ಕೋಲಾರ

ಧರ್ಮ ರಕ್ಷಣೆಗೆ ಕಾಲಜ್ಞಾನ ರಚಿಸಿದ ಕೈವಾರ ತಾತಯ್ಯ

Published On :

ಕ.ಪ್ರ.ವಾರ್ತೆ ಟಿ ಚಿಂತಾಮಣಿ ಟಿ ಆ.12
ತಾಲೂಕಿನ ಕೈವಾರ ಯೋಗಿ ನಾರೇಯಣ ಯತೀಂದ್ರರು ಕಾಲಜ್ಞಾನ ರಚಿಸಲು ಮುಖ್ಯ ಕಾರಣ ಧರ್ಮದ ರಕ್ಷಣೆ. ಸಮಾಜದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಮತ್ತು ಏರುಪೇರುಗಳನ್ನು ಸರಿಪಡಿಸಿಕೊಂಡು ಎಚ್ಚರದಿಂದಿರಲು ಮತ್ತು ಧರ್ಮದ ಜಾಗೃತಿಗಾಗಿ ಕಾಲಜ್ಞಾನ ರಚನೆ ಮಾಡಿದ್ದಾರೆ ಎಂದು ಕೈವಾರ ಯೋಗಿ ನಾರೇಯಣ ಮಠದ ಧರ್ಮಾಧಿಕಾರಿ ಡಾ. ಎಂ.ಆರ್. ಜಯರಾಮು ಹೇಳಿದರು.
ಇಲ್ಲಿನ ಶ್ರೀಯೋಗಿ ನಾರೇಯಣ ಮಠದಲ್ಲಿ ಕಾಲಜ್ಞಾನ ರಚನೆಯ 200ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಕಾಲಜ್ಞಾನದ ಮಹತ್ವದ ಬಗ್ಗೆ ಮಾತನಾಡಿದರು.
ಪ್ರಪಂಚದ ಜನರ ನೆಮ್ಮದಿ ಮತ್ತು ಸಂತೋಷವು ಜಗತ್ತಿನಲ್ಲಿರುವ ಪ್ರಕೃತಿ ಮೇಲೆ ಅವಲಂಬಿಸಿರುತ್ತದೆ. ಮೊದಲಿಗೆ ಧರ್ಮ ಎಂದರೇನು ಎಂದು ತಿಳಿದುಕೊಳ್ಳಬೇಕು. ಜಗತ್ತಿನ ಸಕಲ ಜೀವ ರಾಶಿಗಳನ್ನು ಸಮಾನವಾಗಿ ಮತ್ತು ಯಾವುದಕ್ಕೂ ಹಾನಿಯಾಗದಂತೆ ಹಿಂಸೆ ನೀಡದೆ ನಡೆದುಕೊಳ್ಳುವುದೇ ಧರ್ಮ. ತಾತಯ್ಯ ಅವರು ಕಾಲಜ್ಞಾನದಲ್ಲಿ ಹೇಳುತ್ತಿರುವುದು ಇದೇ. ಧರ್ಮ ಅಧರ್ಮದ ಹಾದಿಯಲ್ಲಿ ನಡೆಯುವಾಗ ಆಗಬಹುದಾದ ಅನಾಹುತಗಳ ಬಗ್ಗೆ ಎಚ್ಚರಿಸಿದ್ದಾರೆ ಎಂದರು.
ತ್ರಿಕಾಲಜ್ಞಾನಿಗಳಾಗಿ ಸದ್ಗುರು ಯೋಗಿ ನಾರೇಯಣ ತಾತಯ್ಯ ಅವರು ಭಗವಂತನ ಆಶೀರ್ವಾದದಿಂದ ಮುಂದಿನ ದಿನಗಳ ಭವಿಷ್ಯದ ಕಾಲಜ್ಞಾನ ಕ್ರಿ.ಶ.1813ರ ಶ್ರೀಮುಖ ನಾಮಸಂವತ್ಸರ ಶ್ರಾವಣ ಮಾಸ ಶುದ್ಧ ಪಂಚಮಿಯಂದು ರಾತ್ರಿ 2 ಗಂಟೆಗೆ ರಚಿಸಿದ್ದಾರೆ. ಇಂದಿಗೆ 200 ವರ್ಷಗಳಾಗುತ್ತಿರುವ ಹಿನ್ನೆಲೆಯಲ್ಲಿ ಶ್ರಾವಣ ಮಾಸ ಶುದ್ಧ ಪಂಚಮಿಯಂದು ಶ್ರೀಯೋಗಿ ನಾರೇಯಣ ಮಠದಲ್ಲಿ ಕಾಲಜ್ಞಾನ ರಚನೆಯ 200ನೇ ವರ್ಷಾಚರಣೆ ಪ್ರಯುಕ್ತ ವಿಶೇಷ ಪೂಜಾ ಕೈಂಕರ್ಯ ಹಮ್ಮಿಕೊಳ್ಳಲಾಗಿತ್ತು.
ಸೋಮವಾರ ಬೆಳಿಗ್ಗೆ 2.30 ಗಂಟೆಗೆ ಸುಪ್ರಭಾತ ಸೇವೆಯೊಂದಿಗೆ ಪೂಜಾ ಕಾರ್ಯಗಳು ಆರಂಭವಾಯಿತು. ಸದ್ಗುರು ತಾತಯ್ಯ ಅವರಿಗೆ ಅಭಿಷೇಕ, ಅಷ್ಟಾವಧಾನ ಸೇವೆ, ಮಹಾಮಂಗಳಾರತಿ ಸಮರ್ಪಿಸಲಾಯಿತು. ತಾತಯ್ಯ ಬರೆದಿರುವ ತಾಳೆಗರಿಯ ಕಾಲಜ್ಞಾನದ ಹೊತ್ತಿಗೆಗಳನ್ನು ವಿಶೇಷವಾಗಿ ಪೂಜಿಸಲಾಯಿತು.
ಸದ್ಗುರು ತಾತಯ್ಯ ಅವರು ರಚಿಸಿರುವ ಕಾಲಜ್ಞಾನದ ಸೂಕ್ಷ್ಮ ಭೀಮಲಿಂಗ ನಕ್ಷತ್ರಮಾಲಿಕಾ ಪದ್ಯಗಳು ಮತ್ತು ಪ್ರಚಂಡನಾರೇಯಣ ಕವಿ ಪದ್ಯಗಳನ್ನು ಯೋಗಿನಾರೇಯಣ ಸಂಕೀರ್ತನಾ ಯೋಜನೆಯ ಸಂಚಾಲಕರಾದ ಬಾಲಕೃಷ್ಣ ಭಾಗವತರ್ ಅವರೊಂದಿಗೆ ಭಕ್ತರೆಲ್ಲರೂ ಸಾಮೂಹಿಕವಾಗಿ ಪಠಿಸಿ ಸಮರ್ಪಿಸಲಾಯಿತು.
ಅಖಂಡ ನಾಮ ಸಂಕೀರ್ತನೆ ಏರ್ಪಡಿಸಲಾಗಿತ್ತು. ಅಪಾರ ಭಕ್ತರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.