ಕೋಲಾರ

ಮುದುಗೆರೆಯಲ್ಲಿ ನೀರಿಗೆ ಪರದಾಟ ಗ್ರಾಮಸ್ಥರ ತೀವ್ರ ಅಸಮಾಧಾನ

Published On :

ಗೌರಿಬಿದನೂರು: ರಾಜ್ಯದಲ್ಲಿ ಉತ್ತಮ ಮಳೆಯಾಗಿ ಬಹುತೇಕ ಜಲಾಶಯಗಳು ಭರ್ತಿಯಾಗಿ ತುಂಬಿ ಹರಿಯುತ್ತಿದೆ. ಆದರೆ, ತಾಲೂಕಿನಾದ್ಯಂತ ದಿನ ನಿತ್ಯ ಮೋಡಕವಿದ ವಾತಾವರಣವಿದ್ದಂತೆ ಕಂಡುಬಂದರೂ, ಮಳೆ ಬರುತ್ತಿಲ್ಲ. ಮರಳು ಮಾಫಿಯಾ ಮರಳು ಗಣಿಗಾರಿಕೆ ಪ್ರತಿನಿತ್ಯ ನಡೆಯುತ್ತಿದೆ. ಇದರಿಂದ ಅಂತರ್ಜಲ ಮಟ್ಟ ಕಡಿಮೆಯಾಗಿ ಸಾವಿರಾರು ಅಡಿಗಳು ಕೊರೆದರೂ ನೀರು ಸಿತ್ತಿಲ್ಲ.
ಒಂದೆಡೆ ಶಾಶ್ವತ ನೀರಿಗಾಗಿ ಒಂದಡೆ ಹೋರಾಟ, ಇನ್ನೊಂದೆಡೆ ರಾಜಕೀಯ ನಡೆಯುತ್ತಿರುವುದು ಒಂದೆಡೆಯಾದರೆ ಹಿಂದೆಂದೂ ಕಾಣದಂತಹ ನೀರಿನ ಸಮಸ್ಯೆ ತಾಲೂಕಿನಾದ್ಯಂತ ಉಂಟಾಗಿದೆ. ಟ್ಯಾಂಕರ್ ಹಣ ನೀಡಿ ನೀರು ಪಡೆಯಲೂ ಸಹ ಸಕಾಲಕ್ಕೆ ಟ್ಯಾಂಕರ್ ನೀರು ಸಹ ಸಿಗುತ್ತಿಲ್ಲ. ಪಂಚಾಯ್ತಿಗಳು, ಪುರಸಭೆಗಳು ನೀರಿನ ಸಮಸ್ಯೆಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ತಾಲೂಕಿ ಮುದುಗೆರೆ ಗ್ರಾಮದಲ್ಲಿ 15ಕ್ಕೂ ಹೆಚ್ಚು ಕೊಳವೆ ಬಾವಿಗಳನ್ನು ಕೊರೆದಿದ್ದರೂ ಮೂರು ಬೋರ್ಗಳಲ್ಲಿ ಮಾತ್ರ ಮಾತ್ರ ಅಲ್ಪ ಸ್ವಲ್ಪ ನೀರು ಸಿಗುತ್ತಿದೆ. ಇದರಿಂದ ಜನರ ದಾಹ ಇಂಗದಂತಾಗಿದೆ. ಗ್ರಾಮದ ಬಸ್ ನಿಲ್ದಾಣ ಪಕ್ಕದಲ್ಲಿರುವ ಕೊಳವೆಬಾವಿ ಬಳಿ ದಿನನಿತ್ಯ ನೀರಿಗಾಗಿ ನೂಕುನುಗ್ಗಲು ಹಾಗು ಬೈಗಳು ಸಾಮಾನ್ಯವಾಗಿದೆ. ಮಹಿಳೆಯರಂತೂ ಕೂಲಿಗೆ ಹೋಗದೇ ನೀರಿಗೆ ಪರದಾಡುವ ಪರಿಸ್ಥಿತಿ ಬಂದಿದೆ. ಕೆರೆ ಮಧ್ಯ ಭಾಗದಲ್ಲಿರುವ ಕೊಳವೆಬಾವಿ ಹಾಗೂ ಸಮುದಾಯ ಭವನದ ಹತ್ತಿರದ ಕೊಳವೇ ಬಾವಿಗಳಲ್ಲಿಯೂ ಸಹಾ ಇದೇ ಪರಿಸ್ಥಿತಿಯಾಗಿದೆ. ಗ್ರಾಮದಲ್ಲಿರುವ 8 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹಾಗೂ ಸಾವಿರಕ್ಕೂ ಹೆಚ್ಚು ಮನೆಗಳ ಜನರಿಗೆ ನೀರಿನ ಸಮಸ್ಯೆಯೇ ದೊಡ್ಡದಾಗಿದೆ. ಗ್ರಾಮ ಪಂಚಾಯ್ತಿ ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಎಂದು ಸಾರ್ವಜನಿಕರು ದೂರಿದ್ದು, ಕೂಡಲೇ ಜಿಲ್ಲಾ ಪಂಚಾಯ್ತಿ ಗಮನಹರಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.