ಕೋಲಾರ

ಕಾರು ಪಲ್ಟಿಯಾಗಿ ಭಸ್ಮ: ಸ್ಥಳದಲ್ಲೇ ಯುವಕ ಸಾವು

Published On :


ಕ.ಪ್ರ.ವಾರ್ತೆ   ಚಿಕ್ಕಬಳ್ಳಾಪುರ   ಆ.6
ಶಬ್ಬೇಖಾದರ್ ಹಬ್ಬದ ಜಾಗರಣೆ ಮುಗಿಸಿ ವಾಪಸ್ಸಾಗುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಕಾರು ಹಳ್ಳಕ್ಕೆ ಬಿದ್ದು ಬೆಂಕಿಹೊತ್ತಿಕೊಂಡ ಪರಿಣಾಮ ಸುಟ್ಟು ಕರಕಲಾಗಿದೆ. ಅಲ್ಲದೆ, ಕಾರಿನಲ್ಲಿದ್ದ ಸಾಫ್ಟ್ವೇರ್ ಕಂಪನಿ ನೌಕರ ಸ್ಥಳದಲ್ಲೇ ಮೃತಪಟ್ಟ ಘಟನೆ ಮಂಗಳವಾರ ಮುಂಜಾನೆ ತಾಲೂಕಿನ ಕುಪ್ಪಹಳ್ಳಿ ಬಳಿ ನಡೆದಿದೆ.
ಬೆಂಗಳೂರಿನ ಎಸ್ಎಸ್ಎಜಿ ಐಟಿ ಸಾಫ್ಟ್ವೇರ್ ಕಂಪನಿ ಉದ್ಯೋಗಿ, ವೆಂಕಟೇಶಪುರಂ ನಿವಾಸಿ ಮಹಮ್ಮದ್ ತನ್ವೀರ್ (27) ಮೃತಪಟ್ಟ ಯುವಕ. ಘಟನೆಯಲ್ಲಿ ಅಜೀಜ್ ಖಾನ್, ಅಹ್ರಾರ್ ಅಹ್ಮದ್, ಜುಬೇದ್ ಅಹ್ಮದ್, ಮಹಮದ್ ಆಸೀಫ್ ಮತ್ತು ಮಹಮದ್ ಇಬ್ರಾಹಿಂ ಎಂಬವರು ತೀವ್ರವಾಗಿ ಗಾಯಗೊಂಡಿದ್ದಾರೆ. ಬೆಂಗಳೂರಿನ ಕೊಲಂಬಿಯಾ ಏಶಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆಯ ವಿವರ:  ಬೆಂಗಳೂರಿನಿಂದ ಕೆ.ಎ.19. ಪಿ.8947 ಮಿಟ್ಯುಬಿಷಿ ವಾಹನದಲ್ಲಿ ತಾಲೂಕಿನ ನಂದಿ ಗ್ರಾಮದ ಅಸ್ತಾನೆ ಹಜರತ್ ಮೈದಾನ ಸುಲ್ತಾನ್ ಜಹಂಗೀರ್ ಬಾದಶಹ- ಖಾದ್ರಿ ರಾ ದರ್ಗಾಗೆ ಜಾಗರಣೆಗೆಂದು  ಆರು ಜನ ಬಂದಿದ್ದರು. ಜಾಗರಣೆ ಮುಗಿಸಿಕೊಂಡು ಮಂಗಳವಾರ ಮುಂಜಾವ 3.45ರ ವೇಳೆಗೆ ಬೆಂಗಳೂರು ಕಡೆಗೆ ತೆರಳುತ್ತಿದ್ದರು. ನಂದಿಯಿಂದ ಕುಪ್ಪಹಳ್ಳಿಯ ಕ್ರಾಸ್ ಬಳಿಗೆ ಬರುತ್ತಿದ್ದಂತೆ ವಾಹನ ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಮುಗುಚಿ ಬಿದ್ದಿತು.
ಆರಕ್ಷಕ ಉಪಾಧೀಕ್ಷಕ ಎ.ಬಿ.ದೇವಯ್ಯ, ವೃತ್ತ ನಿರೀಕ್ಷಕ ಮಹೇಶಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗ್ರಾಮಾಂತರ ಠಾಣೆಯ ಸಬ್ಇನ್ಸ್ಪೆಕ್ಟರ್ ನಯಾಜ್ ಬೇಗ್ ಪ್ರಕರಣ ದಾಖಲಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.