'ಸಾಕ್ಷರತೆಯಿಂದ ಮಾತ್ರ ಆರ್ಥಿಕ ಅಭಿವೃದ್ಧಿ ಸಾಧ್ಯ'
ಕೋಲಾರ: ಸಾಕ್ಷರತೆಯಿಂದ ಮಾತ್ರ ಆರ್ಥಿಕಾಭಿವೃದ್ಧಿ ಸಾಧಿಸಬಹುದು. ಅನಕ್ಷರತೆ ಹೋಗಲಾಡಿಸಲು ನವ ಸಾಕ್ಷಕರರು ಕಲಿಕೆಗೆ ಆಸಕ್ತಿ ತೋರಬೇಕೆಂದು ತಾಲೂಕಿನ ಅರಾಭಿಕೊತ್ತನೂರು ಗ್ರಾಪಂ ಅಧ್ಯಕ್ಷ ಸಿ.ನಾಗರಾಜ್ ಹೇಳಿದರು. ಗ್ರಾಪಂ ಕಚೇರಿ ಆವರಣದಲ್ಲಿ ಗ್ರಾ.ಪಂ ಮತ್ತು ಲೋಕಶಿಕ್ಷಣ ಕೇಂದ್ರದಿಂದ ನಡೆದ ಸಾಕ್ಷರಭಾರತ ಧ್ವಜಾರೋಹಣ ನೆರವೇರಿಸಿ ಸಾಕ್ಷರತೆಯ ಪ್ರತಿಜ್ಞಾವಿಧಿ ಬೋಧಿಸಿದ ನಂತರ ಸಾಕ್ಷರತಾ ದಿನದ ಅಂಗವಾಗಿ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ ಮಾತನಾಡಿದರು. ನವ ಸಾಕ್ಷರರು ಕಲಿಕೆಗೆ ಆಸಕ್ತಿ ತೋರುವ ಮೂಲಕ ಅರಾಭಿಕೊತ್ತನೂರನ್ನು ಶೇ.100ರ ಸಾಕ್ಷರ ಗ್ರಾಮ ಪಂಚಾಯಿತಿಯನ್ನಾಗಿಸಬೇಕು. ಸಾಕ್ಷರತೆ ಗುರಿ ಸಾಧನೆಗೆ ಲೋಕಶಿಕ್ಷಣ ಸಮಿತಿಯ ಸಾಕ್ಷರತಾ ಪ್ರೇರಕರು ಹೆಚ್ಚಿನ ಮುತುವರ್ಜಿ ವಹಿಸಬೇಕೆಂದರು. ಕಾರ್ಯಕ್ರಮದಲ್ಲಿ ಗ್ರಾಪಂ ಸದಸ್ಯರಾದ ಎ.ಶ್ರೀಧರ್, ರುಕ್ಮಿಣಿಯಮ್ಮ, ಗ್ರಾಪಂ ಪಿಡಿಒ ಎಚ್.ಎನ್. ಮಂಜುನಾಥಸ್ವಾಮಿ, ಲೆಕ್ಕ ಸಹಾಯಕ ನಾರಾಯಣಪ್ಪ, ಗ್ರಾಮದ ಮುಖಂಡರಾದ ಸೊಣ್ಣೇಗೌಡ, ಸಿ.ನಂಜುಂಡಪ್ಪ, ಸೋಮೇಗೌಡ, ವೆಂಕಟೇಶಪ್ಪ, ಕೆ.ಬಿ.ಮುನಿವೆಂಕಟಪ್ಪ, ಚಿಕ್ಕವೆಂಕಟಪ್ಪ, ಪಿ.ಕೃಷ್ಣಪ್ಪ, ಸೋಮಶೇಖರ್, ಮುನಿಯಪ್ಪ, ನಂಜೇಗೌಡ, ಪ್ರೇರಕರಾದ ಎಂ.ರಾಮಚಂದ್ರಪ್ಪ, ಎ.ಬಿ.ಅನಿತಾ ಸೇರಿದಂತೆ ಗ್ರಾಮದ ಹಲವಾರು ಮುಖಂಡರು ಹಾಜರಿದ್ದರು.
ಪಾಕ್ ಸೈನಿಕರ
ಕೃತ್ಯ ಖಂಡಿಸಿ ಪ್ರತಿಭಟನೆ: ಮನವಿ
ಗುಡಿಬಂಡೆ: ಕದನ ವಿರಾಮ ಉಲ್ಲಂಘಿಸಿ ಭಾರತದ ಸೈನಿಕರ ಮೇಲೆ ಗಡಿಯಲ್ಲಿ ಪಾಕ್ ಸೈನಿಕರು ಎಸಗಿರುವ ಕೃತ್ಯವನ್ನು ಖಂಡಿಸಿ ಪಟ್ಟಣದಲ್ಲಿ ನಾಗರಿಕ ವೇದಿಕೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಮುಖ್ಯ ರಸ್ತೆಯಲ್ಲಿ ನೂರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಮೆರವಣಿಗೆ ನಡೆಸಿದರು. ವಿದ್ಯಾರ್ಥಿಗಳೂ ಪಾಲ್ಗೊಂಡಿದ್ದ ಪ್ರತಿಭಟನೆಯಲ್ಲಿ ಪಾಕ್ ಸೈನಿಕರ ಪ್ರತಿಕೃತಿ ದಹಿಸಲಾಯಿತು. ನಂತರ ತಹಸೀಲ್ದಾರರಿಗೆ ಮನವಿ ಅರ್ಪಿಸಿದರು. ಈ ವೇಳೆ ವಿದ್ಯಾರ್ಥಿಗಳ ಪರವಾಗಿ ಮುಖಂಡ ದ್ವಾರಿ ನಾಯ್ಡು ಪ್ರತ್ಯೇಕ ಮನವಿ ಸಲ್ಲಿಸಿದರು. ತಾಲೂಕಿನ ಬೀಚಗಾನಹಳ್ಳಿ ಕ್ರಾಸ್ ಬಳಿ ನಿರ್ಮಿಸಲು ಉದ್ದಶಿಸಿರುವ ಆದರ್ಶ ಶಾಲಾ ಕಟ್ಟಡವನ್ನು ಪಟ್ಟಣ ವ್ಯಾಪ್ತಿಯಲ್ಲೇ ನಿರ್ಮಿಸಬೇಕೆಂದು ಒತ್ತಾಯಿಸಿದರು. ತಾಲೂಕಿನ ಸರ್ಕಾರಿ ಶಾಲೆಗಳಲ್ಲಿ ಕಾಡುತ್ತಿರುವ ಶಿಕ್ಷಕರ ಕೊರತೆಯನ್ನು ಶೀಘ್ರವಾಗಿ ನಿವಾರಿಸಬೇಕು. ಇಲ್ಲದಿದ್ದಲ್ಲಿ ಶಾಲೆಗಳಿಗೆ ಬೀಗ ಜಡಿದು ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

