ಇಂದು ಆದಿಮದ ಅಂಗಳದಲ್ಲಿ ಜಪಾನಿನ ಡೊಳ್ಳು ಕುಣಿತ
ಕೋಲಾರ: ತಾಲೂಕಿನ ತೇರಹಳ್ಳಿ ಬೆಟ್ಟದಲ್ಲಿನ ಆದಿಮ ಅಂಗಳದಲ್ಲಿ 10 ಮಂದಿ ಜಪಾನಿ ಕಲಾವಿದರ ತಂಡದಿಂದ ಡೊಳ್ಳು ಕುಣಿತ ಪ್ರದರ್ಶನವನ್ನು ಆ.17 ರ ಶನಿವಾರ ಸಂಜೆ 7 ಗಂಟೆಗೆ ಹಮ್ಮಿಕೊಳ್ಳಲಾಗಿದೆ.
ಹಾಲಿ ಭಾರತ ಪ್ರವಾಸದಲ್ಲಿರುವ ಈ ತಂಡ ಹಲವಾರು ದೇಶಗಳಲ್ಲಿ ಸುತ್ತಾಡಿ ಕಲಾ ಪ್ರದರ್ಶನ ಮೂಲಕ ಸಾಂಸ್ಕೃತಿಕ ಸೌಹಾರ್ದತೆ ಹಾಗೂ ಬಾತೃತ್ವ ಬೆಸೆಯುವ ಪ್ರಯತ್ನ ನಡೆಸುತ್ತಿದೆ. ರಾಜ್ಯ ಪ್ರವಾಸಕ್ಕೂ ಕಾಲಿಟ್ಟಿರುವ ತಂದ ಹುಬ್ಬಳ್ಳಿ, ಮೈಸೂರು ಮತ್ತು ಬೆಂಗಳೂರು ನಗರಗಳಲ್ಲಿ ಪ್ರದರ್ಶನ ನೀಡಿ ಇದೀಗ ಕೋಲಾರ ಜಿಲ್ಲೆಗೆ ಪ್ರವೇಶ ಮಾಡಿ ಆದಿಮ ಆವರಣದಲ್ಲಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಲು ತಯಾರಿ ನಡೆಸಿದೆ. ತಂಡ ಪ್ರಸ್ತುತ ಭಾರತ ಪ್ರವಾಸಕ್ಕೆಂದೇ ಜನಪದ ಕಲಾ ಪ್ರಕಾರಗಳಿಂದ ಹಜೀಜೋ - ಜಿಮಾ ಡಾಯಕೋ ಮತ್ತು ವರಬೆಹುತಾಗಳ ವಿಶೇಷ ಸಂಯೋಜನೆಯೊಂದಿಗೆ ಆಗಮಿಸಿದೆ. ಈ ಪ್ರದರ್ಶನಗಳ ಮೂಲಕ ಜಪಾನಿನ ಪುಕುಶಿಮಿಯಲ್ಲಾದ ಅಣು ದುರಂತದ ಅಗ್ನಿ ಸುನಾಮಿಯಲ್ಲಿ ಬೆಂದು ಕರಗಿದ ಜಪಾನಿಯರ ಅಂತೆಯೇ ಮನುಕುಲದ ಮುಂದಾದ ಬವಣೆಯ ಕಣ್ಣೀರ ಕಥನ ಕಟ್ಟಿಕೊಡಲಿದ್ದಾರೆ. ಈ ಪ್ರವಾಸದ ನಡುವೆಯೇ ಬೆಂಗಳೂರಿನ ಮಾಗಡಿ ರಸ್ತೆಯ ಬಾಪುಗ್ರಾಮದ ಶಾಲಾ ಮಕ್ಕಳಿಗೆ ಲಯ ಮತ್ತು ಗೇಯ ಕುರಿತಂತೆ ಪ್ರಾತ್ಯಕ್ಷಿಕ ತರಬೇತಿಯನ್ನೂ ನೀಡಿ ಬಂದಿದ್ದಾರೆಂದು ಆದಿಮ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷ ಕೋಟಗಾನಹಳ್ಳಿ ರಾಮಯ್ಯ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

