ಕೋಲಾರ

ಬೆಟ್ಟಿಂಗ್, ಮಟ್ಕಾಗೆ ಪೊಲೀಸರ ಕುಮ್ಮಕ್ಕು

Published On :

ಚಿಂತಾಮಣಿ: ಪಟ್ಟಣದಲ್ಲಿ ಕ್ರಿಕೆಟ್ ಬೆಟ್ಟಿಂಗ್ ಹಾಗೂ ಮಟ್ಕಾ ದಂಧೆ ರಾಜಾರೋಷವಾಗಿ ನಡೆಯುತ್ತಿದ್ದರೂ ಸ್ಥಳೀಯ ಪೊಲೀಸ್ ಅಧಿಕಾರಿಗಳ ಕುಮ್ಮಕ್ಕಿನಿಂದ ಮುಗ್ಧ ಜನರ ಕುಟುಂಬಗಳು ಬೀದಿ ಪಾಲಾಗುತ್ತಿವೆಯೆಂದು ಜಯ ಕರ್ನಾಟಕ ಸಂಘಟನೆಯ ಮಹಿಳಾ ವಿಭಾಗದ ತಾಲೂಕು ಅಧ್ಯಕ್ಷೆ ಆರ್.ರತ್ನಮ್ಮ ಆರೋಪ ವ್ಯಕ್ತಪಡಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಚಿಂತಾಮಣಿ ತಾಲೂಕಿನಾದ್ಯಂತ ಕ್ರಿಕೆಟ್ ಬೆಟ್ಟಿಂಗ್ ಹಾಗೂ ಮಟ್ಕಾ ಜೂಜು ಹಾವಳಿ ದಿನೇ ದಿನೆ ಹೆಚ್ಚಾಗುತ್ತಿದ್ದರೂ ಸ್ಥಳೀಯ ಪೊಲೀಸ್ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕಂಡು ಕಾಣದಂತೆ ನಡೆದುಕೊಳ್ಳುತ್ತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆಯೆಂದು ಸಂಘಟನೆಯ ಪದಾಧಿಕಾರಿಗಳು ಆರೋಪಿಸಿದ್ದಾರೆ. ತಾಲೂಕು ಅಧ್ಯಕ್ಷೆ ಆರ್.ರತ್ನಮ್ಮ ನೀಡಿರುವ ಪತ್ರಿಕಾ ಹೇಳಿಕೆಯಲ್ಲಿ ನಿತ್ಯ ಕೂಲಿ ಮಾಡಿ ಬಂದಂತಹ ಶ್ರಮದ ಹಣವನ್ನು ಹೆಂಡತಿ ಮಕ್ಕಳ ಪೋಷಣೆಗೆ ಉಪಯೋಗಿಸದೆ ಮಟ್ಕಾ ಧಂದೆಗೆ ಸುರಿಯುತ್ತಿದ್ದಾರೆ. ಬಡಜನರಿಗೆ ಹಣದ ಆಮಿಷ ತೋರಿಸಿ ದುಡಿದ ಹಣವನ್ನೆಲ್ಲಾ ಜೂಜಿಗೆ ಸುರಿದು ಜೇಬು ಖಾಲಿ ಮಾಡಿಕೊಂಡು, ಬರಿ ಕೈಯಲ್ಲಿ ಮನೆಗೆ ಬರುತ್ತಾರೆ. ಇದರಿಂದ ಅನೇಕ ಸಂಸಾರಗಳು ಹಾಳಾಗುತ್ತಿವೆ ಎಂದು ಆರೋಪಿಸಿದ್ದಾರೆ.
ಪಟ್ಟಣದ ಕುಂಟಿಗಡ್ಡೆ ಬಳಿ ಇರುವ ಕೇಶಿವ ಮತ್ತು ಎನ್.ಎನ್.ಟಿ ಬಳಿ ಇರುವ ಅಲ್ಲು ಸೇರಿದಂತೆ ಇತರರ ಬೆಂಗಾವಿನಲ್ಲಿ ದಿನನಿತ್ಯ ಲಕ್ಷಾಂತರ ರು. ವಹಿವಾಟು ಚಿಂತಾಮಣಿಯಲ್ಲಿ ನಡೆಯುತ್ತಿದ್ದರೂ ಇವರ ಧಂದೆಗೆ ಕಡಿವಾಣ ಹಾಕಲು ಪೊಲೀಸರಿಗೆ ರಾಜಕೀಯ ಒತ್ತಡ, ಇಲ್ಲವಾದರೆ ತಿಂಗಳ ನೋಟಿನ ಕಂತೆ ಇರುಬಹುದೆಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ.
ಇನ್ನು ಕ್ರಿಕೆಟ್ ಬೆಟ್ಟಿಂಗ್‌ನಿಂದ ಚಿಂತಾಮಣಿಯಲ್ಲಿ ಇದುವರೆಗೆ ಅದೆಷ್ಟೋ ಆತ್ಮಹತ್ಯೆಗಳು ನಡೆದಿವೆ. ವಿದ್ಯಾರ್ಥಿಗಳು ಕಾಲೇಜಿಗೆ ಫೀಸ್ ಕಟ್ಟದೆ ಬೆಟ್ಟಿಂಗ್‌ನಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ ಎಂದು ಸಂಘಟನೆಯ ಮಹಿಳಾ ಸಂಘಟನೆಯ ಪದಾಧಿಕಾರಿಗಳಾದ ಲಕ್ಷ್ಮಿ ನರಸ, ಮಂಜುಳ, ಜಬೀನಾ ಇತರರು ಆರೋಪಿಸಿದ್ದಾರೆ.
ಸ್ಥಳೀಯ ಶಾಸಕರು ಹಾಗೂ ಪೊಲೀಸ್ ಉನ್ನತ ಅಧಿಕಾರಿಗಳು ಇತ್ತ ಗಮನ ಹರಿಸಿ ಸಮಾಜಘಾತಕ ಶಕ್ತಿಗಳಿಗೆ ಕಡಿವಾಣ ಹಾಕಿ ಜನಸಾಮಾನ್ಯರಿಗೆ ನೆಮ್ಮದಿ ಜೀವನ ನಡೆಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಇದರ ವಿರುದ್ಧ ಉಗ್ರ ಹೋರಾಟವನ್ನು ನಡೆಸಲಾಗುವುದೆಂದು ಎಚ್ಚರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.