ರಾಜಕೀಯ ವೈಷಮ್ಯ ಬಿಟ್ಟು ಅಭಿವೃದ್ಧಿ ಕಡೆ ಚಿಂತಿಸಿ
ಕನ್ನಡಪ್ರಭ ವಾರ್ತ್ಣೆ ಕೋಲಾರ್ಣಆ.5
ಗ್ರಾಮೀಣ ಪ್ರದೇಶದ ಜನತೆ ರಾಜಕೀಯ ವೈಷಮ್ಯ ಬದಿಗೊತ್ತಿ ಅಭಿವದ್ಧಿಯ ಹಾದಿಯಲ್ಲಿ ಸಾಗುವುದಕ್ಕೆ ಚಿಂತನೆ ನಡೆಸಿ ಸಾಮರಸ್ಯದಿಂದ ಬದುಕಬೇಕೆಂದು ಶಾಸಕ ವರ್ತೂರು ಪ್ರಕಾಶ್ ಕಿವಿಮಾತು ಹೇಳಿದರು.
ತಾಲೂಕಿನ ಹುಲ್ಲಂಕಲ್ಲು ಗ್ರಾಮದಲ್ಲಿ ಭಾನುವಾರ ಜೆಡಿಎಸ್ ಮುಖಂಡರನ್ನು ತಮ್ಮ ಬಣಕ್ಕೆ ಸೇರ್ಪಡೆ ಮಾಡಿಕೊಂಡು ನಂತರ ಸಮಾರಂಭದಲ್ಲಿ ಮಾತನಾಡಿದ ಅವರು, ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಕೆಲವು ರಾಜಕಾರಣಿಗಳು ಗ್ರಾಮಗಳಲ್ಲಿ ಜಿದ್ದಾಜಿದ್ದಿ ರಾಜಕಾರಣದ ವಾತಾವರಣ ನಿರ್ಮಾಣ ಮಾಡುತ್ತಾರೆ. ಆದರೆ ನನಗೆ ರಾಜಕೀಯಕ್ಕಿಂತ ಕ್ಷೇತ್ರದ ಜನತೆಯ ನೆಮ್ಮದಿಯ ಬದುಕು ಮುಖ್ಯ ಎಂದರು. ಗ್ರಾಮಗಳಲ್ಲಿ ಕೆಲವು ಪ್ರಕರಣಗಳಲ್ಲಿ ಪೊಲೀಸ್, ಕೋರ್ಟ್ ಮೆಟ್ಟಿಲು ಹತ್ತುವ ಬದಲು ಗ್ರಾಮಗಳಲ್ಲಿ ಎಲ್ಲರೂ ಸೌಹಾರ್ದ ಭಾವನೆಯಿಂದ ರಾಜಿ ಸಂಧಾನದ ಮೂಲಕ ಸಮಸ್ಯೆಗಳನ್ನು ಇತ್ಯರ್ಥ ಪಡಿಸಿಕೊಂಡು ಸಹಬಾಳ್ವೆ ನಡೆಸುವಂತೆ ಸಲಹೆ ಮಾಡಿದರು.
ಜಿ.ಪಂ ಮಾಜಿ ಅಧ್ಯಕ್ಷ ಮುನಿನಾರಾಯಣಪ್ಪ ಮಾತನಾಡಿ, ಬೈರೇಗೌಡರ ಕಾಲದಲ್ಲೂ ವಿಶೇಷ ಅನುದಾನ ಮಂಜೂರು ಮಾಡಿಸಿಕೊಂಡು ಬರುವುದು ಕಷ್ಟಸಾಧ್ಯವಾಗಿತ್ತು. ಆದರೆ, ವರ್ತೂರು ಪ್ರಕಾಶ್ ಅವರು ವಿಶೇಷ ಅನುದಾನಗಳನ್ನು ಕ್ಷೇತ್ರಕ್ಕೆ ತಂದು ಡಾಂಬರು, ಸಿಮೆಂಟ್ ರಸ್ತೆಗಳ ಕಾಂಗಾರಿಯನ್ನು ಶರವೇಗದಲ್ಲಿ ನಡೆಸಿದ್ದಾರೆ. ಕ್ಷೇತ್ರದ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ಜನತೆ ಕುಡಿಯುವ ನೀರಿನ ಬವಣೆ ತಪ್ಪಿಸಿದ್ದಾರೆ ಎಂದು ಹೇಳಿದರು. ಅರ್ಬನ್ ಬ್ಯಾಂಕ್ ಅಧ್ಯಕ್ಷ ರಾಜಣ್ಣ, ಹುಲ್ಲಂಕಲ್ಲು ಈರಪ್ಪ, ಗ್ರಾಪಂ ಸದಸ್ಯ ಬೈರಪ್ಪ, ತಾಪಂ ಸದಸ್ಯ ಮುನಿಬೈರಪ್ಪ, ಮುನಿರಾಜು, ತಿಮ್ಮರಾಯಪ್ಪ, ಚಾಕಾರಸನಹಳ್ಳಿ ಮಂಜುನಾಥ್ ಮತ್ತಿತರರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

