ಕೆಜಿಎಫ್-ಬೆಂಗಳೂರಿಗೆ ಪುಷ್ಪುಲ್ ರೈಲು ಆರಂಭ
ಟಿ ಆರ್. ರಜನೀಕಾಂತ್
ಕೆಜಿಎಫ್: ಕ್ಷೇತ್ರದ ಲಕ್ಷಾಂತರ ಜನರ 10 ವರ್ಷಗಳ ಬೇಡಿಕೆಯಾದ ಮಾರಿಕುಪ್ಪಂ ಬೆಂಗಳೂರು ಹೆಚ್ಚುವರಿ ನೂತನ ರೈಲು ಪ್ರಾರಂಭಕ್ಕೆ ಚಾಲನೆ ದೊರೆತಿದ್ದು, ಸ್ಥಳೀಯ ಪ್ರಯಾಣಿಕರಿಂದ ಭಾರಿ ಸ್ಪಂದನೆ ವ್ಯಕ್ತವಾಗಿದೆ. ಆ.10ರಿಂದ ನೂತನ ಪುಷ್ಪುಲ್ ರೈಲಿನಿಂದ ಕೆಜಿಎಫ್ನಿಂದ ಬೆಂಗಳೂರಿಗೆ ರೈಲು ವ್ಯವಸ್ಥೆಯಾಗಿದೆ.
ಕೆಜಿಎಫ್ನಿಂದ ಮುಂಜಾನೆ 4 ಗಂಟೆಗೆ ಎದ್ದು ಬೆಂಗಳೂರು ಸೇರಿದಂತೆ ಇತರೇ ಪ್ರದೇಶಗಳಿಗೆ ಹೋಗುವ ಸಾವಿರಾರು ವಿದ್ಯಾರ್ಥಿಗಳು, ವ್ಯಾಪಾರಸ್ಥರು, ಕಾರ್ಮಿಕರು, ಕೆಲಸ ಕಾರ್ಯಗಳಿಗೆ ಹೋಗುವ ಯುವಕ, ಯುವತಿಯರು ಮಹಿಳೆಯರು ಖಾಸಗಿ ಬಸ್ಗಳು, ಆಟೋಗಳು ಮುಂತಾದ ವಾಹನಗಳಲ್ಲಿ ಕೆಜಿಎಫ್ನಿಂದ ಬಂಗಾರಪೇಟೆ ಹೋಗಿ ಅಲ್ಲಿಂದ ಬೆಳಗಿನ ಜಾವ 4 ಗಂಟೆ ಸಮಯದಲ್ಲಿ ಬರುವ ಹೌರಾ ಸೂಪರ್ ಫಾಸ್ಟ್, ಕನ್ಯಾಕುಮಾರಿ ಎಕ್ಸ್ಪ್ರೆಸ್, ಕಾವೇರಿ ಎಕ್ಸ್ಪ್ರೆಸ್, ತಿರುಪತಿ ಫಾಸ್ಟ್ ಪ್ಯಾಸೆಂಜೆರ್ ಮತ್ತಿತರ ರೈಲುಗಳಲ್ಲಿ ಪ್ರಯಾಣಿಸುತ್ತಿದ್ದರು. ಈ ರೈಲುಗಳಲ್ಲಿ ಕಡಿಮೆ ಬೋಗಿಗಳಿರುವ ಕಾರಣ ಸಾವಿರಾರು ಪ್ರಯಾಣಿಕರು ಒಮ್ಮೆಗೆ ಹತ್ತಲು ಸಾಧ್ಯವಾಗುತ್ತಿರಲಿಲ್ಲ. ರಿಸರ್ವೇಷನ್, ಸ್ಲೀಪಿಂಗ್ ಕೋಚ್ಗಳಲ್ಲಿ ಟಿಕೆಟ್ ಪಡೆದು ಪ್ರಯಾಣಿಸಬೇಕಾಗುತ್ತದೆ.
ಇದರಿಂದ ಆ ಕೋಚ್ನ ಪ್ರಯಾಣಿಕರಿಗೆ ತೊಂದೆರೆ ಆಗುತ್ತಿರುವುದಾಗಿ ಮೇಲಿಂದ ಮೇಲೆ ದೂರುಗಳು ಬರುತ್ತಿದ್ದುದರಿಂದ ಕೆಜಿಎಫ್ನಿಂದ ಮುಂಜಾನೆ 4 ಗಂಟೆಗೆ ಕೆಲಸ ಕಾರ್ಯಗಳಿಗೆ ಹೋಗುವ ಪ್ರಯಾಣಿಕರ ಅನುಕೂಲಕ್ಕಾಗಿ ಕೆಜಿಎಫ್ನ ಮಾರಿಕುಪ್ಪಂನಿಂದ ಬೆಂಗಳೂರಿಗೆ ನೂತನ ರೈಲು ಬಿಡಬೇಕು ಎಂದು ಕ್ಷೇತ್ರದ ಜನತೆ 10 ವರ್ಷಗಳಿಂದ ಕೋಲಾರ ಜಿಲ್ಲೆಯವರಾದ ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ಮತ್ತು ಸಂಬಂಧಪಟ್ಟ ರೇಲ್ವೆ ಅಧಿಕಾರಿಗಳಿಗೆ ಸುಮಾರು ಮನವಿ ಬೇಡಿಕೆಗಳನ್ನು ಇಡಲಾಗಿತ್ತು.
ಈ ಹಿನ್ನೆಲೆಯಲ್ಲಿ ಈ ಕ್ಷೇತ್ರದ ಜನರ ಅನುಕೂಲಕ್ಕಾಗಿ ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ಅವರು ಕೇಂದ್ರ ಸರ್ಕಾರಕ್ಕೆ ಈ ಕುರಿತು ಕ್ರಮಕ್ಕೆ ಆಗ್ರಹಿಸಿದ್ದರು. ಅವರ ಮನವಿ ಮೇರೆಗೆ 2012- 13ನೇ ಸಾಲಿನ ರೇಲ್ವೆ ಬಜೆಟ್ನಲ್ಲಿ ನೂತನ ಪುಷ್ಪುಲ್ ಪ್ಯಾಸೆಂಜರ್ ರೈಲು ಬಿಡಲು ತೀರ್ಮಾನ ಕೈಗೊಳ್ಳಲಾಗಿತ್ತು.
ಆ.10ರಂದು ಉದ್ಘಾಟನೆ: ಈ ಪುಷ್ಪುಲ್ ರೈಲು ಮಾರಿಕುಪ್ಪಂನಿಂದ ಬೆಳಗ್ಗೆ 4.45ಕ್ಕೆ ಹೊರಟು 7.30ಕ್ಕೆ ಬೆಂಗಳೂರು ತಲುಪಲಿದೆ ಮತ್ತು ಅದೇ ರೈಲು ಬೆಂಗಳೂರಿನಿಂದ ರಾತ್ರಿ 8.15ಕ್ಕೆ ಹೊರಟು ಬೆಳಗ್ಗೆ 10.30ಕ್ಕೆ ಮಾರಿಕುಪ್ಪಂ ತಲುಪಲಿದೆ ಎಂದು ರೇಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರಿನ ರೇಲ್ವೆ ವಿಭಾಗಾಧಿಕಾರಿಗಳಾದ ಅನಿಲ್ ಅಗರ್ವಾಲ್ ಹಾಗೂ ಮಿಶ್ರಾಜೀ ಅವರಿಂದ ನೂತನ ಪುಷ್ಪುಲ್ ರೈಲಿನ ಮಾರ್ಗ ಪರಿಶೀಲನೆ ಸಹ ನಡೆಸಲಾಗಿದೆ. ಆ.10ರಂದು ಈ ನೂತನ ಪುಷ್ಪುಲ್ ರೈಲ್ ಸಂಚಾರಕ್ಕೆ ಕೇಂದ್ರ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಉದ್ಘಾಟಿಸುವರು. ಕೇಂದ್ರ ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಸಚಿವ ಕೆ.ಎಂ. ಮುನಿಯಪ್ಪ ಅಧ್ಯಕ್ಷತೆ ವಹಿಸುವರು. ಉದ್ಘಾಟನೆಗೆ ರೇಲ್ವೆ ಇಲಾಖೆ ವತಿಯಿಂದ ಸಕಲ ಸಿದ್ಧತೆಗಳಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ರೇಲ್ವೆ ವಿಭಾಗಾಧಿಕಾರಿ ಮತ್ತು ಇನ್ನಿತರ ವಿಭಾಗಗಳ ಅಧಿಕಾರಿಗಳಿಂದ ತಿಳಿದುಬಂದಿದೆ.
ಸಂಭ್ರಮ: ಸರ್ಕಾರದ ರೈಲು ಸೇವೆ ವರ್ಷಗಳಿಂದ ಕಾಯುತ್ತಿದ್ದ ಜನರಲ್ಲಿ ಸಂಭ್ರಮ ಮೂಡಿಸಿದೆ. ಆ.10ರಿಂದ ಚಾಲನೆಗೊಳ್ಳಲಿರುವ ನೂತನ ಪುಷ್ಪುಲ್ ರೈಲಿನಿಂದ ಕೆಜಿಎಫ್ನಿಂದ ಬೆಂಗಳೂರಿಗೆ ಹೋಗುವ ಸಾವಿರಾರು ಪ್ರಯಾಣಿಕರು ಅತಿಯಾದ ಸಂತೋಷ ವ್ಯಕ್ತಪಡಿಸಿದ್ದಾರೆ. ಈ ರೈಲಿನಿಂದ ಮಾಲೂರು, ದೆವನಹಳ್ಳಿ, ವೈಟ್ ಫೀಲ್ಡ್, ಕೆ.ಆರ್.ಪುರಂ, ಬಯ್ಯಪ್ಪನಹಳ್ಳಿ, ಕಂಟೋನ್ಮೆಂಟ್ ಪ್ರದೇಶಗಳಿಗೆ ಹೋಗುವವರಿಗೆ ಹೆಚ್ಚು ಅನುಕೂಲವಾಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

