ಕೋಲಾರ

ಪರಿಸರ ನಾಶದ ಜತೆಗೆ ಮನುಕುಲವೂ ವಿನಾಶದತ್ತ

Published On :


ಗೌರಿಬಿದನೂರು: ಸಾವಿರಾರು ವರ್ಷಗಳಿಂದ ಉಳಿಸಿಕೊಂಡು ಬಂದಿದ್ದ ಪರಿಸರವನ್ನು ನಾವು ಕೇವಲ 50ವರ್ಷಗಳಲ್ಲಿ ನಾಶಮಾಡುತ್ತಾ ಬಂದಿದ್ದು, ಇಂದು ಮನುಕುಲವೇ ನಾಶವಾಗುವಂತಹ ಹಂತಕ್ಕೆ ತಲುಪುತ್ತಿದ್ದೇವೆ ಎಂದು ವೈದ್ಯ ಹಾಗೂ ಕೃಷಿ ವಿಜ್ಞಾನಿ ಡಾ.ಎ.ಖಾದರ್ ವಿಷಾದ ವ್ಯಕ್ತಪಡಿಸಿದರು. ಪಟ್ಟಣದ ಎಸ್ಎಸ್ಇಎ ಸರ್ಕಾರಿ ಪಪೂ ಕಾಲೇಜಿನಲ್ಲಿ ಆಧುನಿಕ ಆಹಾರ ಪದ್ಧತಿಯ ಅನಂತ ಅಪಾಯಗಳು   ಎಂಬ ವಿಷಯ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪ್ರತಿ ವರ್ಷ ಮೇ 9 ಅನ್ನು ಭೂಗೋಳದ ಕರಾಳದಿನ ಎಂದು ಕರೆಯುತ್ತಿದ್ದೇವೆ. ಕಾರಣ ಮನುಕುಲಕ್ಕೆ ಬೇಕಾದ ಇಂಗಾಲ ಆಮ್ಲವನ್ನು 200 ಬಿಪಿಎಂನಿಂದ 400 ಬಿಪಿಎಂಗೆ ಹೆಚ್ಚಲು ಕಾರಣರಾಗಿ ಪ್ರಕೃತಿಯ ಸಮತೋಲನ ತಪ್ಪಿದೆ. ಇದರಿಂದ ಇಂದಿನ ಪೀಳಿಗೆಯ ಮಕ್ಕಳಿಗೆ ನೀರು, ಗಾಳಿ, ನೆಲ, ಎಲ್ಲವನ್ನೂ ಉಳಿಸಿಕೊಡುತ್ತಿದ್ದ ಇಂಗಾಲ ಆಮ್ಲ ಉತ್ಪಾದನೆಯಾಗದಂತಹ ಮಟ್ಟ ತಲುಪಿದೆ ಎಂದರು. ಹಿಮಾಲಯದಲ್ಲಿ ಹಿಮಕರಗಿ ನೀರಾಗಿ ಗಂಗಾನದಿಯ ಪ್ರವಾಹ ಹೆಚ್ಚಾಗಿ ಪ್ರಳಯವಾಯಿತು. ಇನ್ನು 10ರಿಂದ 20 ವರ್ಷಗಳಲ್ಲಿ ಈ ಮಹಾನದಿ ಬತ್ತಿಹೋಗುತ್ತದೆ. ಅದೇರೀತಿ ಕರ್ನಾಟಕದಲ್ಲಿ ಪಶ್ಚಿಮಘಟ್ಟಗಳಲ್ಲಿ ಹುಟ್ಟುವ ಜೀವನದಿಗಳೂ ಮಾಯವಾಗುತ್ತವೆ. ಕಾಡಿನ ಪ್ರಮಾಣ ಇಳಿಮುಖವಾಗಿದ್ದು. ಇದರಿಂದಾಗಿ ಇಂಗಾಲದ ಕೊರತೆ ಉಂಟಾಗಿ, ಮಳೆ ನೀರನ್ನು ಹಿಡಿದಿಟ್ಟಿಕೊಳ್ಳುವ ಗುಣ ಕಡಿಮೆಯಾಗಿದೆ ಎಂದು ತಿಳಿಸಿದರು. ಸಾಹಿತಿ, ಗಾಯಕ ಗೊಲ್ಲಹಳ್ಳಿ ಶಿವಪ್ರಸಾದ್ ಮಾತನಾಡಿ, ಪ್ರಾಣಿ, ಪಕ್ಷಿ, ಗಿಡಮರಗಳು ಪ್ರಕೃತಿ ನಾಶವಾಗುತ್ತಿದ್ದು, ಇವುಗಳ ಸಂರಕ್ಷಣೆಗೆ ಯುವ ಪೀಳಿಗೆ ಕಂಕಣಬದ್ಧರಾಗಬೇಕು ಎಂದು ಹೇಳಿದರು. ಸಮಾರಂಭ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಅಸಾದುಲ್ಲಾ ಖಾನ್ ವಹಿಸಿದ್ದರು. ಜಲತಜ್ಞ ಕೆ.ನಾರಾಯಣಸ್ವಾಮಿ ಪ್ರಾಸ್ತಾವಿಕ ಭಾಷಣ ಮಾಡಿದರು. ಮುಖ್ಯೋಪಾಧ್ಯಾಯ ಸಿದ್ದಪ್ಪ, ಸಮಾಜಸೇವಕ ನಾಗೇಶ್, ಶ್ರೀನಿವಾಸ್,  ಪುರಸಭಾ ಮಾಜಿ ಅಧ್ಯಕ್ಷೆ ಗೀತಾ ಜಯಂಧರ್ ಉಪಸ್ಥಿತರಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.