ಮೀಸಲಾತಿ ಪ್ರಕಟ
ಕೋಲಾರ: ಸ್ಥಳೀಯ ನಗರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸರ್ಕಾರ ಮೀಸಲಾತಿ ಪ್ರಕಟಿಸಿದ್ದು, ಅಧ್ಯಕ್ಷ ಸಾಮಾನ್ಯ ವರ್ಗಕ್ಕೆ ಹಾಗೂ ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗದ ಮಹಿಳೆಗೆ ನಿಗದಿಯಾಗಿದೆ.
ಕೋಲಾರ ನಗರಸಭೆಯ 35 ಸದಸ್ಯರ ಪೈಕಿ ಜೆಡಿಎಸ್ನ 17, ಜೆಡಿಎಸ್ ಬೆಂಬಲಿತ ಸಿಪಿಐಎಂ 1, ಕಾಂಗ್ರೆಸ್ 8 ಹಾಗೂ ಶಾಸಕ ವರ್ತೂರ್ ಬಣ ಸೇರಿ ಒಟ್ಟು 9 ಮಂದಿ ಪಕ್ಷೇತರರು ಇದ್ದಾರೆ.
ಬಹುಮತಕ್ಕೆ 18 ಸದಸ್ಯರ ಬೆಂಬಲ ಬೇಕಾಗಿದ್ದು, ಜೆಡಿಎಸ್ ಮತ್ತು ಸಿಪಿಐಎಂ ಸೇರಿ ಆಡಳಿತ ನಡೆಸಲು ಅವಕಾಶವಿದೆಯಾದರೂ ಕಾಂಗ್ರೆಸ್ ಮತ್ತು ಪಕ್ಷೇತರರು ಒಗ್ಗೂಡಿದಲ್ಲಿ ನಗರಸಭೆಯ ಚುಕ್ಕಾಣಿ ಯಾರಿಗೆ ಲಭಿಸುತ್ತದೆ ಎಂದು ತಿಳಿಯುವುದು ಕಷ್ಟವಾಗಬಹುದು. ಜೆಡಿಎಸ್ನಿಂದ ಹಿರಿಯ ಸದಸ್ಯರಾದ 12ನೇ ವಾರ್ಡಿನ ಜೆಡಿಎಸ್ ಸದಸ್ಯ ರವೀಂದ್ರ ಹೆಸರು ಪ್ರಬಲವಾಗಿ ಕೇಳಿ ಬರುತ್ತಿದೆ. ಮತ್ತೊಬ್ಬ ಹಿರಿಯ ಸದಸ್ಯ ಮುರಳಿಗೌಡ ಪಕ್ಷದ ವರಿಷ್ಠರ ತೀರ್ಮಾನಕ್ಕೆ ಬದ್ಧವೆಂದು ಹೇಳಿದ್ದಾರೆ. ಸಿಪಿಐಎಂನ ಗಾಂಧಿನಗರ ನಾರಾಯಣಸ್ವಾಮಿ ಅವಕಾಶ ಸಿಕ್ಕಿದಲ್ಲಿ ಜವಾಬ್ದಾರಿ ನಿರ್ವಹಣೆಗೆ ಸಿದ್ಧವೆಂದು ಹೇಳಿದ್ದಾರೆ.
ಕಾಂಗ್ರೆಸ್ ನಾಯಕರು ಶಾಸಕ ವರ್ತೂರ್ ಪ್ರಕಾಶ್ ಬಣದ ಸದಸ್ಯರು ಹಾಗೂ ಪಕ್ಷೇತರರ ಜೊತೆ ರಾಜಿ ಮಾಡಿಕೊಂಡು ಅಧಿಕಾರ ಚುಕ್ಕಾಣಿ ಹಿಡಿಯಲು ತಂತ್ರಗಾರಿಕೆ ರೂಪಿಸುವರೇ ಇಲ್ಲವೇ ಜೆಡಿಎಸ್ಗೆ ಅಧಿಕಾರ ಬಿಟ್ಟುಕೊಡುವರೇ ಕಾದು ನೋಡಬೇಕಾಗಿದೆ.
ಭತ್ಯೆ ನೀಡುವಂತೆ ಮನವಿ
ಚಿಂತಾಮಣಿ: ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಸಂಬಂಧ ನೇಮಕಾತಿ ಮಾಡಿಕೊಂಡಿರುವ ನಿರ್ದಿಷ್ಠಾಧಿಕಾರಿಗಳಿಗೆ ಕಾರ್ಯನಿರ್ವಹಿಸಿದ ಭತ್ಯೆವನ್ನು ನೀಡಬೇಕೆಂದು ಹಲವಾರು ಶಿಕ್ಷಕರು ತಾಲೂಕು ದಂಡಾಧಿಕಾರಿ ಎಂ.ಎನ್. ಮಂಜುನಾಥ್ಗೆ ಮನವಿ ನೀಡಿದರು.
ಈ ಸಂದರ್ಭದಲ್ಲಿ ಶಿಕ್ಷಕರಾದ ಆರ್. ಅಶೋಕ್ಕುಮಾರ್, ಮರಬಹಳ್ಳಿ ರಮೇಶ್,ಶ್ರೀನಿವಾಸರೆಡ್ಡಿ, ರಾಮರೆಡ್ಡಿ, ವೆಂಕಟರೆಡ್ಡಿ, ಮುನಿರಾಜು, ಅಶ್ವಥ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

