ನಿರ್ವಿಘ್ನವಾಗಿ ಸಾಗಿದ ಬೋರ್ ಕೊರೆಯುವ ಕಾರ್ಯ
ಬಂಗಾರಪೇಟೆ: ಕ್ಷೇತ್ರದಲ್ಲಿ 8 ವರ್ಷಗಳಿಂದ ಬರ ಆವರಿಸಿರುವುದರಿಂದ ಕುಡಿಯುವ ನೀರಿಗೆ ಪಟ್ಟಣದಲ್ಲಿ ಹಾಹಾಕಾರ ಉಂಟಾಗಿದೆ. ಈ ಮಧ್ಯೆ ಸಮಸ್ಯೆಯನ್ನು ಸ್ವಲ್ಪವಾದರೂ ನೀಗಿಸುವ ನಿಟ್ಟಿನಲ್ಲಿ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೊಸ ಕೊಳವೆಬಾವಿ ಕೊರೆಸಲು ಕೈಗೊಂಡಿರುವ ಪ್ರಯತ್ನಕ್ಕೆ ಕೊರೆಸಿದ ಕಡೆ ಎಲ್ಲಾ ನೀರು ಸಿಗುತ್ತಿರುವುದು ಸಂಸತ ಉಂಟು ಮಾಡಿದೆ. ಪಟ್ಟಣದಲ್ಲಿ ಪುರಸಭೆ ಐದು ತಿಂಗಳಿಗೊಮ್ಮೆ ಕುಡಿಯುವ ನೀರು ಪೂರೈಕೆ ಮಾಡುವಷ್ಟು ನೀರಿನ ಸಮಸ್ಯೆ ತಲೆ ದೋರಿದೆ. ಕುಡಿಯುವ ನೀರಿನ ಸಮಸ್ಯೆ ಬಾರದಂತೆ ರಾಜ್ಯ ಸರ್ಕಾರ ಎಲ್ಲಾ ಕ್ರಮಕ್ಕೂ ಮುಂದಾಗಿದೆ. ಕೋಟಿಗಟ್ಟಲೆ ಅನುದಾನ ಬಿಡುಗಡೆ ಮಾಡಿದೆ. ಈ ಹಣದಲ್ಲಿ ಶಾಸಕರು ಪಟ್ಟಣದ ಕುಂಬಾರಪಾಳ್ಯ ವಾರ್ಡ್ನಲ್ಲಿ ಹೊಸ ಕೊಳವೆಬಾವಿ ಕೊರೆಸಿದೆ. ಅದರಲ್ಲಿ ಸಮೃದ್ಧ ನೀರು ಲಭಿಸಿದೆ. ಶಾಸಕರು ಸೇರಿದಂತೆ ವಾರ್ಡಿನ ಎಲ್ಲಾ ನಾಗರಿಕರು ಸಂಸತ ಮತ್ತಷ್ಟು ಇಮ್ಮಡಿಗೊಳಿಸಿದೆ. ನೀರು ಸಿಗುತ್ತಿದ್ದಂತೆ ಪಂಪು ಮೋಟಾರ್ ಅಳವಡಿಸಿ ನಾಗರಿಕರ ಸೇವೆಗೆ ಶಾಸಕರು ಅನುವು ಮಾಡಿಕೊಟ್ಟಿದ್ದಾರೆ.ಕುಂಬಾರಪಾಳ್ಯದಲ್ಲಿ ಕೊರೆಸಿದಂತೆ ಪಟ್ಟಣದ ಎಲ್ಲಾ ವಾರ್ಡುಗಳಲ್ಲಿಯೂ ಇಂತಹ ಕೊಳವೆಬಾವಿಗಳನ್ನು ಕೊರೆಸಿ ನೀರಿನ ಅಭಾವ ಬಾರದಂತೆ ಶಾಸಕರು ಮುಂದಾಗಬೇಕೆಂದು ನಾಗರಿಕರು ಕೋರಿದ್ದಾರೆ. ವಿವೇಕಾನಂದನಗರ ವಾರ್ಡಿನಲ್ಲಿ ನೀರಿನ ಸಮಸ್ಯೆ ಮಿತಿ ಮೀರಿದ್ದರೂ ವಾರ್ಡಿನ ಸದಸ್ಯೆ ಈ ಹಿಂದೆ ಆಯ್ಕೆಯಾದ ಹೊಸದರಲ್ಲಿ ಪ್ರತಿದಿನ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತಿದ್ದರು. ಈಗ ಆ ಸೇವೆಗೆ ತಿಲಾಂಜಲಿ ಹಾಡಿದ್ದಾರೆ. ಇದರಿಂದ ಇಲ್ಲಿನ ಜನರು ನೀರಿಗಾಗಿ ಅಲೆಯುವಂತಾಗಿದೆ. ಶಾಸಕ ನಾರಾಯಣಸ್ವಾಮಿ ಅವರ ಉಚಿತ ನೀರು ಟ್ಯಾಂಕರ್ ಸಹ ಈ ವಾರ್ಡಿಗೆ ಬಾರದೆ ಇರುವುದರಿಂದ ಸಮಸ್ಯೆ ಮತ್ತಷ್ಟು ಜಟಿಲಗೊಂಡಿದೆ. ಈ ಬಡಾವಣೆ ಜನರು ದುಬಾರಿ ಬೆಲೆ ಕೊಟ್ಟು ಖಾಸಗಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಿಕೊಳ್ಳುತ್ತಿದ್ದಾರೆ. ವಾರ್ಡಿನ ಸದಸ್ಯೆ ವೇದಾವತಿ ಪ್ರಭಾಕರ್ ಪ್ರಾರಂಭದಲ್ಲಿ ವಾರ್ಡಿನ ಬಗ್ಗೆ ತೋರಿದ ಆಸಕ್ತಿ 4 ತಿಂಗಳಲ್ಲಿ ಮಾಯವಾಗಿ ತಾವೂ ಸಹ ಎಲ್ಲ ಸದಸ್ಯರಂತೆ ಎಂದು ತೋರಿಸಿದ್ದಾರೆ. ಶಾಸಕರ ಮನೆ ಸಹ ಇದೇ ವಾರ್ಡಿನಲ್ಲಿದ್ದರೂ ಜನರಿಗೆ ಸಮಸ್ಯೆಗೆ ಮುಕ್ತಿ ಸಿಗಲಿಲ್ಲ. ನೀರಲ್ಲದೆ ಸ್ವಚ್ಚತೆ ಸೇರಿದಂತೆ ಅನೇಕ ಸಮಸ್ಯೆಗಳು ತಾಂಡವಾಡುತ್ತಿವೆ. ಆದರೂ, ವಾರ್ಡ್ ಸದಸ್ಯೆಯನ್ನು ಕೇಳಿದರು ನಮಗೆ ಇನ್ನೂ ಅಧಿಕಾರ ಸಿಕ್ಕಿಲ್ಲ ನಮ್ಮ ಮಾತು ಪುರಸಭೆಯಲ್ಲಿ ಇನ್ನೂ ಚಾಲ್ತಿಗೆ ಬಾರದ ಹಿನ್ನೆಲೆಯಲ್ಲಿ ಮೌನ ವಹಿಸಬೇಕಾಗಿದೆ ಎಂಬ ಉತ್ತರ ಸಿಗುತ್ತದೆ. ಶಾಸಕರಾದರೂ ಸಮಸ್ಯೆಗೆ ಮುಕ್ತಿ ಕಾಣಿಸಲಿ ಎಂಬುದು ಜನರ ಬೇಡಿಕೆಯಾಗಿದೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

