ಕೋಲಾರ

ಶಿಕ್ಷಕರ ಕೊರತೆ ವಿರುದ್ಧ ವಿದ್ಯಾರ್ಥಿಗಳು, ಪಾಲಕರ ಪ್ರತಿಭಟನೆ

Published On :

ಕ.ಪ್ರ.ವಾರ್ತೆ ಮುಳಬಾಗಲು ಆ.27
ಪಟ್ಟಣದ ಶಿವಕೇಶವನಗರದಲ್ಲಿರುವ ಆದರ್ಶ ಆಂಗ್ಲ ಶಾಲೆಗೆ ಶಿಕ್ಷಕರಿಲ್ಲದೆ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಕುಂದುಂಟಾಗಿದೆ ಎಂದು ಆರೋಪಿಸಿ ಶಾಲೆಯ ಮಕ್ಕಳು ಮತ್ತು ಪಾಲಕರು ಮಂಗಳವಾರ ಶಾಲೆಗೆ ಬೀಗ ಜಡಿದರು. ನಂತರ ಮೆರವಣಿಗೆಯಲ್ಲಿ ಬಂದು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ಶಾಲೆಯಲ್ಲಿ 6ರಿಂದ 9ನೇ ತರಗತಿವರೆಗೂ 320 ವಿದ್ಯಾರ್ಥಿಗಳಿದ್ದಾರೆ. ಇವರುಗಳು ಕೇಂದ್ರ ಮತ್ತು ರಾಜ್ಯ ಸರ್ಕಾರ ಸಂಯುಕ್ತ ಆಶ್ರಯದಲ್ಲಿ 5ನೇ ತರಗತಿಯ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಿ ಹೆಚ್ಚಿನ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಲಾಗುತ್ತದೆ. ಇವರೆಲ್ಲರೂ ಪ್ರತಿಭಾವಂತ ಮಕ್ಕಳು, ಶಾಲೆಗೆ ಕನಿಷ್ಠ 12 ಶಿಕ್ಷಕರ ಅವಶ್ಯಕತೆ ಇದೆ. ಆದರೆ ಇರುವುದು ಬರಿ 4 ಶಿಕ್ಷಕರು ಮಾತ್ರ. ಇದರಿಂದ ಪಾಠ ಪ್ರವಚನಗಳಿಗೆ ಹಿನ್ನಡೆಯಾಗಿದೆ.
ಈಗಾಗಲೇ ಒಂದು ಕಿರು ಪರೀಕ್ಷೆಯನ್ನು ವಿದ್ಯಾರ್ಥಿಗಳು ಯಾವುದೇ ಪಾಠ ನಡೆಯದೇ ಮಾಡಿದ್ದರೇ, ಮತ್ತೊಂದು ಕಿರು ಪರೀಕ್ಷೆಗೆ ಹಾಜರಾಗಬೇಕಾಗಿದ್ದು, ಮುಂದಿನ ತಿಂಗಳಲ್ಲಿ ಮಧ್ಯಂತರ ಪರೀಕ್ಷೆಗಳು ನಡೆಯಲಿವೆ. ಇವೆಲ್ಲದರ ನಡುವೆ ಪಾಠಗಳೇ ನಡೆಯದೇ ಪರೀಕ್ಷೆಗಳ ಹೇಗೆ ಎದುರಿಸಬೇಕು ಎಂಬುದು ಮಕ್ಕಳು ಮತ್ತು ಪಾಲಕರ ಪ್ರಶ್ನೆಯಾಗಿದೆ. ಈ ಸಂಬಂಧ ಕಳೆದ ತಿಂಗಳು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಮುಂದೆ ಪ್ರತಿಭಟನೆ ನಡೆಸಲಾಯಿತು. ಆದರೆ ಫಲಿತಾಂಶ ಶೂನ್ಯವಾಗಿದೆ ಎಂದು ಪಾಲಕ ರಣಬೇರಮ್ಮ ದೇವಾಲಯ ಬೀದಿ ವಾಸಿ ಶ್ರೀನಿವಾಸ್ ಹೇಳುತ್ತಾರೆ. ಶಿಕ್ಷಣ ಇಲಾಖೆ ಸರಿಯಾಗಿ ಸ್ಪಂದಿಸಿದ್ದರೆ ಶಿಕ್ಷಕರ ನೇಮಕ ಕಷ್ಟವಾಗುತ್ತಿರಲಿಲ್ಲ ಎಂಬುದು ಕುಂಬಾರಪೇಟೆಯ ಎಚ್.ಎ. ಮೂರ್ತಿಯವರ ಅಭಿಪ್ರಾಯ.
ಒಟ್ಟಾರೇ ಬೇರೆ ಕಡೆಯಿಂದ ಮಕ್ಕಳನ್ನು ಇಲ್ಲಿಗೆ ಸೇರಿಸಿ ತಪ್ಪು ಮಾಡಿದುದಾಗಿ ಪಾಲಕರು ದೂರಿದರು. ಕ್ಷೇತ್ರಶಿಕ್ಷಣಾಧಿಕಾರಿಗಳು ಮನವಿ ಪತ್ರ ಪಡೆದು ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ ನಂತರ ಪ್ರತಿಭಟನೆ ನಿಲ್ಲಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.