ಹೈ ಡ್ರಾಮಾ ನಡುವೆ ಮಾಲೂರು ತಾಪಂ ಅಧ್ಯಕ್ಷರಾಗಿ ಪುಟ್ಟಸ್ವಾಮಿ
ಮಾಲೂರು: ಇಲ್ಲಿನ ತಾಲೂಕು ಪಂಚಾಯಿತಿಗೆ ನೂತನ ಅಧ್ಯಕ್ಷ ಆಯ್ಕೆ ಅವಿರೋಧವಾಗಿ ನಡೆದಿದ್ದರೂ, ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಬಣದ ಫ್ಯಾಕ್ಟರ್ನಿಂದ ನಾಮಪತ್ರಗಳ ವಾಪಸಾತಿಗೆ ಹೈಡ್ರಾಮವೇ ನಡೆಯಿತು. ಅಂತಿಮವಾಗಿ ಪುಟ್ಟಸ್ವಾಮಿ ಹಾಗೂ ಅಂತಹ ಬೇಡಿಕೆಯಿಲ್ಲದ ಉಪಾಧ್ಯಕ್ಷ ಸ್ಥಾನಕ್ಕೆ ರಾಜಮ್ಮ ಅವರನ್ನು ಆಯ್ಕೆ ಮಾಡಲಾಯಿತು.
ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಪಕ್ಷದ ಟಿಕೆಟ್ ನಿರಾಕರಣೆಯಿಂದ ಪಕ್ಷೇತರರಾಗಿ ಸ್ವರ್ಧಿಸಿ ಸೋತಿದ್ದ ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ನಂತರ ಕಾಂಗ್ರೆಸ್ ಪಕ್ಷದೊಳಗೆ ಕಾಲನ್ನಿಟ್ಟಿರುವುದು ಇತಿಹಾಸ. ಇವರ ಕೃಪಾಕಟಾಕ್ಷದಿಂದ ಈ ಹಿಂದೆ ಬಿಜೆಪಿ ಚಿಹ್ನೆಯಿಂದ ಗೆದ್ದಿದ್ದ 15 ಸದಸ್ಯರಲ್ಲಿ ಕೆಲವರು ಬಿಜೆಪಿಯಲ್ಲಿದ್ದರೆ, ಬಹುತೇಕ ಸದಸ್ಯರು ಮಾಜಿ ಶಾಸಕ ಕೃಷ್ಣಯ್ಯ ಶೆಟ್ಟಿ ಅವರಿಗೆ ತಮ್ಮ ನಿಷ್ಠೆ ವ್ಯಕ್ತಪಡಿಸಿದ್ದರು. ಪಕ್ಷದ ಒಳ ಒಪ್ಪಂದದಂತೆ ಚಂದ್ರಪ್ಪ ರಾಜಿನಾಮೆ ನೀಡಿದ ನಂತರ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾದ ಪುಟ್ಟಸ್ವಾಮಿ, ಲೋಕೇಶ್, ಆಶಾ ರಾಜಪ್ಪ ಪೈಪೋಟಿಯಲ್ಲಿ ಇದ್ದರು.
ಈ ನಿಟ್ಟಿನಲ್ಲಿ ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಚುನಾವಣೆ ಹಿಂದಿನ ದಿನ ಕರೆದಿದ್ದ ಸಭೆಗೆ ಬಿಜೆಪಿ ಜಿಲ್ಲಾಧ್ಯಕ್ಷ ಕೃಷ್ಣಾರೆಡ್ಡಿ ಅವರ ಪತ್ನಿ ರಾಧಮ್ಮ, ಪಾರ್ವತಮ್ಮ, ಗೋಪಾಲ್ ಗೌಡ ಹೋಗಿರಲಿಲ್ಲ. ಚುನಾವಣೆ ದಿನದ ಬೆಳಿಗ್ಗೆ ಶೆಟ್ಟಿ ಬಣ ಬಿಟ್ಟ ಆಶಾ ರಾಜಪ್ಪ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಜಿಲ್ಲಾಧ್ಯಕ್ಷ ಕೃಷ್ಣಾರೆಡ್ಡಿ ಸೂಚಿಸಿದರು. ಆದರೆ, ಕಾಂಗ್ರೆಸ್ನಲ್ಲಿ ಒಂದು ಕಾಲಿಟ್ಟಿರುವ ಮಾಜಿ ಶಾಸಕ ಕೃಷ್ಣಯ್ಯ ಶೆಟ್ಟಿ ಅವರ ಬಣದ ಸದಸ್ಯರ ಸಂಖ್ಯೆ ಹೆಚ್ಚಿದ್ದ ಕಾರಣ ಜಿಲ್ಲಾಧ್ಯಕ್ಷ ಕೃಷ್ಣಾರೆಡ್ಡಿ ಬುಧವಾರ ಬೆಳಿಗ್ಗೆ ಶೆಟ್ಟಿ ಅವರ ಬಣದಲ್ಲಿ ಗುರ್ತಿಸಿಕೊಂಡಿದ್ದ ಸದಸ್ಯರ ಮನವೊಳಿಸುವ ಕಾರ್ಯಕ್ಕೆ ಇಳಿದರು.
ಮುಂದಿನ 9 ತಿಂಗಳಾವಧಿಯ ಅಧಿಕಾರದಲ್ಲಿ ಮೂರು ತಿಂಗಳಿಗೆ ಪುಟ್ಟಸ್ವಾಮಿ ಹಾಗೂ ನಂತರ ಆಶಾ ರಾಜಪ್ಪ ರವರಿಗೆ ಅಧ್ಯಕ್ಷ ಸ್ಥಾನ ಬಿಟ್ಟು ಕೊಡುವ ರೀತಿಯಲ್ಲಿ ಸಂಧಾನ ನಡೆಸಿದ ಕೃಷ್ಣಾ ರೆಡ್ಡಿ ಅವರು ಸದಸ್ಯರಲ್ಲಿ ಒಗಟ್ಟು ಸಾಧಿಸಲು ಪ್ರಯತ್ನಪಟ್ಟರು. ಕೊನೆಗೂ ಜಿಲ್ಲಾಧ್ಯಕ್ಷರ ಅದೇಶದಂತೆ ಪುಟ್ಟಸ್ವಾಮಿ ಹಾಗೂ ಅಂತಹ ಬೇಡಿಕೆಯಿಲ್ಲದ ಉಪಾಧ್ಯಕ್ಷ ಸ್ಥಾನಕ್ಕೆ ರಾಜಮ್ಮ ಅವರನ್ನು ಆಯ್ಕೆ ಮಾಡಲಾಯಿತು.
ಒಣಪ್ರತಿಷ್ಠೆ ಮೆರೆದ ಮುಖಂಡರು: ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಮಾತನಾಡಿದ ನೂತನ ಅಧ್ಯಕ್ಷ ಪುಟ್ಟಸ್ವಾಮಿ ಮಾತನಾಡಿ, ಮಾಜಿ ಶಾಸಕ ಕೃಷ್ಣಯ್ಯ ಶೆಟ್ಟಿ ಕೃಪಾಕಟಾಕ್ಷದಿಂದ ಸದಸ್ಯ ಹಾಗೂ ಹಾಲಿ ಅಧ್ಯಕ್ಷನಾಗಿದ್ದು, ಅವರ ಮಾರ್ಗದರ್ಶನದಲ್ಲಿ ಸಹ ಸದಸ್ಯರ ಸಹಕಾರದಲ್ಲಿ ಅಭಿವೃದ್ಧಿ ಕಾರ್ಯ ಮಾಡುವುದಾಗಿ ತಿಳಿಸಿದರು. ತಾವೂ ಬಿಜೆಪಿಯಲ್ಲಿದ್ದೀರಾ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಪುಟ್ಟಸ್ವಾಮಿ, ನಾವು ಕೃಷ್ಣಯ್ಯ ಶೆಟ್ಟಿ ಅವರಿಗೆ ನಿಷ್ಠರಾಗಿದ್ದು, ಪಕ್ಷ ನಂತರದ್ದು ಎಂದು ತಿಳಿಸಿದರು. ಮಾಜಿ ಅಧ್ಯಕ್ಷರಾದ ಆನಂದ್, ಗೋಪಾಲ್ ಗೌಡ ಹಾಗೂ ರಾಧಮ್ಮ ಅಕ್ಷೇಪಣೆ ವ್ಯಕ್ತಪಡಿಸಿ ಬಿಜೆಪಿ ಪಕ್ಷದ ಹೆಸರು ತಿಳಿಸುವಂತೆ ನೂತನ ಅಧ್ಯಕ್ಷರನ್ನು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಸದಸ್ಯ ಲೋಕೇಶ್ ಬಿಜೆಪಿ ಹಾಗೂ ಕೃಷ್ಣಯ್ಯ ಶೆಟ್ಟಿ ಅವರಿಂದ ನಮ್ಮೆಗೆಲ್ಲ ಅಧಿಕಾರ ಸಿಕ್ಕಿದ್ದು, ಅವರನ್ನು ನೆನೆಪಿಸಿಕೊಳ್ಳುವುದು ತಪ್ಪಿಲ್ಲ ಎಂದು ಹೇಳಿ ಎಲ್ಲರನ್ನೂ ಸಮಾಧಾನ ಪಡಿಸಿದರು.
ಕೃಷ್ಣಯ್ಯ ಶೆಟ್ಟಿ ಬಣ ಹಾಗೂ ಬಿಜೆಪಿ ಕಾರ್ಯಕರ್ತ ಎಂಬ ಗುಂಪಿನ ಅಸ್ಥಿತ್ವವನ್ನು ಮುಖಂಡರು ಹೊರಗೆ ವಿಜಯೋತ್ಸವ ಆಚರಿಸಬೇಕಾದರೆ ಮತ್ತೆ ಸಾದರಪಡಿಸಿದರು. ಬಿಜೆಪಿ ನಿಷ್ಠರು ನೂತನ ಅಧ್ಯಕ್ಷರ ಬಳಿ ಬಿಜೆಪಿ ಬಾವುಟ ಪ್ರದರ್ಶಿಸಿದರೆ, ಮಾಜಿ ಶಾಸಕ ಕೃಷ್ಣಯ್ಯ ಶೆಟ್ಟಿ ಅವರ ನಿಷ್ಠರು ಕೃಷ್ಣಯ್ಯ ಶೆಟ್ಟಿ ಭಾವಚಿತ್ರ ಪ್ರದರ್ಶಿಸಿ ಜೈ ಕಾರ ಹಾಕುತ್ತಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

