ಕೋಲಾರ

ವಿದ್ವಾಂಸರಿಲ್ಲದ ಸಭೆ ಕತ್ತಲು ತುಂಬಿದಂತೆ'

Published On :

ತುಮಕೂರು:  ವಿದ್ವಾಂಸರಿಲ್ಲದ ಸಭೆ ಕತ್ತಲೆ ತುಂಬಿದಂತೆ ಎಂದು ನಿವೃತ್ತ ಉಪನ್ಯಾಸಕ ಡಾ. ಅನಂತ ಪದ್ಮನಾಭರಾವ್ ಅಭಿಪ್ರಾಯಪಟ್ಟರು.
ನಗರದ ಎಸ್.ಎಸ್. ಪುರಂನ ವಾಸವಿ ದೇವಾಲಯದಲ್ಲಿ ಗಮಕ ಭಾರತಿ ಚಾರಿಟಬಲ್ ಟ್ರಸ್ಟ್ ನಿಂದ ನಡೆದ 8 ದಿವಸಗಳ ಗಮಕ ಹಬ್ಬದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿ, ಹಿಂದೆ ರಾಜರ ಆಸ್ಥಾನದಲ್ಲಿ ಗಮಕಿಯು ಸಹ ವಿಶೇಷ ಸ್ಥಾನ ಪಡೆದಿದ್ದ. ಗಮಕಿಗೆ ಮತ್ತೊಂದು ಹೆಸರು ಮಾತರಿವ ಮಾತು ಬಲ್ಲವನು. ಗಮಕ ಶಾಸ್ತ್ರೀಯ ಸಂಗೀತಕ್ಕೆ ಭಿನ್ನವಾಗಿ ಬೆಳೆದಿದೆ. ಭಾವ ಪ್ರಧಾನವಾದ ಕಾವ್ಯಗಳು ಈ ಕಲೆಯಲ್ಲಿ ಮೂಡಿದೆ. ಇದಕ್ಕೆ ಪೂರಕವಾಗಿ ಷಟ್ಪದಿಗಳು ಪ್ರಾಮುಖ್ಯತೆಯನ್ನು ಹೊಂದಿವೆ ಎಂದರು.
ಪಾಶ್ಚಿಮಾತ್ಯ ದೇಶಗಳಲ್ಲಿಯೂ ಈ ಕಲೆ ಪ್ರಸಿದ್ಧಿ ಹೊಂದಿದೆ. 1852 ರಲ್ಲಿ ಸ್ಯಾಂಡರ್ಸನ್ ಎಂಬ ಆಂಗ್ಲ ಕವಿ ಜೈಮಿನಿ ಭಾರತವನ್ನು ಅನುವಾದ ಮಾಡಿದ್ದ. ಕವಿಯ ಉದ್ದೇಶ ಭಕ್ತಿ ಪ್ರಸಾರ. ಚರ್ತುಮುಖ ವ್ಯಕ್ತಿತ್ವಗಳಲ್ಲಿ ದಿಗ್ವಿಜಯವೂ ಪ್ರಮುಖವಾಗಿದೆ. ಅಶ್ವಮೇಧಿಕಾ ಪರ್ವದ ಸಂಧಿಯಲ್ಲಿ 34 ಸಂಧಿಗಳಿದ್ದು 19 ಸಂಧಿಗಳಲ್ಲಿ ಶ್ರೀ ಕೃಷ್ಣನ ಪ್ರವೇಶವಾಗಿದೆ. ನಾದಮಯವೇ ಕಥೆಗಳ ವೈಶಿಷ್ಟ್ಯತೆಯು ಲಕ್ಷ್ಮೀಶ ಕವಿಯ ಜೈಮಿನಿ ಭಾರತದಲ್ಲಿತ್ತು ಎಂದರು.
ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಸಹಾಯಕ ಮಹಾಪ್ರಬಂಧಕ ಬಿ. ನಾಗೇಶ್ ಅವರು ವೇದಿಕೆಯಲ್ಲಿ ಹಾಜರಿದ್ದರು. ತುಮಕೂರು ವಿಶ್ವವಿದ್ಯಾಲಯದಲ್ಲಿ ಡೆಪ್ಯೂಟಿ ರಿಜಿಸ್ಟ್ರಾರ್ ಆಗಿ ಕಾರ್ಯನಿರ್ವಹಿಸುತ್ತಿರುವ ಬಿ.ಎನ್. ವೇಣುಗೋಪಾಲ ಮಾತನಾಡಿ ಗಮಕ ಅಪೂರ್ವವಾದ ಕಲೆ. ಇದನ್ನು ಪರಿಪೂರ್ಣವಾಗಿ ಕರಗತ ಮಾಡಿಕೊಂಡರೆ ಸಮಾಜದಲ್ಲಿ ಕ್ಷಿಪ್ರ ಸಾತ್ವಿಕತೆಯನ್ನು ಸೃಷ್ಟಿಸಬಹುದು ಎಂದರು.
ಲಕ್ಷ್ಮೀಶ ಕವಿಯ ಕಾವ್ಯಗಳಲ್ಲಿ ಪಾಂಡಿತ್ಯ ಮತ್ತು ಪ್ರತಿಭೆಯನ್ನು ಕಾಣಬಹುದು. ಇವೆರೆಡನ್ನು ಮೇಳೈಸುವ ಕವಿಗಳು ಅತಿ ವಿರಳ ಲಕ್ಷ್ಮೀಶ ಅವರನ್ನು ವರಕವಿ ಬೇಂದ್ರೆ ಸಹ ಮೆಚ್ಚಿದ ಕವಿಯಾಗಿ ಹೊರಹೊಮ್ಮಿದ್ದಾರೆ ಎಂದರು.
ನಗರದ ಬಾಲಪ್ರತಿಭೆಗಳಾದ ಮಹಿಮಾ ಕುಮಾರಿ ಇಂಚರ ಅವರಿಂದ ಸುಧನ್ವ ಭಕ್ತಿ ಎಂಬ ಕಾವ್ಯ ಭಾಗವನ್ನು ವಾಚನ, ವ್ಯಾಖ್ಯಾನ ಮಾಡಿ ಜನಮನಗೆದ್ದರು.  ವಂದೇ ಮಾತರಂ ಗೀತ ಗಾಯನ, ಶ್ರೀ ಶೈಲದೇಶಿಕನ್ ವಂದಿಸಿದರು. ಟ್ರಸ್ಟ್ನ ಕೋಶಾಧಿಕಾರಿ ನಾ. ವೆಂಕಟೇಶ ಜೋಯಿಸ್ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.