'ವಿದ್ಯಾರ್ಥಿಗಳಲ್ಲಿ ಕಲೆ ಸಂಸ್ಕೃತಿಯ ಅರಿವು ಮೂಡಿಸಿ'
ಕೋಲಾರ: ಸಮಾಜದ ಸರ್ವಾಂಗೀಣ ಪ್ರಗತಿ ಶಿಕ್ಷಕರಿಂದ ಮಾತ್ರ ಸಾಧ್ಯವಾಗಿದ್ದು, ಶಿಕ್ಷಕರು ಉತ್ತಮ ಮೌಲ್ಯಗಳನ್ನು ಹೊಂದಿ ವೃತ್ತಿಯ ಗೌರವ ಕಾಪಾಡುವ ಜೊತೆಗೆ ಅಧ್ಯಯನಶೀಲರಾಗಬೇಕೆಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಜೆ.ಜಿ.ನಾಗರಾಜ ಅಭಿಪ್ರಾಯಪಟ್ಟರು.
ತಾಲೂಕಿನ ವಕ್ಕಲೇರಿ ಸಮೂಹ ಸಂಪನ್ಮೂಲ ಕೇಂದ್ರದಲ್ಲಿ ಶನಿವಾರ ಏರ್ಪಡಿಸಿದ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಶಿಕ್ಷಕರಲ್ಲಿ ಸಾಮಾಜಿಕ ಭದ್ರತೆ ಇರಬೇಕು. ವಿನಂಮ್ರತೆಯ ಕಲಿಕೆ ಜೊತೆಗೆ ವಿದ್ಯಾರ್ಥಿಗಳ ಬೆನ್ನುತಟ್ಟಿ ಕಲಿಸುವ ಜ್ಞಾನವನ್ನು ಹೊಂದಿರಬೇಕಾಗಿದ್ದು, ಜನಪದ ಸಾಹಿತ್ಯ, ಲಾವಣಿ, ಕಥೆಗಳ ಪರಿಚಯ ಮಾಡುವ ಮೂಲಕ ಕನ್ನಡ ಸಾಹಿತ್ಯವನ್ನು ಪಸರಿಸಬೇಕು. ಶಿಕ್ಷಣದ ಅವಿಭಾಜ್ಯ ಅಂಗವಾಗಿರುವ ಸಾಂಸ್ಕೃತಿಕ ಕಲೆ ಪ್ರಕಾರಗಳನ್ನು ಭಾವಗೀತೆ ನೃತ್ಯರೂಪಕಗಳ ಮೂಲಕ ಕಲಿಸುವ ಪ್ರಯತ್ನವು ಶಿಕ್ಷಕರಿಂದ ಆಗಬೇಕಾಗಿದ್ದು, ಶಾಲೆಯ ಕಾರ್ಯಕ್ರಮಗಳಲ್ಲಿ ನೃತ್ಯ ಸಂಗೀತಗಳಿಗೆ ಅವಕಾಶ ನೀಡದಂತೆ ಎಚ್ಚರ ವಹಿಸಬೇಕೆಂದು ತಿಳಿಸಿದರು. ತಾಲೂಕು ಪಂಚಾಯಿತಿ ನಿರ್ಮಲ ಭಾರತ ಅಭಿಯಾನ ಸಂಯೋಜಕ ಜಿ. ಶ್ರೀನಿವಾಸ್ ಮಾತನಾಡಿ ಗುರುಗಳು ತಮ್ಮ ಮೆಚ್ಚಿನ ಶಿಷ್ಯರನ್ನು ತಮಗಿಂತ ಎತ್ತರಕ್ಕೆ ಬೆಳೆಸಲು ಸಹಕಾರಿಗಳಾಗಬೇಕು. ಮೌಲ್ಯಗಳನ್ನು ಕಲಿಸಿ, ಸಮಾಜದ ಬೆಳವಣಿಗೆಗೆ ಪೂರಕ ಆಗುವಂತೆ ತಯಾರು ಮಾಡಬೇಕೆಂದರು.
ಸನ್ಮಾನ ಸ್ವೀಕರಿಸಿದ ಮುಖ್ಯೋಪಾಧ್ಯಾಯ ಬೈರಾರೆಡ್ಡಿ ಮಾತನಾಡಿ, ಸರ್ಕಾರಿ ಸೇವೆಯಲ್ಲಿ ಸೇವೆಗೆ ಸೇರಿದಾಗ, ವರ್ಗಾವಣೆಯಾದಾಗ ಈ ರೀತಿ ಸನ್ಮಾನ ಮಾಡುವ ಸಂಪ್ರದಾಯಗಳನ್ನು ಮುಂದುವರಿಸಬೇಕೆಂದು ಇದರಿಂದ ಕರ್ತವ್ಯದ ಅರಿವು ಜವಬ್ದಾರಿಯ ಪ್ರಜ್ಞೆ ಮೂಡುತ್ತದೆ ಎಂದರು.
ವಕ್ಕಲೇರಿ ಸಮೂಹ ಸಂಪನ್ಮೂಲ ವ್ಯಕ್ತಿ ಆರ್. ವೀರಣ್ಣ, ಹೋಳೂರಿನ ಚಂದ್ರಪ್ಪ, ಮುಖ್ಯೋಪಾಧ್ಯಾಯ ವೆಂಕಟೇಶ್ ಮತ್ತಿತರರು ಇದ್ದರು. ಎನ್.ಎಸ್. ಪುಷ್ಪ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

