ಕೋಲಾರ

ಸಹಾಯಧನ ಬಿಡುಗಡೆ ವಿಳಂಬದಿಂದ ನಷ್ಟ: ತಮ್ಮೇಗೌಡ

Published On :

ಚಿಕ್ಕಬಳ್ಳಾಪುರ: ಬಂಡವಾಳ ಹೂಡಿಕೆ ಜಾಸ್ತಿಯಾದರೂ ಸಹ ಸರ್ಕಾರ ಸಮರ್ಪಕವಾಗಿ ಕಮೀಷನ್ ಹೆಚ್ಚಳ ಮಾಡದಿರುವುದರ ಜತೆಗೆ ಸಹಾಯಧನ ಬಿಡುಗಡೆಗೆ ವಿಳಂಬ ನೀತಿ ಅನುಸರಿಸುತ್ತಿರುವುದರಿಂದ ದುಬಾರಿಯಾಗುತ್ತಿರುವ ಬಡ್ಡಿ ಹೊರೆಯಿಂದ ಸಂಘಕ್ಕೆ ತನಷ್ಟ ಉಂಟಾಗುತ್ತಿದೆ ಎಂದು ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷ ಕೆ.ಎಚ್. ತಮ್ಮೇಗೌಡ ಅಳಲು ತೋಡಿಕೊಂಡರು.
ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘವು ಷೇರಿನ ಮೂಲಕ ಸಂಗ್ರಹಿಸಿದ ಬಂಡವಾಳದ ಹಣವನ್ನು ಹೂಡಿ ನ್ಯಾಯಬೆಲೆ ಅಂಗಡಿಗಳಿಗೆ ಪಡಿತರ ಪದಾರ್ಥಗಳನ್ನು ರಿಯಾಯಿತಿ ದರದಲ್ಲಿ ನೀಡುತ್ತಿದ್ದು ಸಂಘಕ್ಕೆ ಸರ್ಕಾರ ಸಬ್ಸಿಡಿ ಹಣವನ್ನು ನೀಡುತ್ತ ಬಂದಿದೆ. ಆದರೆ, ಈ ಹಿಂದೆ ಲಾಭವನ್ನು ಗಳಿಸುತ್ತಿದ್ದ ಸಂಘವು ಇದೀಗ ಅನ್ನಭಾಗ್ಯ ಯೋಜನೆ ಬಂದಾಗಿನಿಂದ ನಷ್ಟವನ್ನು ಅನುಭವಿಸುತ್ತಿದೆ. ಇದಕ್ಕೆ ಸರ್ಕಾರ ಅನುಸರಿಸುತ್ತಿರುವ ಅವೈಜ್ಞಾನಿಕ ವಿಧಾನವೇ ಕಾರಣವಾಗಿದೆ ಎಂದರು. ಈಗಾಗಲೇ ಶಿಡ್ಲಘಟ್ಟದಲ್ಲಿ ಸಂಘವನ್ನು ಮಾರಾಟ ಮಾಡಲಾಗಿದೆ. ಅದೇ ರೀತಿ ಗೌರಿಬಿದನೂರು, ಗುಡಿಬಂಡೆ, ಚಿಕ್ಕಬಳ್ಳಾಪುರ, ಬಾಗೇಪಲ್ಲಿಯಲ್ಲೂ ಸಂಘ ದಿವಾಳಿಯಾಗುವ ಲಕ್ಷಣಗಳು ದಟ್ಟವಾಗಿ ಕಂಡು ಬರುತ್ತಿದೆ ಎಂದ ಅವರು, ಈಗಾಗಲೇ ಆಹಾರ, ನಾಗರಿಕ ಸರಬರಾಜು ಸಚಿವ ದಿನೇಶ್ ಗುಂಡೂರಾವ್ ಅವರ ಗಮನಕ್ಕೆ ತಂದು ವ್ಯವಸಾಯೋತ್ಪನ್ನಗಳ ಮಾರಾಟ ಸಹಕಾರ ಸಂಘಗಳ ಉಳಿವಿಗೆ ದಿಟ್ಟ ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸಲಾಗಿದೆ ಎಂದು ತಿಳಿಸಿದರು. ಮೂರ್ನಾಲ್ಕು ತಿಂಗಳಿಗೊಮ್ಮೆ ಸಹಾಯ ಧನವನ್ನು ನೀಡುವುದರ ಬದಲು ಆಯಾ ತಿಂಗಳಲ್ಲಿಯೇ ಬಿಡುಗಡೆ ಮಾಡಬೇಕು. ಈ ಮೂಲಕ ಟಿಎಪಿಸಿಎಂ ಸಂಘಗಳನ್ನು ಉಳಿಸಬೇಕೆಂದು ಒತ್ತಾಯಿಸಿದರು. ನಿರ್ದೇಶಕರಾದ ಚದಲಪುರ ನಾರಾಯಣಸ್ವಾಮಿ, ಗೋವಿಂದಸ್ವಾಮಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.