ಜಿಲ್ಲಾದ್ಯಂತ ಶ್ರದ್ಧೆಯಿಂದ ವರಮಹಾಲಕ್ಷ್ಮಿ ಪೂಜೆ
ಕೋಲಾರ: ನಗರದಲ್ಲಿ ಶ್ರೀ ವರಮಹಾಲಕ್ಷ್ಮಿ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
ಬಹುತೇಕ ಹಿಂದೂಗಳ ಮನೆಯಲ್ಲಿ ಅದರಲ್ಲೂ ವ್ರತ ಆಚರಿಸುವ ಮನೆಗಳಲ್ಲಿ ವರಮಹಾಲಕ್ಷ್ಮಿ ಹಬ್ಬವನ್ನು ಕಲಶ ಸ್ಥಾಪನೆಯ ಮೂಲಕ ಸಂಪ್ರದಾಯಿಕವಾಗಿ ನೆರವೇರಿಸಲಾಯಿತು. ಬೆಲೆ ಏರಿಕೆಯ ನಡುವೆಯೂ ಅನೇಕರು ಲಕ್ಷ್ಮೀ ಪೂಜೆಗಾಗಿ ಬೇಕಾದ ಎಲ್ಲ ಪೂಜಾ ಸಾಮಗ್ರಿಗಳು, ಹೂಪು, ಹಣ್ಣು ಖರೀದಿ ಮಾಡಿ ಯಾವುದೇ ಕೊರತೆ ಇಲ್ಲದ ರೀತಿಯಲ್ಲಿ ಹಬ್ಬ ಆಚರಿಸಿದರು. ಈ ಹಬ್ಬ ಹೆಣ್ಣು ಮಕ್ಕಳಿಗೆ ಪ್ರಿಯವಾದ ಹಬ್ಬವಾಗಿದ್ದು, ಲಕ್ಷ್ಮಿ ಪೂಜೆಯನ್ನು ವಿಧಿವತ್ತಾಗಿ ನೆರವೇರಿಸಿ ಹರಿಕೆ ತೀರಿಸಿದರಲ್ಲದೆ, ತಮಗಿಷ್ಟವಾದ ವರ ಬೇಡಿದರು.
ನಗರ ಶಾರದಾ ಚಿತ್ರ ಮಂದಿರ ರಸ್ತೆಯಯಲ್ಲಿನ ಶ್ರೀ ಸಾಯಿ ಲಕ್ಷ್ಮಿ ದೇವಾಲಯದಲ್ಲಿ ದೇವಿಗೆ ವಿಶೇಷ ಪೂಜೆ ಮತ್ತು ಅಲಂಕಾರ ಏರ್ಪಡಿಸಲಾಗಿತ್ತು. ಅನೇಕ ಮನೆಗಳಲ್ಲಿ ಶ್ರೀಲಕ್ಷ್ಮಿಯ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ವರಮಹಾಲಕ್ಷ್ಮಿ ವ್ರತವನ್ನು ಸಡಗರ ಸಂಭ್ರದಿಂದ ಆಚರಿಸಿದರು. ಕೋಲಾರಮ್ಮ ದೇವಸ್ಥಾನ, ಕೆಇಬಿ ಕಾಲೋನಿಯ ಶ್ರೀ ವಿದ್ಯಾ ಗಣಪತಿ ದೇವಾಲಯ, ಕಠಾರಿ ಗಂಗಮ್ಮ, ಗಲ್ಪೇಟೆಯ ಶ್ರೀ ಚಾಮುಂಡೇಶ್ವರಿ ಗುಡಿ, ಪಿಸಿ ಬಡಾವಣೆಯಲ್ಲಿನ ಬ್ರಾಹ್ಮಣರ ಸಂಘದ ಶ್ರೀ ಗಾಯಿತ್ರಿ ಮಂದಿರ, ಕೋಟೆಯ ಶ್ರೀ ಶಂಕರ ಮಠ ಮುಂತಾದ ಕಡೆ ಹಬ್ಬವನ್ನು ಆಚರಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

