'ಹೆಚ್ಚುವರಿ ಹಾಲು ಪುಡಿಯಾಗಿ ಪರಿವರ್ತನೆ'
ಬಂಗಾರಪೇಟೆ: ರೈತರಿಂದ ಖರೀದಿಸುವ ಹಾಲಿಗೆ ಸರ್ಕಾರ ನೀಡುತ್ತಿದ್ದ ಪ್ರೋತ್ಸಾಹಧನ 2 ರಿಂದ 4ಕ್ಕೆ ಏರಿಕೆ ಮಾಡಿರುವುದರಿಂದ ಜಿಲ್ಲೆಯಲ್ಲಿ ಹಾಲು ಸಂಗ್ರಹದಲ್ಲಿ ದ್ವಿಗುಣವಾಗಿದೆ. ಇದರಿಂದ ಒಕ್ಕೂಟಕ್ಕೆ ನಷ್ಟವಾಗುತ್ತಿದ್ದರೂ ರೈತರ ಹಿತದೃಷ್ಟಿಯಿಂದ ಒಕ್ಕೂಟ ಹೆಚ್ಚುವರಿ ಹಾಲು ಪುಡಿಯಾಗಿ ಪರಿವರ್ತಿಸುತ್ತಿದೆ ಎಂದು ಒಕ್ಕೂಟದ ಮಾಜಿ ಅಧ್ಯಕ್ಷ ಹಾಗೂ ಹಾಲಿ ನಿರ್ದೇಶಕ ಜಯಸಿಂಹ ಕೃಷ್ಣಪ್ಪ ಹೇಳಿದರು. ಪಟ್ಟಣದ ಪೊಲೀಸ್ ಕ್ವಾರ್ಟಸ್ ಬಳಿ ಪುರಸಭೆಯಿಂದ ಪಡೆದಿರುವ ನಿವೇಶನದಲ್ಲಿ 67ನೇ ಸ್ವಾತಂತ್ರ್ಯ ದಿನಾಚರಣೆ, ಸಹಕಾರ ಸಂಘಗಳಿಗೆ ಸಹಕಾರಿ ಮಂಡಳಿ ಪಿತಾಮಹ ದಿ. ಎಂ.ವಿ. ಕೃಷ್ಣಪ್ಪ ಅವರ ಭಾವ ಚಿತ್ರಗಳನ್ನು ವಿತರಿಸಿ ಮಾತನಾಡಿದರು.
ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಯಾವುದೇ ತಾಲೂಕು ಕೇಂದ್ರಗಳಲ್ಲಿ ಒಕ್ಕೂಟದ ಪ್ರಾದೇಶಿಕ ಸ್ವಂತ ಕಚೇರಿಗಳಿಲ್ಲ, ಮೊಟ್ಟಮೊದಲ ಬಾರಿಗೆ ಪಟ್ಟಣದಲ್ಲಿ ನಿವೇಶನ ದಕ್ಕಿದೆ. ಮುಂದಿನ ವರ್ಷದೊಳಗೆ ಹೊಸ ಕಟ್ಟಡ ನಿರ್ಮಾಣ ಮಾಡಿ ಎಲ್ಲಾ ಚಟುವಟಿಕೆ ಕಚೇರಿಯಲ್ಲೇ ಮಾಡುವುದಾಗಿ ತಿಳಿಸಿದರು.
ಶಾಸಕ ಎಸ್.ಎನ್. ನಾರಾಯಣಸ್ವಾಮಿ ಮಾತನಾಡಿ, ಬರಗಾಲದಲ್ಲಿ ರೈತರ ಬದುಕು ಹಸುನಾಗಿಸುವ ವೃತ್ತಿ ಹೈನುಗಾರಿಕೆ ಉದ್ಯಮ ಮಾತ್ರವಾಗಿದೆ. ಈ ಉದ್ಯಮ ಮತ್ತಷ್ಟು ಬೃಹತ್ತಾಗಿ ಬೆಳೆಸಲು ಹಾಗೂ ಪ್ರೋತ್ಸಾಹಿಸಲು ಸರ್ಕಾರ ಎಲ್ಲಾ ಯೋಜನೆ ರೂಪಿಸುತ್ತಿದೆ. ರೈತರಿಂದ ಖರೀದಿಸುವ ಹಾಲಿಗೆ ರು. 2ರಿಂದ 4ಗೆ ಪ್ರೋತ್ಸಾಹಧನ ಏರಿಕೆ ಮಾಡಲಾಗಿದೆ. ರೈತರು ಡೈರಿಗಳಿಗೆ ಪೂರೈಸುವ ಹಾಲಿನಲ್ಲಿ ಕಲಬೆರೆಕೆ ಮಾಡದೆ ಗುಣಮಟ್ಟದ ಹಾಲು ಸರಬರಾಜು ಮಾಡುವ ಮೂಲಕ ಒಕ್ಕೂಟದ ಜೊತೆ ನೀವೂ ಅಭಿವೃದ್ಧಿ ಹೊಂದಬೇಕು. ಕಚೇರಿಯ ಕಟ್ಟಡ ನಿರ್ಮಾಣಕ್ಕೆ ತಾವೂ ನೆರವು ನೀಡುವುದಾಗಿ ಪ್ರಕಟಿಸಿದರು.
ಸಭೆಯಲ್ಲಿ ತಹಸೀಲ್ದಾರ್ ಉಷಾ, ಪುರಸಭೆ ಮಾಜಿ ಅಧ್ಯಕ್ಷ ಕೆ.ಚಂದ್ರಾರೆಡ್ಡಿ, ಒಕ್ಕೂಟದ ಉಪ ವ್ಯವಸ್ಥಾಪಕ ವೆಂಕಟರಮಣ, ಚಂದ್ರಶೇಖರರಾಜು, ದೇವೆಂದ್ರಪ್ಪ ಬ್ಲಾಕ್ ಅಧ್ಯಕ್ಷ ಮಂಜುನಾಥ್, ಸಿಪಿಐ ಶಿವಕುಮಾರ್ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

