ಕೃಷಿ ಇಲಾಖೆ ವಿತರಿಸುವ ಗೊಬ್ಬರ ಗುಣಮಟ್ಟದ್ದು
ಕ.ಪ್ರ.ವಾರ್ತೆ ಮಾಲೂರು ಆ.9
ಇಲಾಖೆಯಿಂದ ವಿತರಣೆ ಆಗುತ್ತಿರುವ ಎರೆಹುಳು ಗೊಬ್ಬರ ಉತ್ತಮ ಗುಣಮಟ್ಟ ಹೊಂದಿದೆ. ರೈತ ಸಂಘದ ಆಪಾದನೆ ಹಿಂದೆ ಮಾಹಿತಿ ಕೊರತೆ ಎದ್ದು ಕಾಣುತ್ತಿದೆ ಎಂದು ಕೃಷಿ ಸಹಾಯಕ ಅಧಿಕಾರಿ ರಂಗಸ್ವಾಮಿ ಪ್ರತಿಕ್ರಿಯಿಸಿದ್ದಾರೆ.
ರಾಜ್ಯ ರೈತ ಸಂಘದ ಜಿಲ್ಲಾ ಪ್ರಮುಖರು ಇತ್ತೀಚೆಗೆ ಕೃಷಿ ಇಲಾಖೆಯಿಂದ ವಿತರಣೆ ಆಗುತ್ತಿರುವ ಎರೆಹುಳು ಗೊಬ್ಬರ ಕಳಪೆಯಾಗಿದೆ. ವಿತರಣೆ ಮಾಡದಂತೆ ಆಗ್ರಹಿಸಿದ್ದ ಹಿನ್ನೆಲೆ ಸ್ಪಷ್ಟೀಕರಣ ನೀಡಿದ ಕೃಷಿ ಅದಿಕಾರಿ ರಂಗಸ್ವಾಮಿ, ಕರ್ನಾಟಕ ಕಾಂಪೋಸ್ಟ್ ಡೆವಲಪ್ಮೆಂಟ್ ಕಾರ್ಪೋರೇಷನ್ ಸಂಸ್ಥೆಯಿಂದ ಸರಬರಾಜುವಾಗುತ್ತಿರುವ ಗೊಬ್ಬರ ತ್ಯಾಜ್ಯ ವಸ್ತುಗಳಿಂದ ತಯಾರಾಗಿ ರೂಪ ಹಾಗೂ ಗುಣಧರ್ಮಗಳು ಉತ್ಪಾದನೆ ಬಳಸುವ ತಾಜ್ಯ ವಸ್ತುಗಳ ಮೇಲೆ ಅವಲಂಬಿಸಿರುತ್ತದೆ. ತಾಲೂಕಿನಲ್ಲಿ ಬಹುತೇಕ ರೈತರು ರಾಗಿ ಬೆಳೆಗೆ ಬಳಸಿದ್ದು, ಉತ್ತಮ ಬೆಳೆ ಬಂದಿರುವುದೇ ಗೊಬ್ಬರದ ಗುಣಮಟ್ಟ ಸೂಚಿಸುತ್ತಿದೆ ಎಂದರು.
ಲಘು ಪೋಷಕಾಂಶಗಳ ಈ ಗೊಬ್ಬರವು ಮಾದರಿ ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಟ್ಟು, ಅನುಮತಿ ಪಡೆದು ಬಂದಿದೆ. ಇದುವರೆಗೂ ತಾಲೂಕಿನ ಯಾವ ರೈತನಿಂದ ಗೊಬ್ಬರದ ಬಗ್ಗೆ ದೂರು ಬಂದಿಲ್ಲ ಎಂದಿದ್ದಾರೆ. ಸಾರಜನಕ ಶೇ. 1.0-1.3, ರಂಜಕ ಶೇ.0.8-1.1, ಪೊಟ್ಯಾಷ್ ಶೇ.0.8-1.3 ಹಾಗೂ ಮರಳು ಶೇ.15ರಷ್ಟು ಮಿಶ್ರಣದಲ್ಲಿ ತಯಾರಾಗಿರುವ ಎರೆಹುಳು ಗೊಬ್ಬರದ ಘಟಕಗಳನ್ನು ಸ್ಥಾಪಿಸಿಕೊಳ್ಳಲು 4000 ಸಹಾಯಧನ ವಿತರಣೆಯಾಗುತ್ತಿದೆ. ರಾಜ್ಯ ಸರ್ಕಾರದ ಈ ಯೋಜನೆ ರೈತರು ಸ್ವಾವಲಂಬಿಯಾಗಲು ಸಹಕಾರಿಯಾಗಿದೆ ಎಂದು ಕೃಷಿ ಅಧಿಕಾರಿ ರಂಗಸ್ವಾಮಿ ತಿಳಿಸಿದ್ದಾರೆ.
ಯೂರಿಯಾ ರಸಗೊಬ್ಬರ ಕೈಗಾರಿಕೆ ಪ್ರದೇಶಕ್ಕೆ ಹೋಗುತ್ತಿರುವ ಬಗ್ಗೆ ಜಂಟಿಯಾಗಿ ಪರಿಶೀಲಿಸಿ ಇಲಾಖೆ ವತಿಯಿಂದ ರೈತರ ಪರವಾಗಿ ಯಾವುದೇ ಕ್ರಮ ಜರುಗಿಸಲು ಸಿದ್ಧರಿರುವುದಾಗಿ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

