ರೇಷ್ಮೆ ಪಾಠ ಕಲಿತ ವಿದೇಶಿ ವಿದ್ಯಾರ್ಥಿಗಳು
ಶಿಡ್ಲಘಟ್ಟ: ಚಿಟ್ಟೆಯಿಂದ ಬಟ್ಟೆವರೆಗೂ ನಾನಾ ಹಂತಗಳಲ್ಲಿ ಸಾಗುವ ತಾಲೂಕಿನ ರೇಷ್ಮೆ ವ್ಯವಸಾಯ, ಉದ್ದಿಮೆ ನೋಡಲು, ತಿಳಿಯಲು ಮತ್ತು ಮಾಹಿತಿ ಸಂಗ್ರಹಿಸಲು ಬುಧವಾರ ಸುಮಾರು ಆರು ದೇಶಗಳ 25 ಮಂದಿ ವಿದ್ಯಾರ್ಥಿಗಳು ಆಗಮಿಸಿದ್ದರು.
ಮೆಕ್ಸಿಕೊ, ಚಿಲಿ, ಸ್ಪೇನ್, ಜರ್ಮನಿ, ಚೀನಾ ಮತ್ತು ಅಮೆರಿಕಾ ದೇಶಗಳಿಂದ ವಿದೇಶಿ ಸಾಂಸ್ಕೃತಿಕ ವಿನಿಮಯದ ಕಾರ್ಯಕ್ರಮದಲ್ಲಿ ಆಗಮಿಸಿರುವ ವಿದ್ಯಾರ್ಥಿಗಳು ರೇಷ್ಮೆಯ ವಿವಿಧ ಹಂತಗಳ ಬಗ್ಗೆ ತಿಳಿದರು. ಹಿತ್ತಲಹಳ್ಳಿಯ ರೈತ ಸುರೇಶ್ ಅವರ ಚಾಕಿ ಕೇಂದ್ರಕ್ಕೆ ಭೇಟಿ ನೀಡಿ ಚಿಟ್ಟೆಯಿಂದ ಮೊಟ್ಟೆಯಿರಿಸಿದ ನಂತರ ನಿರ್ಧಿಷ್ಟ ತಾಪಮಾನದಲ್ಲಿ ಸಣ್ಣ ಹುಳುಗಳನ್ನು ಬೆಳೆಸುವ ರೀತಿ ಮತ್ತು ಅದಕ್ಕಾಗಿ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಮಾಹಿತಿ ಪಡೆದರು. ಹಿಪ್ಪುನೇರಳೆ ತೋಟ, ರೇಷ್ಮೆ ಹುಳು ಸಾಕಣೆ ಮನೆ, ಗೂಡು ಬೇರ್ಪಡಿಸುವ ಕ್ರಮ, ರೇಷ್ಮೆಗೂಡಿನ ಮಾರುಕಟ್ಟೆ, ಫಿಲೇಚರಿನಲ್ಲಿ ರೇಷ್ಮೆಗೂಡಿನಿಂದ ಕಚ್ಚಾ ನೂಲು ತೆಗೆಯುವುದು, ಹುರಿ ಮಾಡುವುದು ಹಾಗೂ ಮಗ್ಗಗಳಿಂದ ಬಟ್ಟೆ ತಯಾರಿಕಾ ವಿಧಾನಗಳನ್ನು ವೀಕ್ಷಿಸಿದರು. ನಾನಾ ಹಂತಗಳಲ್ಲಿ ದುಡಿಯುವ ಕಾರ್ಮಿಕರನ್ನು ಮಾತನಾಡಿಸಿ ಅವರ ವೇತನ, ಜೀವನ ಕ್ರಮಗಳ ಬಗ್ಗೆ ಕೇಳಿ ತಿಳಿದರು.
ತಾಲೂಕಿನ ಮಳ್ಳೂರು ಗ್ರಾಮದ ಸರ್ಕಾರಿ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟದಲ್ಲಿ ಪಾಲ್ಗೊಂಡು ವಿದ್ಯಾಥರ್ಗಳೊಂದಿಗೆ ಊಟ ಮಾಡಿ ಮಕ್ಕಳೊಂದಿಗೆ ಸಂವಾದ ನಡೆಸಿದರು.
ಬಹಳಷ್ಟು ಜನರ ಶ್ರಮದಿಂದ ತಯಾರಾಗುವ ಬಟ್ಟೆಯ ಮೂಲ ಒಂದು ಸಣ್ಣ ಚಿಟ್ಟೆ ಎಂದರೆ ನಿಜಕ್ಕೂ ಅಚ್ಚರಿಯಾಗುತ್ತದೆ ಎಂದು ಜರ್ಮನಿಯ ವಿದ್ಯಾರ್ಥಿನಿಯೊಬ್ಬರು ಅಭಿಪ್ರಾಯ ಹಂಚಿಕೊಂಡರು. ಉಪನಿರ್ದೇಶಕ ಮಹೇಶ್, ನರಸಿಂಹಮೂರ್ತಿ, ಡಾ.ಫಣಿರಾಜ್, ರೇಷ್ಮೆ ವಿಸ್ತರಣಾಧಿಕಾರಿಗಳಾದ ಚಂದ್ರಪ್ಪ, ರಾಮಕುಮಾರ್, ಲಕ್ಷ್ಮಣ್, ಜನಾರ್ದನಮೂರ್ತಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಗುರುರಾಜ್, ರೈತರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

