ಮರೀಚಿಕೆಯಾದ ಟೇಕಲ್ ರೇಲ್ವೆ ಮೇಲ್ಸೇತುವೆ!
ಟೇಕಲ್ ಲಕ್ಷ್ಮೀಶ್
ಕ.ಪ್ರ.ವಾರ್ತೆ ಟೇಕಲ್ ಆ.10
ಮರೀಚಿಕೆಯಾಗಿ ಉಳಿದ ಟೇಕಲ್ ರೈಲು ನಿಲ್ದಾಣದ ಮೇಲ್ಸೇತುವೆ ಸುಮಾರು 4 ವರ್ಷದ ರೇಲ್ವೆ ಸಚಿವ ಕೆ.ಎಚ್. ಮುನಿಯಪ್ಪ ಅವರು ರೇಲ್ವೆ ಬಜೆಟ್ನಲ್ಲಿ ಟೇಕಲ್ನಲ್ಲಿ ಮೇಲ್ಸೇತುವೆ ನಿರ್ಮಾಣಕ್ಕೆ 9 ಕೋಟಿ ಅನುಮೋದಿಸಿದ್ದರು. ಅದರಂತೆ ರೇಲ್ವೆ ಬಜೆಟ್ನಲ್ಲಿ ಅಂದು ಯೋಜನೆ ಅಂಗೀಕಾರವಾಗಿ ಮಂಡನೆಯಾಯಿತು. ಆದರೆ, ಅಂದಿನಿಂದ ಇಂದಿನವರೆಗೂ ಟೇಕಲ್ ಭಾಗದ ಜನತೆಗೆ ರೇಲ್ವೆ ಬ್ರಿಡ್ಜ್ ಎಲ್ಲಿ ನಿರ್ಮಾಣಳಾಗುತ್ತದೆ? ಯಾವಾಗ ಆಗುತ್ತದೆ? ಎಂಬ ಚಿಂತೆ ಕಾಡುತ್ತಿದೆ.
ರಸ್ತೆ ಮುಖಾಂತರ ಹೊಸಕೋಟೆಯಿಂದ ಮಾಲೂರು, ಬಂಗಾರಪೇಟೆ, ಕೆಜಿಎಫ್ಗೆ ಹೋಗಬೇಕಾದರೆ ನಮಗೆ ಸಿಗುವುದು ಟೇಕಲ್ ಮತ್ತು ಬಂಗಾರಪೇಟೆಯ ಹುಣಸನಹಳ್ಳಿ ರೇಲ್ವೆ ಗೇಟ್ಗಳು. ಆದರೆ, ಅಂದು ಮಂಡಿಸಿದ ರೇಲ್ವೆ ಬಜೆಟ್ನಲ್ಲಿ ಮೇಲ್ಸೇತುವೆ ಕಟ್ಟಲು ಟೇಕಲ್ಗೆ 9 ಕೋಟಿ, ಬಂಗಾರಪೇಟೆಯ ಹುಣಸನಹಳ್ಳಿಗೆ 11 ಕೋಟಿ ಬಿಡುಗಡೆಯಾಗಿ ಕಾಮಗಾರಿ ಪ್ರಾರಂಭಗೊಂಡಿದ್ದು, ಪ್ರಗತಿ ಹಂತದಲ್ಲಿದೆ. ಆದರೆ, ಟೇಕಲ್ನಲ್ಲಿ ಮಾತ್ರ ಅದರ ಸುಳಿವೇ ಇಲ್ಲದಂತಾಗಿದೆ.
ಕಳೆದ ಜಿ.ಪಂ. ಚುನಾವಣೆ ಸಂದರ್ಭ ಟೇಕಲ್ಗೆ ಭೇಟಿ ನೀಡಿದ ಕೇಂದ್ರ ಸಚಿವರು ಕೆ.ಎಚ್. ಮುನಿಯಪ್ಪ ಕೆಲವೇ ತಿಂಗಳಲ್ಲಿ ಮೇಲ್ಸೇತುವೆ ಕಾಮಗಾರಿ ಪ್ರಾರಂಭಗೊಳ್ಳಲಿದೆ. ಗುತ್ತಿಗೆ ತೆಗೆದುಕೊಳ್ಳುತ್ತಿರುವುದು ವಿಳಂಬವಾಗಿದೆ ಎಂದು ಹೇಳಿದ್ದರು. ಆದರೆ, ಅಂದಿನಿಂದ ಇಂದಿನವರೆಗೂ ಯೋಜನೆ ಯಾವ ಪ್ರಗತಿಯೂ ಕಂಡಿಲ್ಲ.
4 ವರ್ಷದ ಹಿಂದೆ ಬಜೆಟ್ ಮಂಡನೆಯಾದ ಅಂದಿನ ದಿನಗಳಲ್ಲಿ ಮಾಲೂರು ತಾಲೂಕಿನ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಒತ್ತಡ ತಂದಿದ್ದರೆ ಕಾಮಗಾರಿಗೆ ಸೂಕ್ತ ಫಲ ದೊರಕುತ್ತಿತ್ತು. ಅಂದಿನ ಸರ್ಕಾರದಲ್ಲಿದ್ದ ಮಾಲೂರು ತಾಲೂಕಿನ ಶಾಸಕ ಎಸ್.ಎನ್. ಕೃಷ್ಣಯ್ಯ ಶೆಟ್ಟಿ ಅವರ ನಿರ್ಲಕ್ಷ್ಯ ನಿಜಕ್ಕೂ ಶೋಚನೀಯ.
ಟೇಕಲ್ ಜನರಂತೂ ಮೇಲ್ಸೇತುವೆ ನಿರ್ಮಿಸಲು ನೀಲನಕ್ಷೆ ತಯಾರಾಗಿದೆ, ಸೇತುವೆ ಹೇಗೆ ಕಟ್ಟುತ್ತಾರೆ, ರೇಲ್ವೆ ನಿಲ್ದಾಣದ ಆಸುಪಾಸಿನ ಅಂಗಡಿ ಮುಂಗಟ್ಟು ಹಾಗೂ ಮನೆಗಳನ್ನು ನಿರ್ಮಿಸುತ್ತಿದ್ದು ಸೇತುವೆ ನಿರ್ಮಾಣ ಹೇಗೆ ಸಾಧ್ಯ, ಮೇಲಂತ್ತಸ್ತಿನ ಕಟ್ಟಡ ಕಟ್ಟಿದರೆ ತೊಂದರೆಯೆ, ಇದರಿಂದ ರಸ್ತೆ ಅಗಲೀಕರಣವಾಗುತ್ತದೆಯೇ ಎಂಬ ಆತಂಕದಿಂದ ಬಸವಳಿದಿದ್ದರು.
ಅಷ್ಟೇ ಅಲ್ಲ, ಕೆಲವೆಡೆ ಕಟ್ಟಡ ಕಾಮಗಾರಿಗಳನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ. ಈ ಹಿಂದೆ ರೇಲ್ವೆ ಅಧಿಕಾರಿಗಳು ಹಾಗೂ ಸರ್ವೇ ಇಲಾಖೆಯವರು ಒಟ್ಟುಗೂಡಿ ಮೇಲ್ಸೇತುವೆ ನಿರ್ಮಿಸಲು ಸ್ಥಳ ಪರಿಶೀಲನೆ ಮಾಡಲಾಗಿದೆ. ನೀಲನಕ್ಷೆ ತಯಾರಾಗಿದೆ ಎಂದು ಅಧಿಕಾರಿವರ್ಗದಲ್ಲಿ ಕೇಳಿಬಂದಿತ್ತು. ಆದರೆ, ರೇಲ್ವೆ ಬಜೆಟ್ ಮಂಡನೆಯಾಗಿ 5 ವರ್ಷ ಕಳೆಯುತ್ತಾ ಬಂದರೂ ಟೇಕಲ್ನಲ್ಲಿ ಮೇಲ್ಸೇತುವೆ ಜನರಿಗೆ ಮರೀಚಿಕೆಯಾಗಿಯೆ ಉಳಿದಿದೆ?
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

