ಸಾಹಿತ್ಯ ಸಂಪರ್ಕ ಇಲ್ಲದಿದ್ದರೆ ಜೀವನ ಬರಡು: ಆನಂದ್
ಚಿಂತಾಮಣಿ: ಸಾಹಿತ್ಯದ ಸಂಪರ್ಕ ಹೊಂದಿರದಿದ್ದರೆ ಜೀವನ ಬರಡಾಗಿರುತ್ತಿತ್ತು. ಬದುಕಿನಲ್ಲಿ ಸಾಹಿತ್ಯ ಹಾಸುಹೊಕ್ಕಾಗಿದ್ದು ಚೇತೋಹಾರಿಯಾಗಿ ಬದುಕಲು ಸಾಧ್ಯವಾಗಿದೆ ಎಂದು ಪ್ರವಚನಕಾರ ತಳಗವಾರ ಟಿ.ಎಲ್. ಆನಂದ್ ಅಭಿಪ್ರಾಯಪಟ್ಟರು.
ತಾಲೂಕು ಕನ್ನಡ ಸಾಹಿತ್ಯ ವೇದಿಕೆ ಹಾಗೂ ಚುಟುಕು ಸಾಹಿತ್ಯ ಪರಿಷತ್ತಿನ ಸಂಯುಕ್ತಾಶ್ರಯದಲ್ಲಿ ಕೈವಾರದ ಕೆರೆ ಬಳಿ ಇರುವ ಬಿ.ಎಸ್. ನಾರಾಯಣಸ್ವಾಮಿ ಮನೆಯಲ್ಲಿ ಏರ್ಪಡಿಸಿದ್ದ ಮನೆಗೊಂದು ಕವಿಗೋಷ್ಠಿ ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದರು.
ಬದುಕನ್ನು ಹಸನಗೊಳಿಸುವ ಹಲವು ಮಾಧ್ಯಮಗಳಲ್ಲಿ ಸಾಹಿತ್ಯವೂ ಒಂದು. ಬದುಕಿಗೆ ಸಾಹಿತ್ಯ ಪೂರಕ ಮತ್ತು ಮಾರ್ಗದರ್ಶಿ. ಸಾಹಿತ್ಯ, ಜೀವನದ ಸಾಮರಸ್ಯವನ್ನು ಬೆಸೆಯುವ ಕೆಲಸವನ್ನು ಸಮರ್ಥವಾಗಿ ಮಾಡುತ್ತದೆ. ಮಾನವತೆಯ ಹಲವು ಅಂಶಗಳನ್ನು ಕವಿತೆಯ ಮೂಲಕ ಕವಿ ತುಂಬುತ್ತಾನೆ. ಸಮಾಜಕ್ಕೆ ಉಪಯೋಗವಾಗುವುದೇ ಉತ್ತಮ ಸಾಹಿತ್ಯ ಎಂದರು.
ವೇದಿಕೆ ಅಧ್ಯಕ್ಷ ಕಾಗತಿ ವಿ. ವೆಂಕಟರತ್ನಂ ಪ್ರಾಸ್ತಾವಿಕವಾಗಿ ಮಾತನಾಡಿ, ವೇದಿಕೆ ಚಟುವಟಿಕೆಗಳನ್ನು ವಿವರಿಸುತ್ತಾ ನಗರ ಪ್ರದೇಶದಲ್ಲಿಯೇ ಅಲ್ಲದೇ ಗ್ರಾಮೀಣ ಪ್ರದೇಶದ ಜನತೆಯೂ ಸಾಹಿತ್ಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಕನ್ನಡ ಸಾಹಿತ್ಯದ ಬೆಳವಣಿಗೆಗೆ ಸಹಕರಿಸಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಿಕ್ಷಕ ಪಾತಮುತ್ತಕದಹಳ್ಳಿ ಎಂ.ಚಲಪತಿಗೌಡ ಮಾತನಾಡಿ, ಸಾಹಿತ್ಯವೂ ಬದುಕಿನ ದಾರಿದೀಪವಾಗಬೇಕು. ಈ ಹಾದಿಯಲ್ಲಿ ಕನ್ನಡ ಸಾಹಿತ್ಯ ವೇದಿಕೆ ಹಾಗೂ ಚುಟುಕು ಸಾಹಿತ್ಯ ಪರಿಷತ್ತಿನ ಕಾರ್ಯ ಶ್ಲಾಘನೀಯ ಎಂದರು.
ಜಾನಪದ ಕಲಾವಿದರಾದ ಮಹೇಶ್ಕುಮಾರ್, ಸ್ವಾರಪ್ಪಲ್ಲಿ ಚಂದ್ರಶೇಖರ್ ಮತ್ತಿ, ಸೀಕಲ್ ನರಸಿಂಹಪ್ಪ ಅವರು ಜನಪದ ಗೀತೆಗಳನ್ನು ಹಾಡಿ ಸಭಿಕರ ಮನಸೂರೆಗೊಂಡರು. ಹಣಬೆ ಪಾಪೆಗೌಡ, ಸೀತಮ್ಮ, ಚಂಪಲ್ಲಿ ಚಂದ್ರಶೇಖರಯ್ಯ,ದೇವರ ಮಳ್ಳೂರು ಚನ್ನಕೃಷ್ಣಪ್ಪ, ಸತ್ಯಭಾಮ, ಎಸ್.ಎಫ್.ಎಸ್. ಸುರೇಶ್, ಸಿ. ವೆಂಕಟರವಣಪ್ಪ, ಅರುಣ ಸುರೇಶ್ ಬಾಬು, ಧನಪಾಲ್ ಪ್ರಕೃತಿ ಸುತ, ಕೆ.ಎನ್.ಅಕ್ರಂಪಾಷಾ,ವೆಂಕಟೇಶ್ವರರಾವ್, ಚಲಪತಿ ಮುಂತಾದ ಕವಿಗಳು ಭಾಗವಹಿಸಿ ಸ್ವರಚಿತ ಕವನಗಳನ್ನು ವಾಚಿಸಿದರು.
ವೇದಿಕೆ ಸಂಚಾಲಕ ಶ್ರೀನಿವಾಸರೆಡ್ಡಿ ಸ್ವಾಗತಿಸಿದರು. ಕೆ.ಎನ್. ಅಕ್ರಂಪಾಷಾ ವಂದಿಸಿದರು. ರಾಯಲ್ ಶಿ.ಮ. ಮಂಜುನಾಥ್ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

