ್ ಕೃಷ್ಣ, ಶ್ರೀ ರಾಜರಾಜೇಶ್ವರಿ ದೇವಾಲಯದ ಕಾರ್ಯದರ್ಶಿ ಡಾ. ವಾಸುದೇವ್ ಎಚ್.ಎಸ್., ಉದ್ಯಮಿ ಎಸ್.ಸಿ. ಸುಬ್ರಹ್ಮಣಿ, ನಗರಸಭಾ ಸದಸ್ಯ ಬಿ.ಎಂ. ರಾಜೇಶ್, ಸತೀಶ್ ಪೈ, ಬಿ.ಕೆ. ಅರುಣ್ ಕುಮಾರ್ ಪಾಲ್ಗೊಳ್ಳಲಿದ್ದಾರೆ.
ಸಂಜೆ 7.30 ರಿಂದ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳ ಸಂದರ್ಭದ ಸಭಾ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷ ಎಂ.ಬಿ. ದೇವಯ್ಯ ಅಧ್ಯಕ್ಷತೆ ವಹಿಸಲಿದ್ದು, ಮಡಿಕೇರಿಯ ಓಂಕಾರೇಶ್ವರ ದೇವಾಲಯ ಸಮಿತಿಯ ಅಧ್ಯಕ್ಷ ಕೆ.ಎಸ್. ರಮೇಶ್ ಹೊಳ್ಳ ಉದ್ಘಾಟಿಸಲಿದ್ದಾರೆ.
ಮುನೇಶ್ವರ ವೀರಭದ್ರ ದೇವಾಲಯ ಮತ್ತು ಮಡಿವಾಳರ ಅಭಿವೃದ್ಧಿ ಸಂಘದ ಅಧ್ಯಕ್ಷ ಪಿ.ಜಿ. ಸುಕುಮಾರ್, ನಗರಸಭಾ ಸದಸ್ಯರಾದ ಟಿ.ಎಸ್. ಪ್ರಕಾಶ್, ಕೆ.ಎಸ್. ರಮೇಶ್, ಪಿ.ಟಿ. ಉಣ್ಣಿಕೃಷ್ಣ, ಬೊಳ್ಳಚಂಡ ಪ್ರದೀಪ್, ಉದ್ಯಮಿ ಎಸ್.ಸಿ. ಹರೀಶ್, ಬಜರಂಗದಳದ ಸಹಸಂಚಾಲಕ ಕೆ.ಎಚ್. ಚೇತನ್, ಬಿಜೆಪಿ ಯುವಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡೀನ್ ಬೋಪಣ್ಣ ಪಾಲ್ಗೊಳ್ಳಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

