ರಾಜ್ಯಮಟ್ಟದ ಫುಟ್ಬಾಲ್: ಗ್ರೀನ್ಸ್ ತಂಡಕ್ಕೆ ಟ್ರೋಫಿ
ಸೋಮವಾರಪೇಟೆ: ಇಲ್ಲಿನ ಸಮೀಪದ ಶುಂಠಿ ಗ್ರಾಮದ ಟೀಮ್ ಶುಂಠಿ ಸ್ಪೋರ್ಟ್ಸ್ ಯೂತ್ ಕ್ಲಬ್ ವತಿಯಿಂದ ಗೌಡಳ್ಳಿಯ ನವದುರ್ಗಾ ಪರಮೇಶ್ವರಿ ದೇವಾಲಯದ ಜಾತ್ರೋತ್ಸವದ ಅಂಗವಾಗಿ ಗೌಡಳ್ಳಿ ಪ್ರೌಢಶಾಲಾ ಮೈದಾನದಲ್ಲಿ ಆಯೋಜಿಸಿರುವ ರಾಜ್ಯಮಟ್ಟದ ಮುಕ್ತ ಫುಟ್ಬಾಲ್ ಪಂದ್ಯಾವಳಿಯಲ್ಲಿ ಉತ್ತಮ ಆಟ ಪ್ರದರ್ಶಿಸುವ ಮೂಲಕ ಕಟ್ಟೆಮಾಡುವಿನ ಗ್ರೀನ್ಸ್ ತಂಡ ಟ್ರೋಫಿಯನ್ನು ತನ್ನದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು.
ಶನಿವಾರ ನಡೆದ ಫೈನಲ್ ಪಂದ್ಯಾಟದಲ್ಲಿ ಕಟ್ಟೆಮಾಡು ಗ್ರೀನ್ಸ್ ತಂಡವು ಅಮ್ಮತ್ತಿಯ ಮಿಲನ್ ಬಾಯ್ಸ್ ತಂಡವನ್ನು 3 - 1 ಗೋಲುಗಳಿಂದ ಸೋಲಿಸಿ ಟ್ರೋಫಿಯನ್ನು ಪಡೆದುಕೊಂಡಿತು.
ವಿಜಯಿ ತಂಡದ ಪರ ಪ್ರಕಾಶ್, ರಾಜು ಹಾಗೂ ಕಾರ್ತಿಕ್ ತಲಾ ಒಂದೊಂದು ಗೋಲುಗಳಿಸಿದರು. ಮಿಲನ್‌ಬಾಯ್ಸ್ ಅಮ್ಮತ್ತಿ ತಂಡದ ಪರವಾಗಿ ವಿನು ಏಕೈಕ ಗೋಲು ಬಾರಿಸಿದರು. ಕಟ್ಟೆಮಾಡು ಗ್ರೀನ್ಸ್ ತಂಡದ ಪರವಾಗಿ ನೈಜೀರಿಯದ ಪಾಮ್ ಮತ್ತು ಕಿಂಗ್ಲೆ ಅತ್ಯುತ್ತಮ ಆಟ ಪ್ರದರ್ಶಿಸುವ ಮೂಲಕ ಗಮನ ಸೆಳೆದರು.
ಶನಿವಾರ ಪೂರ್ವಾಹ್ನ ನಡೆದ ಕ್ವಾರ್ಟರ್ ಫೈನಲ್‌ನ ಪ್ರಥಮ ಪಂದ್ಯಾಟದ ಕ್ವಾರ್ಟರ್ ಫೈನಲ್‌ನಲ್ಲಿ ಮಂಜುನಾಥ ಯೂತ್ ಕ್ಲಬ್ ಹಿತ್ತಲಕೇರಿ- ಚನ್ನಕೇಶವ ಹಾರಳ್ಳಿ ನಡುವಿನ ಪಂದ್ಯಾಟದಲ್ಲಿ ಚನ್ನಕೇಶವ ಹಾರಳ್ಳಿ ತಂಡ 2-0 ಗೋಲುಗಳಿಂದ ವಿಜಯ ಸಾಧಿಸಿತು. ವಿಜಯಿ ತಂಡದ ಪರ ಮುಲಾನ್ ಮತ್ತು ವಿಜು ತಲಾ ಒಂದೊಂದು ಗೋಲು ಗಳಿಸಿದರು. ಮತ್ತೊಂದು ಕ್ವಾರ್ಟರ್ ಫೈನಲ್‌ನಲ್ಲಿ ಮಿಲನ್ ಬಾಯ್ಸ್ ಅಮ್ಮತ್ತಿ- ಪ್ಲೇ ಬಾಯ್ಸ್ ಗೋಪಾಲಪುರ ನಡುವಿನ ಪಂದ್ಯಾಟದಲ್ಲಿ ಮಿಲನ್ ಬಾಯ್ಸ್ ತಂಡವು 3- 0 ಗೋಲುಗಳಿಂದ ಜಯಗಳಿಸಿತು. ವಿಜಯಿ ತಂಡದ ಪರ ಅನು, ಕರಣ್ ಹಾಗೂ ಅಬುಬಕ್ಕರ್ ತಲಾ ಒಂದೊಂದು ಗೋಲುಗಳಿಸಿದರು.
ಮೇಘನ್ ಫ್ರೆಂಡ್ಸ್ ಮತ್ತು ಅಮ್ಮತ್ತಿ ನಡುವಿನ ಸೆಮಿ ಫೈನಲ್ ಪಂದ್ಯದಲ್ಲಿ ಅಮ್ಮತ್ತಿ ಮಿಲನ್ ಬಾಯ್ಸ್ ತಂಡ ಜಯಗಳಿಸಿತು. ವಿಜಯಿ ತಂಡದ ಪರ ಈಜ ಮತ್ತು ಅಬುಬಕ್ಕರ್ ತಲಾ ಒಂದೊಂದು ಗೋಲುಗಳಿಸಿದರು. ಮತ್ತೊಂದು ಸೆಮಿ ಫೈನಲ್ ಪಂದ್ಯದಲ್ಲಿ ಕಟ್ಟೆಮಾಡಿನ ಗ್ರೀನ್ಸ್ ತಂಡವು ಹಾರಳ್ಳಿಯ ಚನ್ನಕೇಶವ ತಂಡವನ್ನು 5-0 ಗೋಲುಗಳಿಂದ ಸೋಲಿಸಿತು.
ವಿಜಯಿ ತಂಡದ ಪರ ಕಿಂಗ್ಲೆ, ಅಜಯ್, ರಾಜು, ಪಾಮ್ ಹಾಗೂ ಸುನೀಲ್ ತಲಾ ಒಂದೊಂದು ಗೋಲು ಬಾರಿಸಿದರು.
ಪಂದ್ಯಾಟದ ಉತ್ತಮ ಆಟಗಾರರಾಗಿ ಕಟ್ಟೆಮಾಡು ಗ್ರೀನ್ಸ್ ತಂಡದ ಅಜಯ್, ಉತ್ತಮ ಮುನ್ನೆಡೆ ಆಟಗಾರರಾಗಿ ಹಾರಳ್ಳಿ ಚನ್ನಕೇಶವ ತಂಡದ ಚಂದ್ರಶೇಖರ್, ಉತ್ತಮ ಗೋಲ್ ಕೀಪರ್ ಆಗಿ ಅಮ್ಮತ್ತಿಯ ಮಿಲನ್ ಬಾಯ್ಸ್ ತಂಡದ ನಾಸಿರ್, ಉತ್ತಮ ರಕ್ಷಣಾ ಆಟಗಾರನಾಗಿ ಕಟ್ಟೆಮಾಡು ಗ್ರೀನ್ಸ್ ತಂಡದ ಕಿಂಗ್ಲೆ ಪ್ರಶಸ್ತಿಗೆ ಭಾಜನರಾದರು. ಕೊರ್ಲಳ್ಳಿಯ ಹಂಟರ್ ತಂಡವನ್ನು ಉತ್ತಮ ತಂಡವೆಂದು ಘೋಷಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

