ಗುಡಿಬಂಡೆ ಪಟ್ಟಣಕ್ಕೆ ಶೀಘ್ರವೇ ಎಟಿಎಂ ಕೇಂದ್ರ
ಗುಡಿಬಂಡೆ: ಪಟ್ಟಣದ ಜನತೆಯ ಬಹುದಿನಗಳ ಕನಸಾಗಿದ್ದ ಎಟಿಎಂ ಕೇಂದ್ರದ ಸ್ಥಾಪನೆ ಕಾರ್ಯ ಶೀಘ್ರದಲ್ಲೇ ನೆರವೇರಲಿಯೆಂದು ಪ್ರಗತಿ ಗ್ರಾಮೀಣ ಬ್ಯಾಂಕ್ ಮ್ಯಾನೇ ಜರ್ ಕುಂಸೀ ಬಾಬು ತಿಳಿಸಿದರು. ಗುಡಿಬಂಡೆ ವರ್ತಕರ ಸಂಘ ಹಾಗೂ ಬ್ಯಾಂಕ್ ಶಾಖೆ ಹಮ್ಮಿಕೊಂಡಿದ್ದ ಸಾಲ ಆಂದೋಲನ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಹಿಂದುಳಿದ ಗುಡಿಬಂಡೆ ಪ್ರದೇಶ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಎಲ್ಲಾ ರೀತಿಯ ಹಣಕಾಸು ನೆರವು ಬ್ಯಾಂಕ್ನಿದ ಸಿಗಲಿದ್ದು, ಗ್ರಾಹಕರು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
25 ಎಟಿಎಂ ಕೇಂದ್ರ ಸ್ಥಾಪನೆಗೆ ಅನುಮೋದನೆ: ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳ ಒಟ್ಟು 25 ಶಾಖೆಗಳಲ್ಲಿ ಎಟಿಎಂ ಕೇಂದ್ರ ಸ್ಥಾಪನೆಗೆ ಅನುಮೋದನೆ ದೊರೆತಿದ್ದು ಇದರಲ್ಲಿ ಗುಡಿಬಂಡೆ ಶಾಖೆಯೂ ಸೇರಿದೆ ಎಂದು ಪ್ರಾದೇಶಿಕ ವ್ಯವಸ್ಥಾಪಕ ರವೀಂದ್ರ ಹೇಳಿದರು. ಶಾಖಾ ವ್ಯವಸ್ಥಾಪಕ ವೆಂಕಟಪ್ಪ ಮಾತನಾಡಿದರು. ನಂತರ ಸಭೆಯಲ್ಲಿ ಫಲಾನುಭವಿಗಳಿಗೆ ಗಣ್ಯರು ಸಾಲ ನೀಡಿಕೆ ಚೆಕ್ ವಿತರಿಸಿದರು. ತಹಸೀಲ್ದಾರ್ ಶೈಲಜಾ, ವರ್ತಕರ ಸಂಘದ ಅಧ್ಯಕ್ಷ ಜಿ.ಎಸ್.ನಾಗರಾಜಯ್ಯ ಶೆಟ್ಟಿ, ಮುಖಂಡರಾದ ಆದಿರೆಡ್ಡಿ, ಕೆ.ಅಶ್ವತ್ಥರೆಡ್ಡಿ, ಆನಂದರೆಡ್ಡಿ, ಗುತ್ತಿಗೆದಾರ ಲಕ್ಷ್ಮೀಪತಿ, ಪ.ಪಂ. ಮುಖ್ಯಾಧಿಕಾರಿ ಶ್ರೀರಾಮರೆಡ್ಡಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

