ಮಾಲೂರು ಸ್ಮಶಾನ ಭೂ ಒತ್ತುವರಿ; ಶಾಸಕರ ವರಿ
ಬಂಗಾರಪೇಟೆ: ಕ್ಷೇತ್ರದ ಬಹುತೇಕ ಗ್ರಾಮಗಳಲ್ಲಿ ಸ್ಮಶಾನ ಭೂಮಿಯನ್ನು ಒತ್ತುವರಿ ಮಾಡಿಕೊಂಡಿರುವುದರಿಂದ ಹೆಣಗಳನ್ನು ಶವಸಂಸ್ಕಾರಕ್ಕೆ ಸ್ಥಳಾವಕಾಶ ಇಲ್ಲದೆ ಗ್ರಾಮಸ್ಥರು ಹೆಣಗಾಡುತ್ತಿರುವುದರಿಂದ ತಹಸೀಲ್ದಾರ್ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿ ಅವರು ಸರ್ವೆ ಮಾಡಿ ತೆರವುಗೊಳಿಸುವರು ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳಿದರು.
ಗ್ರಾಮಸ್ಥರು ಸಮಸ್ಯೆಗಳನ್ನು ಹೊತ್ತು ಪಟ್ಟಣದ ಸರ್ಕಾರಿ ಕಚೇರಿಗಳಿಗೆ ವಿನಾಕಾರಣ ಅಲೆಯುವುದನ್ನು ತಪ್ಪಿಸಲು ಹಿಂದಿನ ಸರ್ಕಾರ ಹೋಬಳಿ ಮಟ್ಟದಲ್ಲಿ ಜನಸ್ಪಂದನ ಹೆಸರಲ್ಲಿ ಕಾರ್ಯಕ್ರಮ ರೂಪಿಸಿದರು. ಮೊದಲಿಗೆ ಯಶಸ್ವಿಯಾಯಿತು ನಂತರ ಕಾರ್ಯಕ್ರಮವನ್ನೇ ಕ್ಷೇತ್ರದಲ್ಲಿ ಸ್ಥಗಿತಗೊಳಿಸಿದ್ದರು. ಎರಡು ವರ್ಷಗಳ ಬಳಿಕ ಕಾರಹಳ್ಳಿ ಪಂಚಾಯ್ತಿಯಲ್ಲಿ ತಾಲೂಕು ಆಡಳಿತ ಜನಸ್ಪಂದನ ಆಯೋಜಿಸಿದ್ದ ಗ್ರಾಮಸ್ಥರಲ್ಲಿ ಅಚ್ಚರಿ ಮೂಡಿಸಿತು. ಆದರೆ ಸಮಸ್ಯೆಗಳ ಬಗ್ಗೆ ಸುಮಾರು 300ಕ್ಕೂ ಹೆಚ್ಚು ಅರ್ಜಿಗಳು ಬಂದವು, ಇವುಗಳಲ್ಲಿ ಸ್ಮಶಾನ ಜಾಗ ಒತ್ತುವರಿ, ಕುಡಿಯುವ ನೀರಿನ ಸಮಸ್ಯೆ ಮತ್ತು ಆಶ್ರಯ ಮನೆಗಳದ್ದೇ ಹೆಚ್ಚು ದೂರುಗಳ ಬಂದವು. ಅರ್ಜಿಗಳನ್ನು ಸ್ವಿಕರಿಸಿ ಶಾಸಕ ಎಸ್.ಎನ್. ನಾರಾಯಣಸ್ವಾಮಿ ತಾವು ಹೋದ ಕಡೆಯಲ್ಲಾ ಸ್ಮಶಾನ ಜಾಗ ಒತ್ತುವರಿಯಾಗಿರುವ ಬಗ್ಗೆ ವ್ಯಾಪಕ ದೂರುಗಳ ಬಂದಿವೆ ಈ ಹಿನ್ನೆಲಯಲ್ಲಿ ತಹಸೀಲ್ದಾರ್ ಉಷಾ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿ ಗ್ರಾಮಸ್ಥರಿಗೆ ಅನುಕೂಲ ಮಾಡಿಕೊಡುವುದಾಗಿ ತಿಳಿಸಿದರು.ಇನ್ನು ಆಶ್ರಯ ಮನೆಗಳು ಕೊಡುವುದಾಗಿ ಹಿಂದಿನ ಶಾಸಕರು ಅರ್ಜಿಗಳನ್ನು ಪಡೆದು ಹೋದವರು ಮತ್ತೆ ಇತ್ತ ಕಡೆ ಬರಲೇ ಇಲ್ಲ ನೆತ್ತಿನ ಮೇಲೆ ಸೂರಿಲ್ಲದೆ ಅವ್ಯವಸ್ಥೆಯಲ್ಲಿ ಜೀವ ಸಾಗಿಸಲಾಗುತ್ತಿದೆ ಸ್ವಾಮಿ ನೀವಾದರು ಬಡವರಿಗೆ ಸೂರು ಕೊಟ್ಟು ಪುಣ್ಯ ಕಟ್ಟಿಕೊಳ್ಳಿ ಎಂದು ಪರಿಪರಿಯಾಗಿ ಬೇಡಿಕೊಂಡರು. ಕೆಲವು ನ್ಯಾಯಬೆಲೆ ಅಂಗಡಿಗಳಲ್ಲಿ ಅನ್ನಭಾಗ್ಯ ಯೋಜನೆಯನ್ನು ಪಡೆಯಲು ಅಕ್ಕಿ ಜೊತೆ ಎಣ್ಣೆ, ಸಾಬೂನ್ ಮತ್ತಿತರ ವಸ್ತುಗಳನ್ನು ಬಲವಂತವಾಗಿ ಕೊಡುತ್ತಿದ್ದಾರೆ. ಇದನ್ನು ನಿಂತ್ರಿಸಬೇಕು ಎಂದು ಕೆಲವರು ಶಾಸಕರ ಗಮನಕ್ಕೆ ದೂರಿತ್ತರೂ ಅಷ್ಟಾಗಿ ಶಾಸಕರು ಸ್ಪಂದಿಸಿಲ್ಲ. ಸಭೆಯಲ್ಲಿ ತಾಪಂ ಅಧ್ಯಕ್ಷ ರೇಣುಕಾ,ಉಪಾಧ್ಯಕ್ಷ ಸಂಪಂಗಿರೆಡ್ಡಿ, ಗ್ರಾಮ ಪಂ-ಅಧ್ಯಕ್ಷೆ ಶಾರದ ಶ್ರೀನಿವಾಸ್, ಜಿಪಂ ಸದಸ್ಯ ಎಂ.ಎಸ್. ಆನಂದ್, ತಿಮ್ಮಾಪುರ ಕೃಷ್ಣಮೂರ್ತಿ,ಪ್ರತಾಪ್ ಇಒ ಜಗದೀಶ್, ತಹಸೀಲ್ದಾರ್ ಉಪಾ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

