ಬನಹಳ್ಳಿಯಲ್ಲಿ ಕಾಂಪೋಸ್ಟೀಕರಣ ಪದ್ಧತಿ ಪ್ರಾತ್ಯಕ್ಷಿಕೆ
ಟೇಕಲ್: ಬನಹಳ್ಳಿ ಗ್ರಾಮದಲ್ಲಿ ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯದ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದಡಿಯಲ್ಲಿ ಗ್ರಾಮೀಣ ಜನರಲ್ಲಿ ಕಾಂಪೋಸ್ಟೀಕರಣ ಪದ್ಧತಿಯಲ್ಲಿ ಕೈಗೆ ಸಿಗುವ ಕಸ, ಕಡ್ಡಿಗಳಿಂದ ಮಣ್ಣಿನ ಫಲವತ್ತತೆ ಹೆಚ್ಚಿಸಲು ತಮ್ಮಲ್ಲೇ ತಾವು ತಯಾರು ಮಾಡುವ ಕುರಿತು ಜನರಲ್ಲಿ ಅರಿವು ಮೂಡಿಸಲು ಪ್ರಾತ್ಯಕ್ಷಿಕೆ ನಡೆಸಲಾಯಿತು.
ಪ್ರೊಫೆಸರ್ ಡಾ. ಬಿ. ಕೃಷ್ಣಮೂರ್ತಿ ಅವರು ಪ್ರಾತ್ಯಕ್ಷಿಕೆಯ ಬಗ್ಗೆ ತಿಳಿಸುತ್ತಾ, ಸಾಮಾನ್ಯವಾಗಿ ಹಳ್ಳಿಗಾಡಿನ ರಸ್ತೆ ಬದಿಯಲ್ಲಿ ಅಥವಾ ತಗ್ಗಾದ ಪ್ರದೇಶಗಳಲ್ಲಿ ಗುಂಡಿ ತೆಗೆದು ಕೊಟ್ಟಿಗೆಯ ಕಸ ಹಾಗೂ ಬೆಳೆಯ ಉಳಿಕೆಗಳನ್ನು ಹಾಕಿ ಕೊಳೆಯಲು ಬಿಡುವುದು ವಾಡಿಕೆ, ವರ್ಷಕ್ಕೊಮ್ಮೆ ಕೃಷಿ ಭೂಮಿಗೆ ಸಾಗಿಸಿ ಮಣ್ಣಿನಲ್ಲಿ ಬೆರೆಸಲಾಗುತ್ತದೆ. ಆದರೆ ಈ ಕ್ರಮವು ಪೋಷಕಾಂಶಗಳ ಪೋಲಾಗುವಿಕೆಗೆ ಎಡೆಮಾಡಿಕೊಡುತ್ತದೆ. ಅಲ್ಲದೆ ಪೂರ್ಣವಾಗಿ ಕೊಳೆಯದ ಪದಾರ್ಥಗಳು ಮಣ್ಣಿನಲ್ಲಿ ಪೋಷಕಾಂಶಗಳ ಪೂರೈಕೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಕಾಂಪೋಸ್ಟೀಕರಣವು ವೈಜ್ಞಾನಿಕ ಪದ್ದತಿಯಾಗಿದ್ದು ಪೋಷಕಾಂಶಗಳ ಪೋಲಾಗುವಿಕೆಯನ್ನು ತಡೆಯುತ್ತದೆ ಹಾಗೂ ಸಂಪೂರ್ಣವಾಗಿ ಕೊಳೆತ ಗೊಬ್ಬರವು ಮಣ್ಣಿನಲ್ಲಿನ ಸೂಕ್ಷ್ಮಾಣು ಜೀವಿಗಳ ಚಟುವಟಿಕೆಯನ್ನು ದ್ವಿಗುಣಗೊಳಿಸಿ ಪೋಷಕಾಂಶಗಳ ಸರಬರಾಜನ್ನು ಹೆಚ್ಚಿಸಲು ತನ್ಮೂಲಕ ಬೆಳೆಯ ಇಳುವರಿಯನ್ನು ಹೆಚ್ಚಿಸುತ್ತದೆ ಎಂದರು.
ಈ ಸಂದರ್ಭದಲ್ಲಿ ನೇತೃತ್ವ ವಹಿಸಿದ ತಂಡದ ಶಿಬಿರಾರ್ಥಿಗಳಾದ ರಮೇಶ್, ಶಶಿಕುಮಾರ್, ಶಿವಶಂಕರ್, ಶಿಲ್ಪಶ್ರೀ ವಾಸ್ತವ, ಸುಧಾಕರ್, ಶೃತಿ, ಸುಮಂತ್, ಶುಭ, ಶ್ವೇತಾ, ಸೌಮ್ಯ ಹಾಗೂ ಬನಹಳ್ಳಿ ಗ್ರಾಮದ ಮುಖಂಡರಾದ ಮುನಿಶಾಮಿಗೌಡ, ಗ್ರಾಪಂ ಸದಸ್ಯೆ ಸುಬ್ಬಮ್ಮ, ಪ್ರಗತಿಪರ ರೈತರಾದ ನಾಗೇಶ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

