ಕೋಲಾರ

ಮಾಲೂರು: ಕರ್ತವ್ಯವೇಳೆ ನಿಂದನೆಖಂಡಿಸಿ ಧರಣಿ

Published On :

ಮಾಲೂರು: ಕರ್ತವ್ಯ ನಿರ್ವಹಿಸುವಾಗ ಅನಾವಶ್ಯಕವಾಗಿ ಕೆಟ್ಟ ಪದಗಳಿಂದ ಬೈಯ್ದು ದೈಹಿಕವಾಗಿ ಹಲ್ಲೆ ಮಾಡಿದ ವ್ಯಕ್ತಿಯೊಬ್ಬನ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಅಗ್ರಹಿಸಿ ಪುರಸಭೆ ಸಿಬ್ಬಂದಿ ಪುರಸಭೆ ಮುಂದೆ ಧರಣಿ ಮಾಡಿದ ಘಟನೆ ಸೋಮವಾರ ನಡೆದಿದೆ.   
ಪುರಸಭೆ ಸಿಬ್ಬಂದಿ ನಂಜುಂಡ ಶಾಸ್ತ್ರಿ ಎಂಬಂತ ಪುರಸಭೆ ಸಂಕೀರ್ಣ ಮಳಿಗೆ ಗಳ ಬಾಡಿಗೆ ವಸೂಲಾತಿಗೆ ಅಧಿಕಾರಿ ಜ್ಯೋತಿ ಜತೆಯಲ್ಲಿ ಹೋಗುತ್ತಿದ್ದಾಗ ಕೃಷ್ಣಮೂರ್ತಿ ಎಂಬಾಂತ ವೈಯಕ್ತಿಕ ವಿಷಯ ಅನಾವಶ್ಯಕವಾಗಿ ನಂಜುಂಡಶಾಸ್ತ್ರಿ ಬಳಿ ತೆಗೆದು ಜಗಳ ಮಾಡಿದನಲ್ಲದೇ ದೈಹಿಕಹಲ್ಲೆ ಮಾಡಿದ ಎನ್ನಲಾಗಿದೆ.
ಪದೇ ಪದೇ ಪುರಸಭೆ ಅಧಿಕಾರಿಗಳನ್ನು ದುಷ್ಕರ್ಮಿಗಳು ಹಲ್ಲೆ ಮಾಡುತ್ತಿರುವುದನ್ನು ಖಂಡಿಸಿ, ಆರೋಪಿ ಬಗ್ಗೆ ಪೊಲೀಸ್ ದೂರು ನೀಡುವಂತೆ ಮುಖ್ಯಾಧಿಕಾರಿಯನ್ನು ಆಗ್ರಹಿಸಿ ಪುರಸಭೆ ಮುಂಭಾಗ ಅಧಿಕಾರಿಗಳು-ಸಿಬ್ಬಂದಿ ಧರಣಿ ನಡೆಸಿದರು. ಸಿಬ್ಬಂದಿ ಮನವಿಗೆ ಸ್ಪಂದಿಸಿದ ಮುಖ್ಯಾಧಿಕಾರಿ ರೇಣುಕಾ ರವರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರತ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಕೃಷ್ಣಮೂರ್ತಿ ವಿರುದ್ಧ ದೂರು ನೀಡಿದರು.
ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.