'ಸಾಹಿತ್ಯ ಅಧ್ಯಯನದಿಂದ ಕಲೆ, ಸಂಸ್ಕೃತಿ ಪರಿಚಯ'
ಚಿಕ್ಕಬಳ್ಳಾಪುರ: ಸಾಹಿತ್ಯದ ಅಧ್ಯಯನದಿಂದ ಕಲೆ, ಸಂಸ್ಕೃತಿಯ ಪರಿಚಯವಾಗುತ್ತದೆ. ಅಲ್ಲದೆ ಒಳ್ಳೆಯ ಪ್ರಜೆಯಾಗಿ ರೂಪುಗೊಳ್ಳುವಂತೆ ಮಾಡುತ್ತದೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ವಿ.ಧನಮ್ಮ ತಿಳಿಸಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಏರ್ಪಡಿಸಿದ್ದ ಸಾಹಿತ್ಯ ಕೂಟದ ಉದ್ಘಾಟನಾ ಸಮಾರಂಭ ಹಾಗೂ ಪ್ರಥಮ ವರ್ಷದ ಐಚ್ಚಿಕ ಕನ್ನಡ ವಿದ್ಯಾರ್ಥಿಗಳ ಸ್ವಾಗತ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳಾ ಕಾಲೇಜು ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ. ನರಸಿಂಹಮೂರ್ತಿ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಓದು ಬಹಳ ಮುಖ್ಯವಾದ ತಿರುವು. ಇದನ್ನರಿತುಕೊಂಡು ಗುರಿ ಸಾಧನೆಗೆ ವಿದ್ಯಾರ್ಥಿಗಳು ಶ್ರಮಿಸಬೇಕು. ನದಿಯಂತೆ ಸದಾ ಚಲನಾ ಶಕ್ತಿಯನ್ನು ಹೊಂದಿರಬೇಕು. ಆದರೆ, ಗುರಿಯೆಂಬ ಸಾಗರದಲ್ಲಿ ಈಜುವಾಗ ಅನೇಕ ಅಡೆತಡೆಗಳು ಅಲೆ ಅಲೆಗಳಾಗಿ ಬರುತ್ತವೆ. ಇವುಗಳೆನ್ನೆಲ್ಲಾ ದಾಟಿಕೊಂಡು ಮುಂದೆ ಹೋದಾಗ ಖಂಡಿತ ಸಾಧಕರಾಗುತ್ತೇವೆ ಎಂದರು.
ಕನ್ನಡ ವಿಭಾಗದ ಮುಖ್ಯಸ್ಥ ರವಿಕುಮಾರ್ ಮಾತನಾಡಿ, ಸಾಹಿತ್ಯದ ಆಳ ಸಾಗರದ ಆಳವನ್ನು ಬಲ್ಲವರುಂಟೆ, ಸಾಹಿತ್ಯವನ್ನು ಅರಿಯಲು ಸಾಗರದ ಮೀನುಗಳಂತೆ ತೇಲಿ ಮುಳುಗಿದರೆ ತಿರುಳನ್ನು ಅರಿಯಲು ಸಾಧ್ಯ, ಸಾಹಿತ್ಯ ಅಧ್ಯಯನದಿಂದ ಇತಿಹಾಸದ ಮಹತ್ವವನ್ನು ತಿಳಿಯಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕ ಚೇತನ, ರಾಮಕೃಷ್ಣ, ಚಂದ್ರಯ್ಯ ಜಿ.ಡಿ, ಕಲ್ಯಾಣರಾಜು, ತಾಜುನ್ನೀಸ, ಸದಾಶಿವ ಮುಂತಾದವರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

