ಅಲಂಬಗಿರಿ ವೆಂಕಟರಮಣಸ್ವಾಮಿಗೆ ಶ್ರಾವಣಮಾಸದ ವಿಶೇಷ ಪೂಜೆ
ಕೋಲಾರ: ಅವಿಭಜಿತ ಕೋಲಾರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಪುರಾಣ ಪ್ರಸಿದ್ಧ ಆಲಂಬಗಿರಿ ಕ್ಷೇತ್ರದ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ಶ್ರಾವಣ ಮಾಸದ ಅಂಗವಾಗಿ ಇಡೀ ತಿಂಗಳು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ದೇವಾಲಯ ಸಮಿತಿ ಅಧ್ಯಕ್ಷರಾದ ಡಾ.ಎಂ.ಆರ್.ಜಯರಾಂ ತಿಳಿಸಿದ್ದಾರೆ.
ಶ್ರಾವಣ ಮಾಸದ ಶುದ್ಧ ಪಾಡ್ಯಮಿಯಿಂದ ಆರಂಭಗೊಳ್ಳುವ ಈ ವಿಶೇಷ ಪೂಜೆಗಳು ಪ್ರತಿದಿನವೂ ನಡೆಯಲಿದ್ದು, ಪ್ರತಿ ಶ್ರಾವಣ ಶನಿವಾರ ಸ್ವಾಮಿಯ ವಿಶೇಷ ಉತ್ಸವ ಕಾರ್ಯಕ್ರಮಗಳನ್ನು ಸಹಾ ಆಯೋಜಿಸಲಾಗಿದೆ.
ಶ್ರಾವಣ ಮಾಸದ ನಿತ್ಯ ಪೂಜೆಗೆ ನೂರಾರು ಭಕ್ತರು ತಮ್ಮ ಹೆಸರು ನೊಂದಾಯಿಸಿದ್ದು, ಒಂದೊಂದು ದಿನದ ಪೂಜೆಯನ್ನು ನಡೆಸಿಕೊಡುತ್ತಿದ್ದಾರೆ.
ಆ.10ರ ಪ್ರಥಮ ಶ್ರಾವಣ ಶನಿವಾರ ಕೈವಾರದ ಯೋಗಿನಾರೇಯಣ ಮಠದ ಧರ್ಮಾಧಿಕಾರಿಗಳು ಆಗಿರುವ ದೇವಾಲಯ ಸಮಿತಿ ಅಧ್ಯಕ್ಷ ಡಾ. ಎಂ.ಆರ್. ಜಯರಾಂ ಅವರೇ ವಿಶೇಷ ಪೂಜೆಯ ಉಸ್ತುವಾರಿ ವಹಿಸಿದ್ದು, ಇನ್ನು ಹಲವಾರು ಮಂದಿ ಕೈಜೋಡಿಸಿದ್ದಾರೆ.
2ನೇ ಶನಿವಾರದಂದು ಚಿಂತಾಮಣಿ ಶಾಸಕರಾದ ಜೆ.ಕೆ. ಕೃಷ್ಣಾರೆಡ್ಡಿ ಮತ್ತಿತರರು ಪೂಜೆ ನಡೆಸಿಕೊಡುತ್ತಿದ್ದು, ಆ.18ರಂದು ಜೋಡಿದಾರ್ ಎಂ.ನಾರಾಯಣಪ್ಪ ಮತ್ತು ಕುಟುಂಬದವರು, ಸಾವಿತ್ರಮ್ಮ, ಸಿ.ಎಲ್.ಪುರುಷೋತ್ತಮ ಕುಟುಂಬದವರು ವಿಶೇಷ ಪೂಜೆ ನಡೆಸಿಕೊಡುತ್ತಿದ್ದಾರೆ.
ಉಳಿದಂತೆ 3ನೇ ಶನಿವಾರ ಬೆಂಗಳೂರಿನ ಡಾ.ಸತ್ಯಮೂರ್ತಿ, ಪಾಂಡುರಂಗರಾವ್ ಮತ್ತಿತರರು, 4ನೇ ಶನಿವಾರ ಬೆಂಗಳೂರಿನ ಆರ್ಪಿಎಂ ಶ್ರೀನಿವಾಸಲು, ಆರ್ಪಿಎಂ ಸತ್ಯನಾರಾಯಣ್, ಶಕುಂತಲಮ್ಮ ಸಂಗಡಿಗರು ಪೂಜೆ ನಡೆಸಿಕೊಡುತ್ತಿದ್ದು, ಸೆ.5 ರವರೆಗೂ ಶ್ರಾವಣಮಾಸದ ಪೂಜಾ ಕಾರ್ಯಗಳು ನಿರಂತರವಾಗಿ ನಡೆಯಲಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

