ರೇಲ್ವೆ ಅಂಡರ್ ಪಾಸ್ ವ್ಯವಸ್ಥೆ ಕಿರಿಕಿರಿ
ಕ.ಪ್ರ.ವಾರ್ತೆ, ಬಂಗಾರಪೇಟೆ, ಆ.17
ಪಟ್ಟಣದಿಂದ ಕೋಲಾರಕ್ಕೆ ಸಂಚರಿಸುವ ರೈಲು ಮಾರ್ಗವನ್ನು ಯಾವುದೇ ರೇಲ್ವೆ ಲೆವೆಲ್ ಕ್ರಾಸಿಂಗ್ಗಳಿಲ್ಲದೆ ಮುಕ್ತಿಗೊಳಿಸಲು ರೇಲ್ವೆ ಇಲಾಖೆ ಅಂಡರ್ ಪಾಸ್ಗಳ ನಿರ್ಮಾಣಕ್ಕೆ ಮುಂದಾಗಿರುವುದು ರೈತರನ್ನು ಕೆರಳುವಂತೆ ಮಾಡಿದೆ.
ಪಟ್ಟಣದಿಂದ ಕೋಲಾರಕ್ಕೆ ಬೆಳಗ್ಗೆ ಬಿಟ್ಟರೆ ಸಂಜೆ ಮಾತ್ರ ರೈಲು ಸಂಚಾರವಿದೆ. ಈ ಮಾರ್ಗದಲ್ಲಿ ಅಂಡರ್ಪಾಸ್ ವ್ಯವಸ್ಥೆ ನಿರ್ಮಿಸಿ ರೈಲಿಗೆ ಯಾವುದೇ ಅಡೆತಡೆಗಳಿಲ್ಲದಂತೆ ಮಾಡಲು ಇಲಾಖೆ ಮುಂದಾಗಿ ಈಗಾಗಲೇ ಹಲವು ಕಡೆ ಅಂಡರ್ ಪಾಸ್ಗಳನ್ನು ನಿರ್ಮಾಣ ಮಾಡಿದೆ. ಕೇವಲ 15 ಅಡಿ ಅಗಲ ಮತ್ತು ಉದ್ದ ನಿರ್ಮಾಣ ಮಾಡಿರುವುದೇ ರೈತರ ಕೆಂಗಣ್ಣಿಗೆ ಕಾರಣವಾಗಿದೆ.
ಕೋಲಾರದಿಂದ ಪಟ್ಟಣ ಮೂಲಕ ಬೆಂಗಳೂರಿನ ಕಂಟೋನ್ಮೆಂಟ್ವರೆಗೂ ಪುಪ್ಫುಲ್ ರೈಲು ಓಡಾಡುತ್ತಿದೆ. ಅದು ಬೆಳಗ್ಗೆ ಮತ್ತು ರಾತ್ರಿ ಮಾತ್ರ ಕೋಲಾರದಿಂದ ಪಟ್ಟಣದವರೆಗೂ 6 ಕಡೆ ಕಾವಲು ರಹಿತ ಕ್ರಾಸಿಂಗ್ ಗೇಟ್ಗಳಿವೆ. ಈ ಎಲ್ಲಾ ಕಡೆ ಅಂಡರ್ ಪಾಸ್ ನಿರ್ಮಾಣ ಮಾಡಲಾಗುತ್ತಿದೆ. ಇದರಿಂದ ಅಂಡರ್ ಪಾಸ್ಗಳಲ್ಲಿ ಸಣ್ಣಪುಟ್ಟ ವಾಹನಗಳು ಮಾತ್ರ ಸಂಚರಿಸಬಹುದೇ ವಿನಹ ದೊಡ್ಡ ವಾಹನಗಳು ಹೋಗಲು ಅವಕಾಶವಿಲ್ಲದಂತಾಗಿದೆ. ಅಂಡರ್ ಪಾಸ್ ನಿರ್ಮಾಣ ಅವೈಜ್ಞಾನಿಕ ಕ್ರಮ ಎಂಬುದು ರೈತರು ಟೀಕಿಸಿದ್ದಾರೆ.
ಹುದುಕುಳ ಬಳಿಯಿರುವ ರೇಲ್ವೆ ಕ್ರಾಸಿಂಗ್ ಸಮೀಪ ರಸ್ತೆ ಸುಮಾರು ಹತ್ತಾರು ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿದೆ. ಈ ಮಾರ್ಗವಾಗಿ ರೈತರು ಬೆಳೆದಿರುವ ತರಕಾರಿ ಬೆಳೆಗಳನ್ನು ಹಾಗೂ ಇತರೆ ಬೆಳೆಗಳನ್ನು ದೊಡ್ಡ ವಾಹನಗಳಲ್ಲಿ ಮಾರುಕಟ್ಟೆಗೆ ಸಾಗಿಸುವರು. ಆದರೆ, ಇಲ್ಲಿ ಸಣ್ಣ ಪ್ರಮಾಣದ ಅಂಡರ್ಪಾಸ್ ನಿರ್ಮಾಣ ಆಗುತ್ತಿರುವುದರಿಂದ ರೈತರು ತಮ್ಮ ಬೆಳೆಗಳನ್ನು ಮಾರುಕಟ್ಟೆಗೆ ಸಾಗಿಸಲು ತೊಂದರೆ ಉಂಟಾಗಿದೆ. ಲಕ್ಷಾಂತರ ವೆಚ್ಚದಲ್ಲಿ ರೇಲ್ವೆ ಇಲಾಖೆ ಅಂಡರ್ ಪಾಸ್ ನಿರ್ಮಾಣ ಮಾಡಿದರೂ ಇದು ರೈತರಿಗೆ ಯಾವುದೇ ರೀತಿಯಲ್ಲಿ ಅನುಕೂಲವಾಗದೆ ಅನಾನುಕೂಲವೇ ಹೆಚ್ಚಾಗಿದೆ.
ಈ ಮಾರ್ಗದಲ್ಲಿ ದೊಡ್ಡ ಹಳ್ಳಿಗಳ ಬಳಿಯಾದರೂ ಅಂಡರ್ ಪಾಸ್ ವ್ಯವಸ್ಥೆ ನಿರ್ಮಾಣ ಕೈ ಬಿಟ್ಟು ಕಾವಲು ಸಹಿತ ಗೇಟ್ ಅಳವಡಿಸಿದರೆ ರೈತರಿಗೆ ನೆರವಾಗಲಿದೆ ಎಂಬುದು ರೈತರ ವಾದ. ಈ ಕೂಡಲೇ ಇಲಾಖೆ ತನ್ನ ನಿರ್ಧಾರ ಬದಲಿಸಿ ಅಗತ್ಯ ಇರುವ ಕಡೆ ಮಾತ್ರ ಅಂಡರ್ ಪಾಸ್ ನಿರ್ಮಾಣ ಮಾಡಿ ಉಳಿದ ಕಡೆ ಕಾವಲು ಸಹಿತ ಗೇಟ್ ನಿರ್ಮಾಣ ಮಾಡಲಿ. ಇಲ್ಲದಿದ್ದರೆ ಹೋರಾಟದ ಹಾದಿ ಹಿಡಿಯಬೇಕಾದಿತು ಎಂದು ರೈತರು ಇಲಾಖೆಗೆ ಎಚ್ಚರಿಕೆ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

