ಸಮಸ್ಯೆ ಪರಿಹರಿಸುವ ನೆಪದಲ್ಲಿ 60000 ವಂಚನೆ
ಬಂಗಾರಪೇಟೆ: ಜೀವನದ ಸಮಸ್ಯೆಗಳನ್ನು ಸಂಪೂರ್ಣ ಪರಿಹರಿಸುವುದಾಗಿ ವ್ಯಕ್ತಿಯೊಬ್ಬನನ್ನು ನಂಬಿಸಿದ್ದಲ್ಲದೆ, ಆತನಿಗೆ ಬೆತ್ತಲೆಯಲ್ಲಿ ಮಂಡಲ ಪೂಜೆ ಮಾಡಬೇಕೆಂಬ ನೀತಿ ಹೇರಿ ಜ್ಯೋತಿಷಿಗಳಿಬ್ಬರು ಹಣ, ಆಭರಣ ಪಡೆದು ಪರಾರಿಯಾಗಿರುವ ಘಟನೆ ಪಟ್ಟಣದಲ್ಲಿ ನಡೆದಿದೆ.
ಪಟ್ಟಣದ ಶಾಂತಿನಗರದ ನಿವಾಸಿ ನಾಗರಾಜ ರಾವ್ ಎಂಬುವರೆ ಜ್ಯೋತಿಷಿ ರಾಘವೇಂದ್ರ ಭಟ್ ಅವರನ್ನು ನಂಬಿ ಸುಮಾರು 60000 ವಂಚನೆಗೆ ಒಳಗಾದವರು. ನಾಗರಾಜರಾವ್ ಅನಾರೋಗ್ಯ ಮತ್ತು ಕೌಟುಂಬಿಕ ಸಮಸ್ಯೆ ಎದುರಿಸುತ್ತಿದ್ದರು. ಶಾಶ್ವತವಾಗಿ ಪರಿಹಾರ ಮಾಡುವುದಾಗಿ ಜ್ಯೋತಿಷಿ ರಾಘವೆಂದ್ರ ಭಟ್ ಎಂಬವರು ಪತ್ರಿಕೆಗಳಲ್ಲಿ ಜಾಹೀರಾತು ನೀಡಿದ್ದರು. ವಿಆರ್ಎಸ್ ವಸತಿ ಗೃಹದಲ್ಲಿ ರೂಂ ಸಹ ಪಡೆದಿದ್ದರು. ಜಾಹೀರಾತು ನಂಬಿದ ನಾಗರಾಜ್ ರಾವ್ ಆ.10ರಂದು ತಮ್ಮ ಎಲ್ಲಾ ಸಮಸ್ಯೆಗಳನ್ನು ಜ್ಯೋತಿಷಿ ಬಳಿ ಹೇಳಿಕೊಂಡಿದ್ದರು.
ಸಮಸ್ಯೆ ದೂರ ಮಾಡಲು 5000 ವೆಚ್ಚವಾಗುತ್ತದೆ ಎಂದು ಹೇಳಿ ಮುಂಗಡವಾಗಿ ಜ್ಯೋತಿಷಿ 3000 ಪಡೆದಿದ್ದರು. ನಂತರ ಆ.12ರಂದು ನಮ್ಮ ದೊಡ್ಡ ಸ್ವಾಮೀಜಿ ಬಂದಿದ್ದಾರೆ. ಬನ್ನಿ ಎಂದು ದೂರವಾಣಿ ಮೂಲಕ ನಾಗರಾಜ ರಾವ್ ಅವರನ್ನು ಕರೆಸಿದ್ದರು. ಅಲ್ಲದೆ, ಮಂಡಲ ಪೂಜೆ ಮಾಡಬೇಕು, ಅದೂ ಬೆತ್ತಲೆಯಲ್ಲಿ ಎಂದು ನಂಬಿಸಿದ್ದರು. ಕತ್ತಿನಲ್ಲಿದ್ದ 16 ಗ್ರಾಂ ತೂಕದ ಚಿನ್ನದ ಸರ ತಮ್ಮ ವಶಕ್ಕೆ ಪಡೆದಿದ್ದ ಸ್ವಾಮಿಗಳು, ನಿಂಬೆ ಹಣ್ಣು ತರುವಂತೆ ಹೇಳಿ ಕಳುಹಿಸಿದ್ದರು. ನಾಗರಾಜ್ ನಿಂಬೆ ಹಣ್ಣು ತರುವಷ್ಟರಲ್ಲಿ ಇಬ್ಬರು ಡೋಂಗಿ ಜ್ಯೋತಿಷಿಗಳೂ ರೂಂ ಖಾಲಿ ಮಾಡಿದ್ದಾರೆ.
ವಂಚಕ ಸ್ವಾಮೀಜಿಗಳ ಮೊಬೈಲ್ಗೆ ಕರೆ ಮಾಡಿದರೆ ಅದು ಸ್ವಿಚ್ ಆಫ್ ಆಗಿತ್ತು. ಇದರಿಂದ ನಾಗರಾಜ ರಾವ್ ಮೋಸ ಹೋಗಿರುವುದು ಅರಿತು ಸ್ವಾಮೀಜಿಗಳ ಮೋಸದ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿರುವ ಪೊಲೀಸರು ವಂಚಕರ ಪತ್ತೆಗೆ ಕ್ರಮ ಜರುಗಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

