ಬರಪೀಡಿತ ಜಿಲ್ಲೆ ಘೋಷಣೆಗೆ ಆಗ್ರಹ
ಚಿಂತಾಮಣಿ: ಚಿಕ್ಕಬಳ್ಳಾಪುರ ಮತ್ತು ಕೋಲಾರ ರೈತರು ವಲಸೆ ಹೋಗದಂತೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಉಭಯ ಜಿಲ್ಲೆಗಳನ್ನು ಬರಪೀಡಿತ ಜಿಲ್ಲೆಗಳನ್ನಾಗಿ ಘೋಷಿಸಿ ಹೆಚ್ಚಿನ ಅನುದಾನ ಬಿಡುಗಡೆಗೊಳಿಸಬೇಕೆಂದು ಕನ್ನಡ ಜಾಗೃತಿ ವೇದಿಕೆ ವತಿಯಿಂದ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಪಟ್ಟಣದ ತಾಲೂಕು ಕಚೇರಿ ಮುಂದೆ ಕನ್ನಡ ಜಾಗೃತಿ ವೇದಿಕೆ ಕಾರ್ಯಕರ್ತರು ಗುರುವಾರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ತಾಲೂಕು ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಶಾಶ್ವತ ನೀರಾವರಿ ಯೋಜನೆಗೆ ಆಗ್ರಹ: ಈ ಜಿಲ್ಲೆಗಳಲ್ಲಿ ಕೆರೆ ಮತ್ತು ಕುಂಟೆಗಳು ಬತ್ತಿಹೋಗಿವೆ. ಅಂತರ್ಜಲ ಮಟ್ಟ 1000-1200 ಅಡಿಗಳವರೆಗೆ ಕುಸಿದು ಬೋರ್ವೆಲ್ಗಳಲ್ಲಿ ನೀರು ಇಲ್ಲದೆ ನೀರಿನ ಅಭಾವ ಹೆಚ್ಚಾಗುತ್ತಿದೆ. ಇದರಿಂದ ರೈತರು ಕಂಗಾಲಾಗಿ ವಲಸೆ ಹೋಗುವಂತೆ ಹಾಗೂ ರೈತರು ಸಾಲಗಾರರಾಗಿ ಆತ್ಮಹತ್ಯೆ ಮಾಡಿಕೊಳ್ಳುವಂತಾಗಿದೆ.
ಆದ ಕಾರಣ ಈ ಎರಡೂ ಜಿಲ್ಲೆಗಳನ್ನು ಬರ ಪೀಡಿತ ಪ್ರದೇಶವನ್ನಾಗಿ ಘೋಷಿಸಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ವಿಶೇಷ ಅನುದಾನವನ್ನು ಕೂಡಲೇ ಬಿಡುಗಡೆ ಮಾಡಿ ನಮ್ಮ ರೈತರು ಮತ್ತು ಕೂಲಿ ಕಾರ್ಮಿಕರಿಗೆ ವಿತರಿಸಬೇಕು. ನಮ್ಮ ಜಿಲ್ಲೆಗಳಿಗೆ ಅತ್ಯವಶ್ಯಕವಾಗಿ ಬೇಕಾಗಿರುವ ಪರಮಶಿವಯ್ಯ ವರದಿ(ಎತ್ತಿನ ಹೊಳೆ)ಯನ್ನು ಜಾರಿಗೊಳಿಸಬೇಕಾಗಿ ಕನ್ನಡ ಜಾಗೃತಿ ವೇದಿಕೆಯ ಸಂಘಟನೆ ಆಗ್ರಹಿಸಿದೆ.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಮಾಡಿಕೆರೆ ನಾಗರಾಜ್, ತಾಲೂಕು ಅಧ್ಯಕ್ಷ ಆರ್.ನಾಗರಾಜ್, ರಾಜ್ಯ ಸಂಘಟನಾ ಕಾರ್ಯದರ್ಶಿ ತಿನಕಲ್ ವೆಂಕಟೇಶ್,ರಾಜ್ಯ ಸಹ ಕಾರ್ಯದರ್ಶಿ ಕೋಡಿಹಳ್ಳಿ ನಾಗರಾಜ್, ಜಿಲ್ಲಾ ಖಜಾಂಚಿ ಆಂಜನೇಯರೆಡ್ಡಿ, ಜಿಲ್ಲಾ ಕಾರ್ಯದರ್ಶಿ ಎಸ್.ಆಂಜನಪ್ಪ, ಶ್ರೀರಾಮನಗರ ಶಂಕರ್, ಮುರುಗಮಲ್ಲ ಶ್ರೀನಿವಾಸ್,ತಿಮ್ಮಸಂದ್ರ ದೇವರಾಜ್, ಮಹಿಳಾ ಘಟಕದ ಅಧ್ಯಕ್ಷೆ ಮಂಜುಭಾರ್ಗವಿ, ವಿಜಯಲಕ್ಷ್ಮಿ, ಸುನಂದಮೂರ್ತಿ, ಶಾರದ, ಚೈತ್ರ,ಚೌಡಪ್ಪ, ಮಂಜುನಾಥ್, ಎಚ್.ಮಂಜುನಾಥ್, ಎಚ್.ಶ್ರೀರಾಮಪ್ಪ, ಅಗ್ರಹಾರ ಶ್ರೀನಿವಾಸ ಉಪಸ್ಥಿತರಿದ್ದರು.
ಎಸ್.ಎನ್. ಜಲ್ಲಿ ಕ್ರಷರ್ ಸ್ಥಳ ಪರಿಶೀಲನೆ
ಟೇಕಲ್: ಬಂಗಾರಪೇಟೆ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಅವರ ಮಾಲೀಕತ್ವದಲ್ಲಿ ಟೇಕಲ್ ಗ್ರಾಪಂ ವ್ಯಾಪ್ತಿಯ ಬೆಟ್ಟಹಳ್ಳಿ ಹಾಗೂ ಮಾಕಾರಹಳ್ಳಿ ಮಧ್ಯೆ ನಡೆಯುತ್ತಿರುವ ಎಸ್.ಎನ್. ಜಲ್ಲಿ ಕ್ರಷರ್ನಿಂದ ಎರಡು ಗ್ರಾಮಗಳಿಗೆ ತೊಂದರೆಯಾಗುತ್ತಿದೆ ಎಂದು ಈ ಹಿಂದೆ ಕೋಲಾರಕ್ಕೆ ಭೇಟಿ ಕೊಟ್ಟ ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ವೈ. ಭಾಸ್ಕರ್ರಾವ್ ಅವರಿಗೆ ಬೆಟ್ಟಹಳ್ಳಿ ಗ್ರಾಮದ ಮುನಿಶೆಟ್ಟಿ ಅವರು ದೂರು ನೀಡಿದ್ದರು. ನ್ಯಾಯಮೂರ್ತಿಗಳ ಸೂಚನೆ ಮೇರೆಗೆ ಮಾಲೂರು ತಹಸೀಲ್ದಾರ್ ನಾಗರಾಜ್ ಅವರು ಸ್ಥಳ ಪರಿಶೀಲನೆ ನಡೆಸಿದರು. ಈ ವಿಷಯದಲ್ಲಿ ಹಲವು ಬಾರಿ ಸ್ಥಳೀಯರಿಗೆ ಕೆಲವರು ಬೆದರಿಕೆ ಹಾಕಿದ್ದೂ ಉಂಟು. ಇದರಿಂದ ಜನ ದಿಗ್ಭ್ರಾಂತರಾಗಿದ್ದು, ಭಯಭೀತರಾಗಿದ್ದಾರೆ. ನಮಗೆ ಲೋಕಾಯುಕ್ತ ನ್ಯಾಯಮೂರ್ತಿಗಳು ನ್ಯಾಯ ಕೊಡಿಸುತ್ತಾರೆ ಎಂಬುದಾಗಿ 'ಕನ್ನಡಪ್ರಭ'ಕ್ಕೆ ತಿಳಿಸಿದರು. ಈ ಸಂದರ್ಭದಲ್ಲಿ ಟೇಕಲ್ ಗ್ರಾಪಂ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ನಾರಾಯಣಸ್ವಾಮಿ, ದೂರುದಾರ ಮುನಿಶೆಟ್ಟಿ, ಸದಸ್ಯ ವೆಂಕಟೇಶಪ್ಪ, ಕಂದಾಯ ಇಲಾಖೆಯ ರೆವೆನ್ಯೂ ಅಧಿಕಾರಿ ಶ್ರೀಪತಿ, ಗ್ರಾಮ ಲೆಕ್ಕಿಗರಾದ ನಾಗರಾಜ್, ರಘು ಮತ್ತು ಗ್ರಾಮಸ್ಥರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

