ಆಧುನಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳಿ: ವಾಸು
ಮಾಲೂರು: ಕಡಿಮೆ ನೀರಿನಲ್ಲಿ ಅತಿ ಹೆಚ್ಚು ಬೆಳೆ ಬೆಳೆಯುವಂತಹ ಆಧುನಿಕ ಕೃಷಿಪದ್ಧತಿಗಳಿಗೆ ಪೂರಕವಾಗಿ ಬಯಲು ಸೀಮೆ ರೈತರು ತಮ್ಮ ಕೃಷಿ ವ್ಯವಸ್ಥೆ ಬದಲಾಯಿಸಿಕೊಳ್ಳಬೇಕು ಎಂದು ಎಸ್ಬಿಎಂನ ಎ.ಜಿ.ಎಂ. ವಾಸು ಹೇಳಿದರು.
ಬುಧವಾರ ರೈತ ಮೇಳದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನದಿ-ಹೊಳೆ ಇಲ್ಲದ ಈ ಬಯಲು ಸೀಮೆ ರೈತರು ಕೃಷಿಗೆ ಕೊಳವೆಬಾವಿಗಳನ್ನು ನಂಬಿದ್ದಾರೆ. ಅಂತರ್ಜಲ ಕಡಿಮೆ ಆಗುತ್ತಿರುವ ಹಿನ್ನೆಲೆ ಕೊಳವೆಬಾವಿಗಳು ಸಂಪೂರ್ಣ ವಿಫಲವಾಗಿ ಬೆಳೆ ನಷ್ಟವಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಸಾಲದಲ್ಲಿ ಹುಟ್ಟುವ ರೈತ, ಸಾಲದಲ್ಲೇ ಬೆಳೆದು ಸಾಲದಲ್ಲೇ ಸಾಯುವಂತಾಗುತ್ತಿದೆ. ಈ ನಿಟ್ಟಿನಲ್ಲಿ ರೈತ ತನ್ನ ಕೃಷಿ ಜತೆಯಲ್ಲಿ ಪ್ರಾಣಿಗಳ ಸಾಕಣೆ ಸೇರಿದಂತೆ ಇತರೆ ವ್ಯವಹಾರದಲ್ಲಿ ತೊಡಗಿಸಿಕೊಳ್ಳುವುದು ಅನಿವಾರ್ಯ ಎಂದರು.
ತಾಲೂಕಿನ ಜನತೆ ಒತ್ತಾಯದ ಮೇರೆಗೆ ತಾಲೂಕಿನ ಮಾಸ್ತಿಯಲ್ಲಿ ಶೀಘ್ರದಲ್ಲೇ ನೂತನ ಶಾಖೆ ಪ್ರಾರಂಭಿಸಲಾಗುವುದು. ಸಾಲಗಾರರ ಮರುಪಾವತಿ ಮೇಲೆಯ ಬ್ಯಾಂಕ್ನ ಭವಿಷ್ಯ ನಿಂತಿದೆ ಎಂಬುದನ್ನು ಗ್ರಾಹಕರು ಮರೆಯಬಾರದು ಎಂದರು. ಮುಖ್ಯ ವ್ಯವಸ್ಥಾಪಕ ಆನಂದ್ ಸೆಲ್ವಂ, ಸ್ಥಳೀಯ ಶಾಖೆ ವ್ಯವಸ್ಥಾಪಕ ಕೃಷ್ಣಮೂರ್ತಿ ಮಾತನಾಡಿದರು. ಇದೇ ಸಂದರ್ಭ ನಿಗದಿತ ವೇಳೆಯಲ್ಲಿ ಸಾಲ ಮರುಪಾವತಿ ಮಾಡಿದ ರೈತರನ್ನು ಸನ್ಮಾನಿಸಲಾಯಿತು. ಅರ್ಹ ರೈತರಿಗೆ ಸಾಲದ ಚೆಕ್ಗಳನ್ನು ಸಹ ಇದೇ ಸಂದರ್ಭ ವಿತರಿಸಲಾಯಿತು.
ಅಭಿವೃದ್ಧಿ ವಿಸ್ತಿರಣಾಧಿಕಾರಿ ಶಿವಾಜಿ ರಾವ್, ನಾರಾಯಣ ಸ್ವಾಮಿ, ಸರ್ವೆಶ್ ಸೇರಿದಂತೆ ತಾಲೂಕಿನ ಪ್ರಗತಿ ಪರ ರೈತರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

